Ad Widget .

ಅಪಘಾತ; ನಟಿ ಸುನೇತ್ರಾ ಜಖಂ| ಹೆಲ್ಮೆಟ್ ನಿಂದ ಬಚಾವಾದ ಸ್ಯಾಂಡಲ್ ವುಡ್ ಅಭಿನೇತ್ರಿ

ಸಮಗ್ರ ನ್ಯೂಸ್: ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ನಟಿ ಹಾಗೂ ಡಬ್ಬಿಂಗ್ ಕಲಾವಿದೆ ಸುನೇತ್ರಾ ಬೈಕ್‌ಗೆ ಅಪಘಾತವಾಗಿದ್ದು, ತಲೆಗೆ ಪೆಟ್ಟು ಬಿದ್ದಿದೆ. ಆದರೆ, ತಲೆಗೆ ಹೆಲ್ಮೆಟ್ ಹಾಕಿದ್ದರಿಂದ ಆಪಾಯದಿಂದ ಪಾರಾಗಿದ್ದಾರೆ.

Ad Widget . Ad Widget .

ಬಸವನಗುಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 12: 30ರ ಸುಮಾರಿಗೆ ಈ ಘಟನೆ ನಡೆದಿದ್ದು, ರಸ್ತೆ ಹಂಪ್ ದಾಟುವಾಗ ಬೈಕ್‌ನಿಂದ ಆಯತಪ್ಪಿ ಬಿದ್ದು ಸುನೇತ್ರಾ ಗಾಯಗೊಂಡಿದ್ದಾರೆ.

Ad Widget . Ad Widget .

ಎನ್ ಆರ್ ಕಾಲೋನಿಯ 9ನೇ ಮುಖ್ಯ ರಸ್ತೆಯಲ್ಲಿ ಹಾಸ್ಯ ನಟಿ ಸುನೇತ್ರಾ, ತಮ್ಮ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆ ಮೂಲೆಯಲ್ಲಿ ಹಂಪ್ ಎದುರಾಗಿದೆ. ಹಂಪ್ ಹಾರಿಸಿದ ಬಳಿಕ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಸುನೇತ್ರಾ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಸುನೇತ್ರಾರನ್ನು ತಕ್ಷಣವೇ ರಕ್ಷಿಸಿದ ಸ್ಥಳೀಯರು ಸಮೀಪದ ಬಿಎಂಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಅವೈಜ್ಞಾನಿಕ ಹಂಪ್ ಕಾಣದೆ ಬೈಕ್ ಜಂಪ್ ಆಗಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.

Leave a Comment

Your email address will not be published. Required fields are marked *