April 2022

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಎ.25 ರಿಂದ 30ರ ವರೆಗಿನ ದ್ವಾದಶ ರಾಶಿಗಳ ವಾರಭವಿಷ್ಯ ಹೀಗಿದೆ. ಮೇಷ: ಬೇಜವಾಬ್ದಾರಿ ಮಾತುಗಳಿಂದ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅನಗತ್ಯ ಸಿಟ್ಟಿನಿಂದ ಆಗುವ ನಷ್ಟ ತಪ್ಪಿಸಲು ಸಮಾಧಾನದಿಂದ ಇರುವುದು ಒಳ್ಳೆಯದು. ನ್ಯಾಯಾಲಯದಲ್ಲಿನ ವ್ಯವಹಾರಗಳನ್ನು ಸ್ವಲ್ಪ ಮುಂದೂಡುವುದು ಒಳ್ಳೆಯದು. ಲೇವಾದೇವಿ ಮಾಡುವವರಿಗೆ ಬಾಕಿ ಹಣಗಳು ಬಂದು ಸಂತಸವಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಮಹಿಳೆಯರಿಗೆ ಸಂತಸಪಡುವ ಸುದ್ದಿಯೊಂದು ಕೇಳಿಬರುತ್ತದೆ. ಸಂಸಾರದಲ್ಲಿ ಕಿರಿಕಿರಿಗಳು ಆರಂಭವಾಗಬಹುದು. ಹಣಕಾಸು ಹೂಡಿಕೆಯ ಬಗ್ಗೆ ಸರಿಯಾಗಿ […]

ದ್ವಾದಶ ರಾಶಿಗಳ ವಾರಭವಿಷ್ಯ Read More »

ರಾಜ್ಯದಲ್ಲಿ ಇನ್ನೂ ಮುಂದೆ ಮಾಸ್ಕ್ ಕಡ್ಡಾಯ| ಸಿಎಂ ಸಭೆಯಲ್ಲಿ ನಿರ್ಣಯ

ಸಮಗ್ರ ನ್ಯೂಸ್: ಕೊರೊನಾ ಹೆಚ್ಚುತ್ತಿರುವ ಕಾರಣದಿಂದ ರಾಜ್ಯ ಸರ್ಕಾರ ಇನ್ನೂ ಮುಂದೆ ಮಾಸ್ಕ್ ಕಡ್ಡಾಯ ಎಂದು ಘೋಷಿಸಿದೆ.ಇಂದು ನಡೆದ ಸಿಎಂ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಲಸಿಕೆ ಮೇಲೆ ಗಮನಹರಿಸಲಾಗುವುದು ಹಾಗೆ ಹೊರ ದೇಶಗಳಿಂದ ಬರುವವರ ಮೇಲೆ ನಿಗಾವಹಿಸಲಾಗುವುದು ಎಂದಿದ್ದಾರೆ. ಈ ಕುರಿತಂತೆ ಶೀಘ್ರದಲ್ಲೇ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಇನ್ನೂ ಮುಂದೆ ಮಾಸ್ಕ್ ಕಡ್ಡಾಯ| ಸಿಎಂ ಸಭೆಯಲ್ಲಿ ನಿರ್ಣಯ Read More »

ಶಾಲೆಯಲ್ಲಿ ಪ್ರಾಂಶುಪಾಲ ಮತ್ತು ಶಿಕ್ಷಕಿಯ ಕಾಮಕ್ರೀಡೆ| ಗ್ರಾಮಸ್ಥರ ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿಬಿದ್ದ “ಲವ್ ಗುರು” ಅಮಾನತು!

ಸಮಗ್ರ ನ್ಯೂಸ್: ಪ್ರೌಢಶಾಲೆಯ ಪ್ರಾಂಶುಪಾಲ ಶಾಲೆಯಲ್ಲೇ ಶಿಕ್ಷಕಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದು, ಅಮಾನತುಗೊಂಡಿರುವ ಘಟನೆ ಛತ್ತೀಸ್ ಗಡ ಜಿಲ್ಲೆಯ ಕಂಕೇರ್ ನಲ್ಲಿ ನಡೆದಿದೆ. ಗ್ರಾಮದ ಕೆಲವರು ಕುಟುಕು ಕಾರ್ಯಾಚರಣೆ ನಡೆಸಿ ಶಿಕ್ಷಕನ ಕಾಮಚೇಷ್ಟೆಯನ್ನು ವಿಡಿಯೋ ಮಾಡಿದ್ದಾರೆ. ಪ್ರಾಂಶುಪಾಲ ಮತ್ತು ಮಹಿಳಾ ಸಿಬ್ಬಂದಿಯ ಈ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಶಾಲೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಈ ಹಿಂದೆಯೇ ಕೆಲ ಗ್ರಾಮಸ್ಥರು ಆರೋಪಿಸಿದ್ದರು. ಇದೀಗ ಅವರೇ ವಿಡಿಯೋ ಸೆರೆ ಹಿಡಿದು ಕೃತ್ಯ ಬಯಲು

ಶಾಲೆಯಲ್ಲಿ ಪ್ರಾಂಶುಪಾಲ ಮತ್ತು ಶಿಕ್ಷಕಿಯ ಕಾಮಕ್ರೀಡೆ| ಗ್ರಾಮಸ್ಥರ ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿಬಿದ್ದ “ಲವ್ ಗುರು” ಅಮಾನತು! Read More »

ಸಾಲಗಾರರ ಹೆಸರು ವಾಟ್ಸ್ಯಾಪ್ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ!

ಸಮಗ್ರ ನ್ಯೂಸ್: ಸಾಲಬಾಧೆ ತಾಳಲಾರದೆ ಯುವಕನೋರ್ವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಶಿವಪುರದ ಕಲ್ಲುಕಟ್ಟೆ ಕೆರೆಯಲ್ಲಿ ಸೋಮವಾರ ನಡೆದಿದೆ.ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ ವಿಜಯ್ (27) ಮೃತ ದುರ್ದೈವಿ. ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ತಾನು ಕೊಡಬೇಕಿರುವ ಸಾಲದ ಮಾಹಿತಿ ಹಾಗೂ ನನ್ನ ಸಾವಿಗೆ ನಾನೇ ಕಾರಣ, ನಮ್ಮ ಜಮೀನು ಮಾರಿ ಸಾಲಗಾರರಿಗೆ ನೀಡಿ ಎಂದು ಬರೆದುಕೊಂಡಿದ್ದಾನೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಶವವನ್ನು ಮೇಲೆತ್ತುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಜೊತೆಗೆ ಗುಂಡ್ಲುಪೇಟೆ ಪೊಲೀಸರು

ಸಾಲಗಾರರ ಹೆಸರು ವಾಟ್ಸ್ಯಾಪ್ ಸ್ಟೇಟಸ್ ಹಾಕಿ ಆತ್ಮಹತ್ಯೆಗೆ ಶರಣಾದ ಯುವಕ! Read More »

ಜೂನ್ ಕೊನೆವಾರದಲ್ಲಿ ಪಿಯುಸಿ ಫಲಿತಾಂಶ – ಆರ್ ರಾಮಚಂದ್ರನ್

ಸಮಗ್ರ ನ್ಯೂಸ್: ಕಳೆದ ವರ್ಷದಂತೆ ಈ ವರ್ಷ ಪಿಯು ಫಲಿತಾಂಶ ತಡವಾಗಲ್ಲ. ಜೂನ್ ಕೊನೆಯ ವಾರದಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬರುವುದು ಪಕ್ಕಾ ಆಗಿದೆ. ಒಂದೊಂದು ವಿಷಯ ಪರೀಕ್ಷೆಗಾಗಿ ಆಗುತ್ತಿದ್ದಂತೆ ಮೌಲ್ಯಮಾಪನವು ‌ಆರಂಭವಾಗಿದೆ. ಜೂನ್ ಕೊನೆಯ ವಾರ ಪಿಯುಸಿ ಪರೀಕ್ಷೆ ಫಲಿತಾಂಶ ಹೊರಬರಲಿದ್ದು, ಮೇ. 20 ರಿಂದ ಜೂನ್ 15 ರೊಳಗೆ ಮೌಲ್ಯಮಾಪನ ಮುಗಿಯಲಿದೆ. ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ, ಆದಷ್ಟು ಬೇಗ ಫಲಿತಾಂಶ ನೀಡುತ್ತೇವೆ ಎಂದು ಪಿಯು ಬೋರ್ಡ್ ನಿರ್ದೇಶಕ ಆರ್ ರಾಮಚಂದ್ರನ್ ಹೇಳಿದ್ದಾರೆ.

ಜೂನ್ ಕೊನೆವಾರದಲ್ಲಿ ಪಿಯುಸಿ ಫಲಿತಾಂಶ – ಆರ್ ರಾಮಚಂದ್ರನ್ Read More »

ಮತ್ತಷ್ಟು ಹೆಚ್ಚಾಗಲಿದೆ ಅಡುಗೆ ಎಣ್ಣೆ ಬೆಲೆ.

ಸಮಗ್ರ ನ್ಯೂಸ್: ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆ ನಡುವೆಯೂ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಹೆಚ್ಚಾಗಿದೆ. ರಷ್ಯಾ ಉಕ್ರೇನ್ ಯುದ್ಧದ ಪರಿಣಾಮ ವಿಶ್ವದ ಎಲ್ಲ ರಾಷ್ಟ್ರಗಳಿಗೂ ತಟ್ಟಿದ್ದು, ಭಾರತದ ಮೇಲೂ ಇದು ಪರಿಣಾಮ ಬೀರಿದೆ. ತಾಳೆಎಣ್ಣೆ ರಫ್ತು ನಿಷೇಧಿಸಲು ಇಂಡೋನೇಷ್ಯಾ ತೀರ್ಮಾನಿಸಿರುವ ಕಾರಣ ಭಾರತದಲ್ಲಿ ಅಡುಗೆ ಎಣ್ಣೆ ಬೆಲೆ ತೀವ್ರವಾಗಿ ಏರಿಕೆಯಾಗಬಹುದು ಹೇಳಲಾಗಿದೆ. ಈಗಾಗಲೇ ಅಡುಗೆ ಎಣ್ಣೆ ಬೆಲೆ ಹೆಚ್ಚಿದ್ದು, ಈಗ ಮತ್ತಷ್ಟು ಏರಿಕೆಯಾಗಬಹುದು ಎಂಬ ವಿಷಯ ಆತಂಕಕ್ಕೆ ಕಾರಣವಾಗಿದೆ. ಅಡುಗೆ ಎಣ್ಣೆ ಬೆಲೆ

ಮತ್ತಷ್ಟು ಹೆಚ್ಚಾಗಲಿದೆ ಅಡುಗೆ ಎಣ್ಣೆ ಬೆಲೆ. Read More »

ಮತ್ತೆ ಹೆಚ್ಚಾದ ಕೋವಿಡ್ |ಎ.27ರಿಂದ ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿ ಜಾರಿಗೆ ಚಿಂತನೆ – ಸಿಎಂ

ಸಮಗ್ರ ನ್ಯೂಸ್: ದೆಹಲಿಯಲ್ಲಿ ನಾಲ್ಕನೇ ಅಲೆ ಆರಂಭಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನ್ಫೆರೆನ್ಸ್ ಏಪ್ರಿಲ್ 27ರಂದು ನಡೆಸಲಿದ್ದಾರೆ. ಈ ವೀಡಿಯೋ ಕಾನ್ಫೆರೆನ್ಸ್ ಬಳಿಕ, ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟವಾಗಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಈ ಕುರಿತು ಮಾಹಿತಿ, ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಅಲ್ಲದೇ ಏಪ್ರಿಲ್ 27ರಂದು ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೋ ಕಾನ್ಫೆರೆನ್ಸ್

ಮತ್ತೆ ಹೆಚ್ಚಾದ ಕೋವಿಡ್ |ಎ.27ರಿಂದ ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿ ಜಾರಿಗೆ ಚಿಂತನೆ – ಸಿಎಂ Read More »

ಪುತ್ತೂರು; ಬಸ್ ನಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ| ಮುಸ್ಲಿಂ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಜನ

ಸಮಗ್ರ ನ್ಯೂಸ್: ಚಲಿಸುತ್ತಿದ್ದ ಬಸ್ ನಲ್ಲಿ ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯ ಮೈ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ, ಸಾರ್ವಜನಿಕರು ಆತನನ್ನು ತರಾಟೆಗೆ ತೆಗೆದುಕೊಂಡ ಘಟನೆ ಪುತ್ತೂರು ಬಸ್ ನಿಲ್ದಾಣದಲ್ಲಿ ನಡೆದಿದೆ. ಮಾಡನ್ನೂರು ನಿವಾಸಿ ಮಹಮ್ಮದ್ ಸತ್ತಾರ್ ಎಂಬಾತ ಸುಳ್ಯದಿಂದ ಪುತ್ತೂರಿಗೆ ಬರುತ್ತಿದ್ದ ಬಸ್ ನಲ್ಲಿ ಹಿಂದೂ ಯುವತಿಯೋರ್ವಳ ಜೊತೆ ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಾರ್ವಜನಿಕರು ಆತನನ್ನು ಪ್ರಶ್ನಿಸಿದ್ದು ಆತ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸುವಾಗ ಆತನನ್ನು ತಡೆದು ಪೊಲೀಸರಿಗೆ

ಪುತ್ತೂರು; ಬಸ್ ನಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ| ಮುಸ್ಲಿಂ ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಜನ Read More »

ರಾಮನಗರ: ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದ ಯಮಸ್ವರೂಪಿ ಮರ; ಇಬ್ಬರು ದುರ್ಮರಣ

ಸಮಗ್ರ ನ್ಯೂಸ್: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಸ್ಥಳದಲ್ಲೇ ಇಬ್ಬರು ದುರ್ಮರಣಕ್ಕೀಡಾದ ಘಟನೆ ರಾಮನಗರದ ಕುಂಭಾಪುರ ಗೇಟ್ ಬಳಿ ಸೋಮವಾರ ಬೆಳಗ್ಗೆ 6 ಗಂಟೆಗೆ ಸಂಭವಿಸಿದೆ. ಸುಂದ್ರಶ್ (49) ಮತ್ತು ತನ್ಮಯ್ (9) ಮೃತ ದುದೈವಿಗಳು.ಶೀಲ, ಗಾನವಿ, ಸಾನವಿ ಗಂಭೀರ ಗಾಯಗೊಂಡಿದ್ದಾರೆ. ಒಂದೇ ಕುಟುಂಬದ ಐವರು ಬೆಂಗಳೂರಿನಿಂದ ಮಂಡ್ಯ ಜಿಲ್ಲೆ ಮಳವಳ್ಳಿ ಬಳಿಯ ಅಗಸನ ಪುರಕ್ಕೆ ಹಬ್ಬಕ್ಕೆಂದು ಹೋಗಿದ್ದರು. ಹಬ್ಬ ಮುಗಿಸಿಕೊಂಡು ವಾಪಸ್​ ಬೆಂಗಳೂರಿಗೆ ಒಮಿನಿ ಕಾರಿನಲ್ಲಿ ತೆರಳುವಾಗ ಮಾರ್ಗಮಧ್ಯೆ ಕಾರಿನ ಮೇಲೆ ಮರ ಬಿದ್ದಿದೆ.

ರಾಮನಗರ: ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದ ಯಮಸ್ವರೂಪಿ ಮರ; ಇಬ್ಬರು ದುರ್ಮರಣ Read More »

ಮೈಸೂರು: ಓವರ್ ಟೇಕ್ ಮಾಡಿದ್ದಕ್ಕೆ ಬಸ್ ಚಾಲಕನ ಹಲ್ಲೆಗೈದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ದ್ವಿಚಕ್ರ ವಾಹನವನ್ನು ಹಿಂದಿಕ್ಕಿದ ಎನ್ನುವ ಕಾರಣಕ್ಕೆ ನಾಲ್ವರು ದುಷ್ಕರ್ಮಿಗಳು ತಮಿಳುನಾಡಿನ ಬಸ್ ಜಖಂಗೊಳಿಸಿ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಶನಿವಾರ ರಾತ್ರಿ 10.30ರ ಸುಮಾರಿಗೆ ಮೈಸೂರಿನಿಂದ ತಮಿಳುನಾಡಿನ ಸೇಲಂಗೆ ತೆರಳುತ್ತಿದ್ದ ಬಸ್ ದ್ವಿಚಕ್ರ ವಾಹನವನ್ನು ಹಿಂದಿಕ್ಕಿತು ಎನ್ನುವ ಕಾರಣಕ್ಕೆ ನಗರದ ಕಾರಂಜಿ ಕೆರೆ ಬಳಿ ಬಸ್ ಅಡ್ಡಗಟ್ಟಿದ ದುಷ್ಕರ್ಮಿಗಳು, ಚಾಲಕನ ಮೇಲೆ ಏಕಾಏಕಿ ಮುಗಿಬಿದ್ದು, ಥಳಿಸಿದ್ದಾರೆ. ಕುಡಿದು ಮತ್ತಿನಲ್ಲಿದ್ದ ಅವರು, ಬಸ್ ಮುಂಭಾಗದ ಗಾಜನ್ನು ಕಲ್ಲಿನಿಂದ ಹೊಡೆದು ಪುಡಿಪುಡಿ ಮಾಡಿದ್ದಾರೆ.ಚಾಲಕನನ್ನು ಅವಾಚ್ಯ ಶದ್ದಗಳಿಂದ

ಮೈಸೂರು: ಓವರ್ ಟೇಕ್ ಮಾಡಿದ್ದಕ್ಕೆ ಬಸ್ ಚಾಲಕನ ಹಲ್ಲೆಗೈದ ದುಷ್ಕರ್ಮಿಗಳು Read More »