ಸಮಗ್ರ ನ್ಯೂಸ್: ಪ್ರಧಾನಿಗಳ ಆಶಯದಂತೆ ವ್ಯಾಕ್ಸಿನ್ ನೀಡಿ ಶಾಲೆ ಆರಂಭಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ತುಮಕೂರು ಜಿಲ್ಲೆ ಶಿರಾ ನಗರದಲ್ಲಿ ಮಾತನಾಡಿದ ಅವರು, ವ್ಯಾಕ್ಸಿನ್ ಹಾಕಿರುವುದರಿಂದ ನಾಲ್ಕನೇ ಎದುರಿಸಲು ಅನುಕೂಲವಾಗಿದೆ. ಅದೇ ಧೈರ್ಯದ ಮೇಲೆ ಶಾಲೆಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಕೊರೊನಾ ನಾಲ್ಕನೇ ಅಲೆ ಇದ್ದರೂ ಶಾಲೆ ಆರಂಭದ ಬಗ್ಗೆ ಪೋಷಕರಲ್ಲಿ ಅನುಮಾನ ಪ್ರಾರಂಭವಾಗಿತ್ತು. ಸಚಿವರ ಈ ಹೇಳಿಕೆ ಮೇ ಎರಡನೆಯ ವಾರದ ಬಳಿಕ ಕರ್ನಾಟಕದಲ್ಲಿ ಶಾಲೆಗಳ ಪ್ರಾರಂಭ ಪಕ್ಕಾ ಅನ್ನುವಂತಾಗಿದೆ.