ಸಮಗ್ರ ನ್ಯೂಸ್: ಸಂಸತ್ ಕಲಾಪದ ವೇಳೆ ತನ್ನ ಫೋನ್ ನಲ್ಲಿ ನೀಲಿಚಿತ್ರ ವೀಕ್ಷಿಸಿದ ಆರೋಪದಲ್ಲಿ ಸಂಸದನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಘಟನೆ ಇಂಗ್ಲೆಂಡ್ ನಿಂದ ವರದಿಯಾಗಿದೆ.
ಇಂಗ್ಲೆಂಡ್ ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಕ್ಷದ ಸಂಸತ್ ಸದಸ್ಯರೊಬ್ಬರು ಹೌಸ್ ಆಫ್ ಕಾಮನ್ಸ್‌ನಲ್ಲಿ ಶನಿವಾರ ತನ್ನ ಫೋನ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ ವಿಚಾರ ವಿವಾದದ ಬಿರುಗಾಳಿ ಎಬ್ಬಿಸುತ್ತಿದ್ದಂತೆ ರಾಜೀನಾಮೆ ಸಲ್ಲಿಸಿದ್ದಾರೆ.
ಸಂಸತ್ತಿನಲ್ಲಿ ತಾನು ಫೋನ್ ನಲ್ಲಿ ಎರಡು ಬಾರಿ ಪೋರ್ನ್ ವಿಡಿಯೋ ನೋಡಿದ್ದಾಗಿ ಸಂಸದ ನೀಲ್ ಪ್ಯಾರಿಶ್ ಒಪ್ಪಿಕೊಂಡ ಬಳಿಕ ಕನ್ಸರ್ವೇಟಿವ್ ಪಕ್ಷ ಅವರನ್ನು ಪಕ್ಷದಿಂದಲೂ ಉಚ್ಛಾಟನೆ ಮಾಡಿದೆ.