April 2022

ಸುಳ್ಯ: ಮನೆಯಿಂದಲೇ ಮೊಬೈಲ್ ಕದ್ದೊಯ್ದ ಕಿರಾತಕ ಕಳ್ಳ

ಬೆಳ್ಳಾರೆಯ ನೆಟ್ಟಾರು ಮನೆಯಿಂದ ಮೊಬೈಲ್ ಕದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ ಘಟನೆ ಎ.25 ರಂದು ನಡೆದಿದೆ. ಮದ್ಯಾಹ್ನದ ಸಮಯಕ್ಕೆ ನೆಟ್ಟಾರಿನ ಮಹಮ್ಮದ್ ಕುಂಞ ಯವರ ಮನೆಯ ಎದುರು ಬಾಗಿಲನ್ನು ಸರಿಸಿ ಮನೆಯ ಒಳಗೆ ಹೋಗಿ ಸುಮಾರು 8000 ಮೌಲ್ಯದ ಎರಡು ಸ್ಯಾಮ್ ಸಾಂಗ್ ಮೊಬೈಲ್ ಎ.24 ರಂದು ಕದ್ದೊಯ್ದಿದ್ದಾರೆ ಎಂದು ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಳ್ಳತನ ಮಾಡಿದ ಆರೋಪಿ ಉಮೈದ್ರಾತ್ರಿ ಸಮಯಕ್ಕೆ ಸ್ವತ್ತು ಸಮೇತ ಸಂಪ್ಯ ಪೊಲೀಸ ರು ವಶಕ್ಕೆ ಪಡೆದಿದ್ದಾರೆ. […]

ಸುಳ್ಯ: ಮನೆಯಿಂದಲೇ ಮೊಬೈಲ್ ಕದ್ದೊಯ್ದ ಕಿರಾತಕ ಕಳ್ಳ Read More »

ಇಂದು‌(ಎ.27) ಸಿಎಂ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ

ಸಮಗ್ರ ನ್ಯೂಸ್: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು (ಎ.27) ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೂಡುಬಿದಿರೆ ತಾಲೂಕು ಆಡಳಿತ ಸೌಧ ಉದ್ಘಾಟನೆ, ಮೂಡುಬಿದಿರೆ ತಾಲೂಕು ಪತ್ರಕರ್ತರ ಸಂಘದ ನೂತನ ಪತ್ರಕರ್ತರ ಭವನ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಸಿಎಂ ಬೊಮ್ಮಾಯಿ ಮೂಡುಬಿದಿರೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ – ಮಂಗಳೂರು ಉತ್ತರ ಉಪವಿಭಾಗದ ನಿರ್ದೇಶನದಂತೆ ಮೂಡುಬಿದಿರೆಯಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಇಂದು‌(ಎ.27) ಸಿಎಂ ಬಸವರಾಜ ಬೊಮ್ಮಾಯಿ ಕರಾವಳಿ ಪ್ರವಾಸ Read More »

ಹಾಲಿನ ಬೆಲೆ ಕನಿಷ್ಠ 3 ರೂ ಗೆ ಹೆಚ್ಚಳಕ್ಕೆ, ಮುಖ್ಯಮಂತ್ರಿಗೆ ಮನವಿ

ಸಮಗ್ರ ನ್ಯೂಸ್: ಪ್ರತಿ ಲೀಟರ್ ಹಾಲಿಗೆ ಕನಿಷ್ಠ 3 ರೂ. ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿಗಳನ್ನು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೋರಿದ್ದಾರೆ. ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿಗಳು, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿ ಬಹುತೇಕ ಎಲ್ಲ ವೆಚ್ಚಗಳು ಶೇ.30 ಹೆಚ್ಚಾಗಿರುವುದನ್ನು ಪರಿಗಣಿಸಿ ರೈತರಿಗೆ ಹೆಚ್ಚುವರಿ ದರ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಹಾಲಿನ ದರವನ್ನು ಹೆಚ್ಚಳ ಅನಿವಾರ್ಯವಾಗಿದೆ ಎಂದು ಸಿಎಂ ಬಳಿ ವಿನಂತಿಸಿಕೊಂಡಿದ್ದಾರೆ. ನಂದಿನಿ ಹಾಲಿನ ಮಾರಾಟ ದರಕ್ಕೆ ತುಲನೆ ಮಾಡಿದಾಗ ಇತರೇ ಸಂಸ್ಥೆಗಳ ದರವು ಪ್ರತಿ

ಹಾಲಿನ ಬೆಲೆ ಕನಿಷ್ಠ 3 ರೂ ಗೆ ಹೆಚ್ಚಳಕ್ಕೆ, ಮುಖ್ಯಮಂತ್ರಿಗೆ ಮನವಿ Read More »

ಮಂಗಳೂರು: ಧರ್ಮದಂಗಲ್ ನಡುವೆಯೂ ಸಾಮರಸ್ಯದ ಬೀಜ ಬಿತ್ತಿದ ಹಿಂದೂ ನವವಿವಾಹಿತ| ಮಸೀದಿಯಲ್ಲಿ ಮುಸ್ಲಿಂ ಗೆಳೆಯರಿಗಾಗಿ ಇಪ್ತಾರ್ ಆಯೋಜನೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್ ದಿನಕ್ಕೊಂದು ತಿರುವು ಪಡೆಯತ್ತಿದೆ. ಹಿಜಾಬ್‌ನಿಂದ ಆರಂಭವಾದ ವೈಮನಸ್ಸು ಹಲಾಲ್, ವ್ಯಾಪಾರ ಬಹಿಷ್ಕಾರವನ್ನು ದಾಟಿ ಬಂಗಾರ ಖರೀದಿಯವರೆಗೂ ಬಂದು ನಿಂತಿದೆ. ಈ ಘಟನೆಯ ಆತಂಕ‌ದ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮರಸ್ಯದ ಘಟನೆ ನಡೆದಿದೆ. ತನ್ನ ಮದುವೆಗೆ ಬಂದರೂ ಉಪವಾಸ ನಿಮಿತ್ತ ಊಟ ಮಾಡದೇ ಹಿಂದಿರುಗಿದ ಮುಸ್ಲಿಂ ಗೆಳೆಯರಿಗೋಸ್ಕರ ಹಿಂದೂ ಯುವಕ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿ, ನೂರಾರು ಮಂದಿಗೆ ಊಟ ಹಾಕಿದ ಮಾದರಿ ಕಾರ್ಯ ದಕ್ಷಿಣ ಕನ್ನಡ

ಮಂಗಳೂರು: ಧರ್ಮದಂಗಲ್ ನಡುವೆಯೂ ಸಾಮರಸ್ಯದ ಬೀಜ ಬಿತ್ತಿದ ಹಿಂದೂ ನವವಿವಾಹಿತ| ಮಸೀದಿಯಲ್ಲಿ ಮುಸ್ಲಿಂ ಗೆಳೆಯರಿಗಾಗಿ ಇಪ್ತಾರ್ ಆಯೋಜನೆ Read More »

ಅಮೇರಿಕಾದ ಉಪಾಧ್ಯಕ್ಷರಿಗೂ ಬಂತು ಕೊರೋನಾ

ಸಮಗ್ರ ನ್ಯೂಸ್: ಭಾರತವು ಕೊರೋನಾ ನಾಲ್ಕನೆಯ‌ ಅಲೆಯ ಭೀತಿಯಲ್ಲಿದ್ದರೆ ಅತ್ತ ವಿಶ್ವದ ಬಲಾಢ್ಯ ಅಮೇರಿಕಕ್ಕೂ ಇದರ ಚಿಂತೆ ಶುರುವಾದಂತೆ ಕಾಣಿಸುತ್ತಿದೆ. ಅಮೇರಿಕಾದ ಉಪಾಧ್ಯಕ್ಷೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಅದು ಲಕ್ಷಣರಹಿತವಾಗಿದ್ದು ಆರೋಗ್ಯಕರವಾಗಿದ್ದಾರೆ. ಇದುವರೆಗಿನ ಮಾಹಿತಿಯ ಪ್ರಕಾರ ಅವರು ಅಮೇರಿಕಾ ಅಧ್ಯಕ್ಷರ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟಿಲ್ಲ ಎಂದು ಶ್ವೇತಭವನ ಪ್ರಕಟಣೆ ತಿಳಿಸಿದೆ

ಅಮೇರಿಕಾದ ಉಪಾಧ್ಯಕ್ಷರಿಗೂ ಬಂತು ಕೊರೋನಾ Read More »

ಕೋವಿಡ್ ಜನಕ ಚೀನಾದಲ್ಲಿ ಮತ್ತೊಂದು ರೋಗ ಪತ್ತೆ?

ಸಮಗ್ರ ನ್ಯೂಸ್: ಜಗತ್ತು ಕೋವಿಡ್ ಭೀತಿಯಿಂದ ಹೊರಬರುವ ಮೊದಲೇ ಚೀನಾದಿಂದ ಬಂದ ಮತ್ತೊಂದು ಆಘಾತಕಾರಿ ಸುದ್ದಿ ಆರೋಗ್ಯದ ಕಾಳಜಿಯನ್ನು ಹೆಚ್ವಿಸುವಂತೆ ಮಾಡಿದೆ. ಕೋವಿಡ್ ಜನಕ ಚೀನಾದಲ್ಲಿ ಹಕ್ಕಿಜ್ವರದ ತಳಿಯಾಗಿರುವ H3N8 ಚೀನಾದಲ್ಲಿ ಮಾನವರಲ್ಲಿ ಪತ್ತೆಯಾಗಿದೆ. ಚೀನಾದ ಆರೋಗ್ಯ ಇಲಾಖೆಯ ವರದಿಗಳ ಪ್ರಕಾರ ನಾಲ್ಕು ವರ್ಷದ ಮಗುವಿನಲ್ಲಿ ಈ ಸೋಂಕು ಪತ್ತೆಯಾಗಿದ್ದು, ಯಾವುದೇ ಪ್ರಾಥಮಿಕ ಸಂಪರ್ಕಕ್ಕೆ ಹರಡಿಲ್ಲ ಎಂಬುದು‌ ತೃಪ್ತಿಕರ ಸಂಗತಿಯಾಗಿದೆ.

ಕೋವಿಡ್ ಜನಕ ಚೀನಾದಲ್ಲಿ ಮತ್ತೊಂದು ರೋಗ ಪತ್ತೆ? Read More »

ಸರಕಾರಿ ಸ್ವಾಮ್ಯದ ಎಲ್‌ಐಸಿ ಪ್ರತಿ ಶೇರಿಗೆ ₹902-₹949 ಬೆಲೆ?

ಸಮಗ್ರ ನ್ಯೂಸ್: ಐಪಿಒದ ಮೂಲಕ ಬಂಡವಾಳ ಕ್ರೋಢೀಕರಣ ಯೋಜಿಸಿರುವ ಎಲ್‌ಐಸಿ ಶೇರು ಮಾರುಕಟ್ಟೆಗೆ ಮೇ 4ರಂದು ಲಗ್ಗೆ ಇಡಲಿದೆ‌. ವರದಿಗಳ ಪ್ರಕಾರ ಪ್ರತಿ ಶೇರಿಗೆ ₹902-₹949 ಬೆಲೆ ನಿರ್ಧರಿಸುವ ಸಾಧ್ಯತೆಯಿದೆ. ತನ್ನ ವಿಮಾದಾರ ಶೇರು ಖರೀದಿಸುವುದನ್ನು ಬೆಂಬಲಿಸುವ ಸಲುವಾಗಿ ₹60 ವಿನಾಯಿತಿ ಲಭ್ಯವಾಗಲಿದೆ.

ಸರಕಾರಿ ಸ್ವಾಮ್ಯದ ಎಲ್‌ಐಸಿ ಪ್ರತಿ ಶೇರಿಗೆ ₹902-₹949 ಬೆಲೆ? Read More »

ಕೇರಳದಲ್ಲಿ ಕಾರು ಚಲಾಯಿಸಲೂ ಹೆಲ್ಮೆಟ್ ಬೇಕಂತೆ; ಚಾಲಕನಿಗೆ ದಂಡ ವಿಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಹೆಲ್ಮೆಟ್ ಧರಿಸದ ಕಾರಣ ಕಾರು ಮಾಲೀಕರಿಗೆ 500 ರೂ.ಗಳ ದಂಡ ವಿಧಿಸಿದ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ. ಮಾರುತಿ ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಾತ್ರ ಅಜಿತ್ ಎ ಎಂಬವರಿಗೆ ಕೇರಳ ಟ್ರಾಫಿಕ್ ಪೊಲೀಸರು 500 ರೂ.ಗಳ ದಂಡ ವಿಧಿಸಿದ್ದು, ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ‘ಡ್ರೈವಿಂಗ್ ಅಥವಾ ಸವಾರ ತಲೆಗೆ ಹೆಲ್ಮೆಟ್ ಧರಿಸಿಲ್ಲ’ ಎಂಬ ಕಾರಣಕ್ಕೆ 500 ರೂ.ಗಳ ದಂಡ ಪಾವತಿಸಿದ್ದು, ಕೇರಳ ಪೊಲೀಸರಿಗೆ ಯಾರು ಹೆಲ್ಮೆಟ್ ಧರಿಸಬೇಕೆಂಬುದೇ ಮರೆತುಹೋಗಿದೆ. ಡಿಸೆಂಬರ್ 7, 2021

ಕೇರಳದಲ್ಲಿ ಕಾರು ಚಲಾಯಿಸಲೂ ಹೆಲ್ಮೆಟ್ ಬೇಕಂತೆ; ಚಾಲಕನಿಗೆ ದಂಡ ವಿಧಿಸಿದ ಪೊಲೀಸರು Read More »

ರಥೋತ್ಸವ ವೇಳೆ ಕರೆಂಟ್ ಶಾಕ್; ಹತ್ತು ಮಂದಿ ಸಾವು|

ಸಮಗ್ರ ನ್ಯೂಸ್: ರಥೋತ್ಸವದ ವೇಳೆ ಘೋರ ದುರಂತವೊಂದು ಸಂಭವಿಸಿದ್ದು, ವಿದ್ಯುತ್ ಹರಿದು 10 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಂಜಾವೂರು ಕಲಿಮೇಡು ದೇವಸ್ಥಾನದಲ್ಲಿ ನಡೆದಿದೆ. ತಂಜಾವೂರಿನ ದೇವಾಲಯದ ರಥೋತ್ಸವದ ವೇಳೆ ವಿದ್ಯುತ್ ಹರಿದು 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದೇವಾಲಯದ ರಥೋತ್ಸವದ ವಿದ್ಯುತ್ ವೈರ್ ಗೆ ಡಿಕ್ಕಿ ಹೊಡೆದ ಪರಿಣಾಮ 10 ಜನರು ಮೃತಪಟ್ಟಿದ್ದು, ಗಾಯಗೊಂಡ ಮೂವರನ್ನು ತಂಜಾವೂರು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ರಥೋತ್ಸವ ವೇಳೆ ಕರೆಂಟ್ ಶಾಕ್; ಹತ್ತು ಮಂದಿ ಸಾವು| Read More »

ಸಿಎಂ ಬೊಮ್ಮಯಿ ಮೇಲೆ ದಾಳಿಗೆ ಯತ್ನಿಸಿದ ಎತ್ತು

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೇಲೆ ಎತ್ತು‌‌ ದಾಳಿಗೆ ಯತ್ನಿಸಿದ್ದು, ಸಿಎಂ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಳಿಕೋಟೆ ತಾಲೂಕಿನ ಕೊಡಗನೂರ ಗ್ರಾಮಕ್ಕೆ ಭೇಟಿ ನೀಡಿದ ಸಿಎಂಗೆ ಬರಮಾಡಿ‌ ರೈತರು ಜೋಡೆತ್ತುಗಳನ್ನು ನೀಡಿದರು. ಬಳಿಕ ಎತ್ತುಗಳಿಗೆ ಪೂಜಿಸೋ ವೇಳೆಯಲ್ಲಿ ಬೆದರಿ ಕೋಪಗೊಂಡು‌ ಎತ್ತು ತಿವಿಯುವ ಹಂತಕ್ಕೆ ಬಂದಿತ್ತು. ಘಟನೆಯಲ್ಲಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಬೊಮ್ಮಾಯಿ ಪಾರಾಗಿದ್ದಾರೆ. ಅಲ್ಲಿಯೇ ಇದ್ದಂತ ಎಎಸ್ಪಿಯವರು ಎತ್ತಿನ ಕೊಂಬನ್ನು ಇಡಿದು, ಬೊಮ್ಮಾಯಿಯನ್ನು ತಿವಿತದಿಂದ ಪಾರು ಮಾಡಿದರು. ಕೆಲ ಕಾಲ ಈ ಘಟನೆಯಿಂದ ಸ್ಥಳದಲ್ಲಿ ಆತಂಕ

ಸಿಎಂ ಬೊಮ್ಮಯಿ ಮೇಲೆ ದಾಳಿಗೆ ಯತ್ನಿಸಿದ ಎತ್ತು Read More »