ಸಮಗ್ರ ನ್ಯೂಸ್: ನಿದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಮನುಷ್ಯನಿಗೆ ಪ್ರತಿನಿತ್ಯ ಕನಿಷ್ಠ 7-8 ಗಂಟೆಗಳ ನಿದ್ದೆ ಅತ್ಯಂತ ಅವಶ್ಯಕವಾದದ್ದು, ಇದಕ್ಕಿಂತ ಕಡಿಮೆ ನಿದ್ದೆ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಂತ ಇದಕ್ಕಿಂತ ಜಾಸ್ತಿ ನಿದ್ದೆ ಮಾಡೋದು ಕೂಡ ಅಪಾಯಕಾರಿಯೇ.
ಹೌದು, ಅತಿಯಾದ ನಿದ್ದೆ ಕೆಲವೊಂದು ರೋಗಗಳಿಗೆ ದಾರಿ ಮಾಡಿ ಕೊಟ್ಟಂತಾಗುತ್ತದೆ. ಹೆಚ್ಚು ನಿದ್ರೆ ಮಾಡುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಕೂಡ ಇದೆ.
24 ಗಂಟೆಗಳಲ್ಲಿ ಕನಿಷ್ಠ 12 ರಿಂದ 15 ಗಂಟೆಗಳ ಕಾಲ ನಿದ್ದೆ ಮಾಡುವ ಈ ಅಭ್ಯಾಸ ಬಿಡಬೇಕು. ನೀವು ಮಲಗಿದಾಗ ದೇಹವು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ಈ ಸಮಯದಲ್ಲಿ ದೇಹವು ಯಾವುದೇ ದೈಹಿಕ ಕೆಲಸವನ್ನು ಮಾಡುವುದಿಲ್ಲ. ಇದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಅತಿ ಹೆಚ್ಚು ಇದೆ.
ಅತಿಯಾಗಿ ನಿದ್ರಿಸಿದ್ರೆ ಮೆದುಳು ಕೂಡ ಹೆಚ್ಚು ಕೆಲಸ ಮಾಡುವುದಿಲ್ಲ. ಇದರಿಂದ ಉದ್ವೇಗ ಹೆಚ್ಚಾಗಬಹುದು. ವಿಶೇಷವಾಗಿ ಹಗಲಿನಲ್ಲಿ ಜಾಸ್ತಿ ನಿದ್ದೆ ಮಾಡುವುದಂತು ಆರೋಗ್ಯಕ್ಕೆ ಅತಿ ಹೆಚ್ಚು ಅಪಾಯಕಾರಿ. ಅಗತ್ಯಕ್ಕಿಂತ ಅಧಿಕ ಸಮಯ ನಿದ್ದೆ ಮಾಡುವುದರಿಂದ ಸಕ್ಕರೆ ಕಾಯಿಲೆ ಬರಬಹುದು. ಜೊತೆಗೆ ಹೃದಯಾಘಾತದ ಅಪಾಯ ಕೂಡ ಹೆಚ್ಚಾಗುತ್ತದೆ. ಅಲ್ಲದೇ ಮಲಬದ್ಧತೆಯ ಸಮಸ್ಯೆಯೂ ನಿಮ್ಮನ್ನು ಕಾಡುತ್ತದೆ. ದೀರ್ಘ ಸಮಯದವರೆಗೆ ಮಲಗಿಯೇ ಇರುವುದರಿಂದ ಬೆನ್ನು ನೋವು ಕೂಡ ಪ್ರಾರಂಭವಾಗುತ್ತದೆ.
ಹಾಗಾಗಿ ಕುಂಭಕರ್ಣನಂತೆ ಅತಿಯಾಗಿ ಮಲಗುವ ಅಭ್ಯಾಸವಿದ್ದರೆ ಬಿಟ್ಟುಬಿಡಿ. ಸರಿಯಾದ ನಿದ್ರೆ ಮಾಡಿ ಸದಾ ಲವಲವಿಕೆಯಿಂದಿರಿ.