Ad Widget .

ಮಂಗಳೂರು : ಬಾಲ್ ತರಲು ಮಹಡಿ ಮೇಲೇರಿದ್ದ ವಿದ್ಯಾರ್ಥಿ ಆಯತಪ್ಪಿ ಬಿದ್ದು ಸಾವು

ಸಮಗ್ರ ನ್ಯೂಸ್: ಮಂಗಳೂರು ನಗರದ ಕೊಟ್ಟಾರ ಚೌಕಿಯಲ್ಲಿರುವ ಖಾಸಗಿ ಕಾಲೇಜ್ ನ ಹಾಸ್ಟೆಲ್ ಕಟ್ಟಡದ ನಾಲ್ಕನೇ ಮಹಡಿಯಿಂದ ಆಯತಪ್ಪಿ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟ ದುರ್ಘಟನೆ ಬುಧವಾರ ಸಂಭವಿಸಿದೆ.

Ad Widget . Ad Widget .

ಪ್ರಣವ್ ಸ ಮುಂಡಾಸ ಎಂಬ 18 ವರ್ಷದ ವಿದ್ಯಾರ್ಥಿ ಮೃತ ದುರ್ದೈವಿಯಾಗಿದ್ದು, ವಿಜಯ ಪುರ ಮೂಲದ ವಿದ್ಯಾರ್ಥಿಯಾಗಿದ್ದಾನೆ.

Ad Widget . Ad Widget .

ಕ್ರಿಕೆಟ್ ಆಡುವ ವೇಳೆ 4 ನೇ ಮಹಡಿಯಲ್ಲಿ ಸಿಕ್ಕಿಕೊಂಡ ಚೆಂಡನ್ನು ತರಲು ಹೋದಾಗ ಆಯ ತಪ್ಪಿ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಪ್ರಣವ್ ನನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *