Ad Widget .

ಎಚ್ಚರಿಕೆ ನೀಡಿದರೂ ತಾಯಿಯೊಂದಿಗೆ ನಿಲ್ಲದ ಅನೈತಿಕ ಸಂಬಂಧ| ರೊಚ್ಚಿಗೆದ್ದ ಮಗಳಿಂದ ಆತನ ಪುರುಷತ್ವ ಹರಣ|

ಸಮಗ್ರ ನ್ಯೂಸ್: ತನ್ನ ತಾಯಿ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯ ಗುಪ್ತಾಂಗವನ್ನು ಆಕೆಯ ಮಗಳು ಕತ್ತರಿಸಿರುವ ಘಟನೆ ಆಂದ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ನಡೆದಿದೆ.

Ad Widget . Ad Widget .

ಬಾಪಟ್ಲಾ ಜಿಲ್ಲೆಯ ಚೆರುಕುಪಲ್ಲಿ ತಾಲೂಕಿನ ತುಮ್ಮಲಪಾಲಂ ಗ್ರಾಮದ ಎಸ್. ರಾಮಚಂದ್ರರೆಡ್ಡಿ ಎರಡು ವರ್ಷಗಳ ಹಿಂದೆ ತೆನಾಲಿಗೆ ಬಂದಿದ್ದರು. ಈತ ಐತಾನಗರದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ರೈಲ್ವೆ ನಿಲ್ದಾಣದ ಬಳಿಯ ಲಾಡ್ಜ್‌ ಬಳಿ ವಾಸವಿದ್ದ ಕಾರ್ಮಿಕ ರಾಮಚಂದ್ರರೆಡ್ಡಿ ಸೋಮವಾರ ರಾತ್ರಿ ಮದ್ಯ ಸೇವಿಸಿ ಮಹಿಳೆ ವಾಸವಿದ್ದ ಕಟ್ಟಡದಲ್ಲಿ ಮಲಗಿದ್ದ.

Ad Widget . Ad Widget .

ತನ್ನ ತಾಯಿಯೊಂದಿಗಿನ ವಿವಾಹೇತರ ಸಂಬಂಧದ ಬಗ್ಗೆ ಯಾವಾಗಲೂ ಕೋಪಗೊಂಡ ಮಗಳು ತನ್ನ ಪ್ರಿಯಕರನ ಜೊತೆ ಸೇರಿ ರಾಮಚಂದ್ರ ರೆಡ್ಡಿ ಜೊತೆ ಜಗಳವಾಡಿದ್ದಾಳೆ. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಯುವತಿ ತನ್ನ ಪ್ರಿಯಕರನ ಸಹಾಯ ಪಡೆದು ಬ್ಲೇಡ್​ನಿಂದ ರಾಮಚಂದ್ರ ರೆಡ್ಡಿಯ ಗುಪ್ತಾಂಗ ಕತ್ತರಿಸಿದ್ದಾಳೆ.

ಸಂತ್ರಸ್ತನ ಕೂಗು ಕೇಳಿದ ಸ್ಥಳೀಯರು ಗಾಯಾಳು ತೆನಾಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ಉತ್ತಮ ಚಿಕಿತ್ಸೆಗಾಗಿ ಗುಂಟೂರು ಜಿಜಿಎಚ್‌ಗೆ ರವಾನಿಸಲಾಯಿತು. ತೆನಾಲಿ ಟೂಟೌನ್ ಸಿಐ ಕೋಟೇಶ್ವರ ರಾವ್ ಆಸ್ಪತ್ರೆಗೆ ಬಂದು ಸಂತ್ರಸ್ತನಿಂದ ವಿವರ ಪಡೆದರು. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *