Ad Widget .

ಹನುಮಾನ್ ಚಾಲೀಸಾ ಪಠಣ ಪ್ರಕರಣ| ರಾಣಾ ದಂಪತಿಗೆ ಜಾಮೀನು ನೀಡಿದ ವಿಶೇಷ ನ್ಯಾಯಾಲಯ

ಸಮಗ್ರ ನ್ಯೂಸ್: ಠಾಕ್ರೆ ನಿವಾಸ ಮಾತೋಶ್ರಿ ಎದುರಲ್ಲಿ ಹನುಮಾನ್‌ ಚಾಲೀಸಾ ಪಠಿಸುತ್ತೇವೆಂದು ಹೇಳಿದ ಕಾರಣಕ್ಕೆ ದೇಶದ್ರೋಹ ಸೇರಿದಂತೆ ವಿವಿಧ ಅರೋಪದ ಅಡಿಯಲ್ಲಿ ಬಂಧಿತ ರಾಗಿದ್ದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಸಂಸದೆಯಾಗಿರುವ ಅವರ ಪತ್ನಿ ನವನೀತ್‌ ರಾಣಾ ಅವರಿಗೆ ಮುಂಬೈ ವಿಶೇಷ ನ್ಯಾಯಾಲಯವು ಜಾಮೀನು ನೀಡಿದೆ.

Ad Widget . Ad Widget .

ಏಪ್ರಿಲ್‌ 23 ರಂದು ರಾಣಾ ದಂಪತಿಗಳನ್ನು ಬಂಧಿಸಿ ದೇಶದ್ರೋಹ, ಶಾಂತಿ ಸುವ್ಯವಸ್ಥೆಗೆ ಭಂಗ ತರುವುದು ಮುಂತಾದ ಆರೋಪಗಳನ್ನು ಹೊರಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು ಅವರನ್ನು ಮೇ 6ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಪ್ರಸ್ತುತ ಅವರಿಗೆ ಬಾಂಬೆ ವಿಶೇಷ ನ್ಯಾಯಾಲಯವು ಜಾಮೀನು ನೀಡಲು ಸಮ್ಮತಿಸಿದ್ದು 50,000 ರೂ.ಗಳ ಬಾಂಡ್‌ ಶ್ಯೂರಿಟಿಯೊಂದಿಗೆ ಜಾಮೀನು ನೀಡಿದೆ.

Ad Widget . Ad Widget .

Leave a Comment

Your email address will not be published. Required fields are marked *