ಪುತ್ತೂರು: ಬಾವಿಗೆ ಬಿದ್ದು ಹಿಂಜಾವೇ ಕಾರ್ಯಕರ್ತ ಮೃತ್ಯು
ಸಮಗ್ರ ನ್ಯೂಸ್: ಪುತ್ತೂರಿನ ಸರಕಾರಿ ಕಾಲೇಜಿನ ವಿದ್ಯಾರ್ಥಿ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಪುತ್ತೂರಿನ ಸುಳ್ಯಪದವು ಎಂಬಲ್ಲಿ ನಡೆದಿದೆಸುಳ್ಯಪದವು ನಿವಾಸಿ ಪುತ್ತೂರು ಸರಕಾರಿ ಕಾಲೇಜಿನ ವಿದ್ಯಾರ್ಥಿ ಧನುಷ್ ಮೃತಪಟ್ಟರು. ನಿನ್ನೆ ರಾತ್ರಿ ಮನೆಯ ತೋಟಕ್ಕೆ ಹೋದ ಸಂದರ್ಭ ತೋಟದ ಬಾವಿಗೆ ಅಕಸ್ಮಿಕವಾಗಿ ಧನುಷ್ ಬಿದ್ದಿದ್ದಾನೆ ಎನ್ನಲಾಗಿದೆ. ಧನುಷ್ ಹಿಂದೂ ಜಾಗರಣ ವೇದಿಕೆಯ ಸಕ್ರಿಯ ಕಾರ್ಯಕರ್ತ. ಕೆಲ ದಿನಗಳ ಹಿಂದೆಯಷ್ಟೇ ನಡೆದ ಹಿಂದೂ ಜಾಗರಣ ವೇದಿಕೆ ಸುಳ್ಯಪದವು ಘಟಕದಲ್ಲಿ ಪದಾಧಿಕಾರಿಯಾಗಿ ಆಯ್ಕೆಯಾಗಿದ್ದರು
ಪುತ್ತೂರು: ಬಾವಿಗೆ ಬಿದ್ದು ಹಿಂಜಾವೇ ಕಾರ್ಯಕರ್ತ ಮೃತ್ಯು Read More »