April 2022

ಮಂಗಳೂರು: ಬೈಬಲ್‌ನಲ್ಲಿ ಯೇಸುವನ್ನು ನಂಬಬೇಕು, ಯೇಸು ನಿನ್ನನ್ನು ರಕ್ಷಿಸುತ್ತಾನೆ; ಭಗವದ್ಗೀತೆಯನ್ನು ನಂಬಿದರೆ ಮಾತ್ರ ನೀನು ಹಿಂದೂ ಅಂತ ಉಲ್ಲೇಖವಿಲ್ಲ- ಸಚಿವ ಬಿ.ಸಿ ನಾಗೇಶ್

ಸಮಗ್ರ ನ್ಯೂಸ್: ಭಗವದ್ಗೀತೆ ಧಾರ್ಮಿಕ ಪುಸ್ತಕವಲ್ಲ, ಅದರಲ್ಲಿ ಹಿಂದೂ ಧರ್ಮದ ಆಚರಣೆ ಬಗ್ಗೆ ಹೇಳಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೈಬಲ್‌ನಲ್ಲಿ ಯೇಸುವನ್ನು ನಂಬಬೇಕು, ಯೇಸು ನಿನ್ನನ್ನು ರಕ್ಷಿಸುತ್ತಾನೆ ಎಂದು ಉಲ್ಲೇಖವಿದೆ. ಆದರೆ, ಭಗವದ್ಗೀತೆಯನ್ನು ನಂಬಿದರೆ ಮಾತ್ರ ನೀನು ಹಿಂದೂ ಅಂತ ಉಲ್ಲೇಖವಿಲ್ಲ. ಬೈಬಲ್ ಮತ್ತು ಕುರಾನ್ ಧಾರ್ಮಿಕ ಗ್ರಂಥಗಳು. ಕ್ರಿಶ್ಚಿಯನ್ ಆಗಬೇಕಾದರೆ ಬೈಬಲ್ ನಂಬಬೇಕು ಅಂತ ಹೇಳಲಾಗಿದೆ. ಆದರೆ, ಭಗವದ್ಗೀತೆಯಲ್ಲಿ ಭಗವದ್ಗೀತೆ ನಂಬದಿರುವವರ ಬಗ್ಗೆ ಎಲ್ಲೂ ಮಾತನಾಡಿಲ್ಲ ಎಂದು ಶಿಕ್ಷಣ […]

ಮಂಗಳೂರು: ಬೈಬಲ್‌ನಲ್ಲಿ ಯೇಸುವನ್ನು ನಂಬಬೇಕು, ಯೇಸು ನಿನ್ನನ್ನು ರಕ್ಷಿಸುತ್ತಾನೆ; ಭಗವದ್ಗೀತೆಯನ್ನು ನಂಬಿದರೆ ಮಾತ್ರ ನೀನು ಹಿಂದೂ ಅಂತ ಉಲ್ಲೇಖವಿಲ್ಲ- ಸಚಿವ ಬಿ.ಸಿ ನಾಗೇಶ್ Read More »

ಕ್ಯಾನ್ಸರ್ ಎಂದರೇನು ಗೊತ್ತಾ? ಮಾರಣಾಂತಿಕ ರೋಗದ ಕುರಿತು ಸಂಕ್ಷಿಪ್ತ ಮಾಹಿತಿ

ಸಮಗ್ರ ನ್ಯೂಸ್: ಮಾನವ ದೇಹವು ಜೀವಕೋಶಗಳಿಂದ ಮಾಡಲ್ಪಟ್ಟಿದೆ. ಕ್ಯಾನ್ಸರ್ ಎನ್ನುವುದು ನಮ್ಮ ದೇಹದಲ್ಲಿನ ಜೀವಕೋಶಗಳ ಬೆಳವಣಿಗೆಯಾಗಿದ್ದು ಅದು ನಿಯಂತ್ರಣವನ್ನು ಕಳೆದುಕೊಂಡು ಒಂದೇ ಗಾತ್ರದಲ್ಲಿ ಬೆಳೆಯುತ್ತದೆ. ಅಂದರೆ, ಇದು ಅಂಗಾಂಶಗಳ ಗುಂಪು. ಹೀಗೆ ಹೊಸ ಕೋಶಗಳು ಗುಂಪಾಗಿ ರೂಪುಗೊಳ್ಳುತ್ತವೆ. ಇವುಗಳನ್ನು ಗೆಡ್ಡೆಗಳು ಎಂದು ಕರೆಯಲಾಗುತ್ತದೆ. ಇದು ಎರಡು ವಿಧಗಳಾಗಿರಬಹುದು. ಒಂದು ಮಾರಣಾಂತಿಕ ಗೆಡ್ಡೆ ಮತ್ತು ಇನ್ನೊಂದು ಹಾನಿಕರವಲ್ಲದ ಗೆಡ್ಡೆ. ಮೊದಲನೆಯದು ತುಂಬಾ ಅಪಾಯಕಾರಿ. ಇದು ಬೆಳೆಯುತ್ತದೆ ಮತ್ತು ದೇಹದಾದ್ಯಂತ ಹರಡುತ್ತದೆ ಮತ್ತು ಇತರ ಅಂಗಾಂಶಗಳು ಸಹ ಕ್ಯಾನ್ಸರ್ ಅನ್ನು

ಕ್ಯಾನ್ಸರ್ ಎಂದರೇನು ಗೊತ್ತಾ? ಮಾರಣಾಂತಿಕ ರೋಗದ ಕುರಿತು ಸಂಕ್ಷಿಪ್ತ ಮಾಹಿತಿ Read More »

ಗುಂಡ್ಯ ಹೊಳೆಯಲ್ಲಿ ಸತ್ತ ಮೀನುಗಳ ಪತ್ತೆ : ಮೂವರ ಬಂಧನ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಗುಂಡ್ಯ ಹೊಳೆಯಲ್ಲಿ ನೂರಾರು ಮೀನುಗಳು ಸತ್ತುಬಿದ್ದ ದೃಶ್ಯ ಬೆಳಕಿಗೆ ಬಂದಿದ್ದು, ಈ ದುರ್ಘಟನೆಯ ಮೇಲೆ ಗಮನ ಹರಿಸಿದ ಉಪ್ಪಿನಂಗಡಿ ಪೊಲೀಸರು ಆಂಧ್ರದ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಉದನೆ ತೂಗು ಸೇತುವೆ ಸಮೀಪ ಗುಂಡ್ಯ ಹೊಳೆಯಲ್ಲಿ ನೂರಾರು ಮೀನುಗಳು ಸತ್ತು ಬಿದ್ದಿದೆ ಮತ್ತು ನೀರಿಗೆ ತೋಟೆ ಹಾಕಿರುವುದರಿಂದ ಮೀನುಗಳು ಸತ್ತಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವಿಚಾರವಾಗಿ ಕಾರ್ಯಾಚರಣೆ ನಡೆಸಿದ ನೆಲ್ಯಾಡಿ ಹೊರ ಠಾಣೆ ಪೊಲೀಸರು ಉದನೆಯ ಕಳಪಾರು ಎಂಬಲ್ಲಿ

ಗುಂಡ್ಯ ಹೊಳೆಯಲ್ಲಿ ಸತ್ತ ಮೀನುಗಳ ಪತ್ತೆ : ಮೂವರ ಬಂಧನ Read More »

ವಿಟ್ಲ: ಕಾಮಗಾರಿ ವೇಳೆ ಕೆಳಗೆ ಬಿದ್ದು ಯುವಕ ದುರ್ಮರಣ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದಲ್ಲಿ ಲಕ್ನೋ ಮೂಲದ ಕಾರ್ಮಿಕ ಸಭಾಭವನದ ಫಿನಿಶಿಂಗ್ ಕಾಮಗಾರಿ ಮಾಡುತ್ತಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ವಿಟ್ಲ ಶೋಕಮಾತೆ ಇಗರ್ಜಿಯ ಸಂಬಂಧಪಟ್ಟ ಸಭಾಭವನದ ಫಿನಿಶಿಂಗ್ ಕೆಲಸ ಮಾಡುತ್ತಿದ್ದ ಲಕ್ನೋದ ಪಿಪ್ರಾ ಗೂಮ್ ಮೂಲದ ಕಾರ್ಮಿಕ ಜಯ ಪ್ರಕಾಶ್(25), ನಿನ್ನೆ ಸಂಜೆ ಮೃತಪಟ್ಟಿದ್ದಾನೆ . ಚಿಕಿತ್ಸೆಗೆ ಎಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫಲಿಸದೇ ಜಯಪ್ರಕಾಶ್ ಅಸುನೀಗಿದ್ದಾರೆ.

ವಿಟ್ಲ: ಕಾಮಗಾರಿ ವೇಳೆ ಕೆಳಗೆ ಬಿದ್ದು ಯುವಕ ದುರ್ಮರಣ Read More »

ರಸಗೊಬ್ಬರಗಳ ಮೇಲಿನ ಸಬ್ಸಿಡಿ ಏರಿಕೆಗೆ ಕೇಂದ್ರದ ತೀರ್ಮಾನ

ಸಮಗ್ರ ನ್ಯೂಸ್: ದೇಶದ ರೈತರಿಗೆ ಪ್ರಧಾನಿ ಮೋದಿ ಸರ್ಕಾರದಿಂದ ಬಂಪರ್‌ ಸುದ್ದಿ ಸಿಕ್ಕಿದೆ. ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಹೆಚ್ಚಿಸಲು ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ವೇಳೆ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಇದರಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಬಹುದೆಂಬ ಆತಂಕಕ್ಕೊಳಗಾಗಿದ್ದ ರೈತ ಸಮುದಾಯಕ್ಕೆ ಈ ಸುದ್ದಿ ನೆಮ್ಮದಿ ತಂದಿದೆ. ಈ ಬಾರಿ ಮುಂಗಾರು ಉತ್ತಮವಾಗಿರಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ

ರಸಗೊಬ್ಬರಗಳ ಮೇಲಿನ ಸಬ್ಸಿಡಿ ಏರಿಕೆಗೆ ಕೇಂದ್ರದ ತೀರ್ಮಾನ Read More »

ಕಣ್ಣಾ‌ಮುಚ್ಚಾಲೆ ಆಡಿ ಕಣ್ಣು‌ಮುಚ್ಚಿದ ಬಾಲಕಿಯರು| ಐಸ್ ಕ್ರೀಂ ಬಾಕ್ಸ್ ನೊಳಗೆ ಅವಿತು ಉಸಿರುಗಟ್ಟಿ ಸಾವು

ಸಮಗ್ರ ನ್ಯೂಸ್: ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಐಸ್‌ಕ್ರೀಂ ಪೆಟ್ಟಿಗೆಯೊಳಗೆ ಅಡಗಿ ಕುಳಿತು ಕೊಳ್ಳಲು ಮುಂದಾಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ. ನಾಗರಾಜು ಮತ್ತು ಚಿಕ್ಕದೇವಮ್ಮ ಎಂಬುವರ ಪುತ್ರಿ ಭಾಗ್ಯ (12), ರಾಜನಾಯಕ ಮತ್ತು ಗೌರಮ್ಮ ಎಂಬುವರ ಪುತ್ರಿ ಕಾವ್ಯ (7) ಮೃತ ಬಾಲಕಿಯರು. ಮೃತ ಬಾಲಕಿಯರಾದ ಭಾಗ್ಯ ಹಾಗೂ ಕಾವ್ಯ ಬುಧವಾರ ಬೆಳಿಗ್ಗೆ ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ಆಟವಾಡುತ್ತಿದ್ದರು. ಈ ವೇಳೆ ಕಣ್ಣಾಮುಚ್ಚಾಲೆ ಆಟವಾಡುವ ಸಂದರ್ಭ ಐಸ್ ಕ್ರೀಮ್

ಕಣ್ಣಾ‌ಮುಚ್ಚಾಲೆ ಆಡಿ ಕಣ್ಣು‌ಮುಚ್ಚಿದ ಬಾಲಕಿಯರು| ಐಸ್ ಕ್ರೀಂ ಬಾಕ್ಸ್ ನೊಳಗೆ ಅವಿತು ಉಸಿರುಗಟ್ಟಿ ಸಾವು Read More »

ಕೊರೊನಾ ಸೀಸನ್ 4; ರಾಜ್ಯ ಸಾರಿಗೆಯಲ್ಲೂ ಟಫ್ ರೂಲ್ಸ್ ಜಾರಿ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊರೊನಾ ಹೆಚ್ಚಳ ಬೆನ್ನಲ್ಲೇ, ಸಾರಿಗೆಯಲ್ಲೂ` ಟಫ್‌ ರೂಲ್ಸ್ ಜಾರಿಗೆ ತರಲು ಇದಾಗಲೆ ಮುಂದಾಗಿದೆ. ಸಾರಿಗೆಯಲ್ಲಿ ನಿರ್ದಿಷ್ಟ ಪ್ರಯಾಣಿಕರ ಸಂಚಾರಕ್ಕೆ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಮೆಟ್ರೋ ಸಂಚಾರಕ್ಕೂ ಟಫ್‌ ರೂಲ್ಸ್ ಮಾಡಲಾಗಿದ್ದು, ಪ್ರಯಾಣಿಕರಿಗೆ ಮಾಸ್ಕ್‌ ಸ್ಯಾನಿಟೈಸರ್‌ ಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ.ದಬಲ್‌ ದೋಸ್‌ ವ್ಯಾಕ್ಸಿನೇಷನ್‌ ಸರ್ಟಿಫಿಕೆಟ್‌ ಕಡ್ಡಾಯಗೊಳಿಸಲಾಗುತ್ತದೆ. ಅಲ್ಲದೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನಿಲ್ದಾಣಗಳಲ್ಲಿ ದಿನಕ್ಕೆ 2 ಬಾರಿ ಸ್ಯಾನಿಟೈಜರ್‌ ಮಾಡಬೇಕು. ತುರ್ತು ಸಂದರ್ಭಗಳಲ್ಲಿ ಮಾತ್ರ 60 ವರ್ಷ ಮೇಲ್ಪಟ್ಟವರಿಗೆ

ಕೊರೊನಾ ಸೀಸನ್ 4; ರಾಜ್ಯ ಸಾರಿಗೆಯಲ್ಲೂ ಟಫ್ ರೂಲ್ಸ್ ಜಾರಿ ಸಾಧ್ಯತೆ Read More »

12ರ ಬಾಲಕನಿಂದ 5ವರ್ಷದ ಬಾಲಕಿಯ ಅತ್ಯಾಚಾರ

ಸಮಗ್ರ ನ್ಯೂಸ್: 12 ವರ್ಷದ ಬಾಲಕನೊಬ್ಬ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಜಾರ್ಖಂಡ್ ನ ಖುಂತಿ‌ ಜಿಲ್ಲೆಯಲ್ಲಿ ನಡೆದಿದೆ. ಬಾಲಕಿ ತನ್ನ ಮನೆಯ ಸಮೀಪದ ಅಂಗಡಿಯೊಂದಕ್ಕೆ ತಂಪು ಪಾನೀಯ ಖರೀದಿಸಲು ಹೋದಾಗ ಅಲ್ಲಿ ಒಬ್ಬನೇ ಇದ್ದ ಹುಡುಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ಹೇಳಿದ್ದಾರೆ. ಕಳೆದ‌ ಶನಿವಾರ ತೋರ್ಪಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಜಿಲ್ಲೆಯಾದ್ಯಂತ ಬೆಚ್ಚಿಬೀಳಿಸಿದೆ. ಘಟನೆ ಸಂಬಂಧ ಬಾಲಕನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ

12ರ ಬಾಲಕನಿಂದ 5ವರ್ಷದ ಬಾಲಕಿಯ ಅತ್ಯಾಚಾರ Read More »

ಪ್ರಧಾನಿ ನೇತೃತ್ವದಲ್ಲಿ ಸಿಎಂಗಳ ಸಭೆ| ಕೊರೊನಾ ನಡುವೆಯು ಪೆಟ್ರೋಲ್ ಡೀಸೇಲ್ ದರ ಇಳಿಸುವಂತೆ ಪ್ರಧಾನಿ ಮನವಿ|

ಸಮಗ್ರ ನ್ಯೂಸ್: ಕೊರೊನಾ ಸವಾಲು ಇನ್ನೂ ಮುಗಿದಿಲ್ಲ. ಶಾಲೆ ಆರಂಭದ ಹೊತ್ತಲ್ಲಿ ಕರೊನಾ 4ನೇ ಅಲೆಯ ಭೀತಿ ಹುಟ್ಟಿದೆ.ದೇಶದ ಜನರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ರಾಜ್ಯಗಳಲ್ಲಿ ಪೆಟ್ರೋಲ್​, ಡಿಸೇಲ್​ ದರ ಕಡಿಮೆ ಮಾಡಲೂ ಪ್ರಧಾನಿ ಮನವಿಯನ್ನು ಮಾಡಿಕೊಂಡಿದ್ದಾರೆ.ದೇಶದಲ್ಲಿ ಕೊರೊನಾ ನಾಲ್ಕನೇ ಅಲೆ ಆತಂಕ ಹಿನ್ನೆಲೆ ಬುಧವಾರ ಬೆಳಗ್ಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವರ್ಚುವಲ್​ ಸಭೆ ನಡೆಸಿದ ಪ್ರಧಾನಿ ಮೋದಿ ಈಗಾಗಲೇ ಆರೋಗ್ಯ ಕ್ಷೇತ್ರದಲ್ಲಿ

ಪ್ರಧಾನಿ ನೇತೃತ್ವದಲ್ಲಿ ಸಿಎಂಗಳ ಸಭೆ| ಕೊರೊನಾ ನಡುವೆಯು ಪೆಟ್ರೋಲ್ ಡೀಸೇಲ್ ದರ ಇಳಿಸುವಂತೆ ಪ್ರಧಾನಿ ಮನವಿ| Read More »

ಸುಳ್ಯ: ನದಿಯಲ್ಲಿ ಮುಳುಗಿ ಬಾಲಕ ಸಾವು

ಸಮಗ್ರ ನ್ಯೂಸ್: ಹೊಳೆಯಲ್ಲಿ ಸ್ನಾನ ಮಾಡಲೆಂದು ಹೋದ ಸಂದರ್ಭದಲ್ಲಿ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅರಂತೋಡು ಗ್ರಾಮದ ಕುಕ್ಕುಂಬಳ ಎಂಬಲ್ಲಿ ಇಂದು ಸಂಜೆ ವರದಿಯಾಗಿದೆ. ಮೃತಪಟ್ಟ ಬಾಲಕನನ್ನು ಮಂಗಳೂರಿನ ಮನ್ವಿತ್(12) ಎಂದು ಗುರುತಿಸಲಾಗಿದೆ. ಅರಂತೋಡಿನ ಬಾಲಕೃಷ್ಣ ಶೆಟ್ಟಿಯವರ ಪುತ್ರಿಯನ್ನು ಮಂಗಳೂರಿಗೆ ವಿವಾಹ ಮಾಡಿಕೊಡಲಾಗಿದ್ದು, ಅವರ ಮಗ ಮನ್ವಿತ್ ಅಜ್ಜನ ಮನೆಗೆ ಬಂದ ಸಂದರ್ಭದಲ್ಲಿ ಕುಕ್ಕುಂಬಳ ಎಂಬಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದು ಮೃತಪಟ್ಟರೆಂದು ತಿಳಿದುಬಂದಿದೆ. ಮೃತದೇಹವನ್ನು ಶರತ್, ನಿಧೀಶ್, ತಾಜ್ ಅರಂತೋಡು, ಮುನೀರ್ ನೀರಿನಿಂದ ಹೊರತೆಗೆಯಲು ಸಹಕರಿಸಿದರು.

ಸುಳ್ಯ: ನದಿಯಲ್ಲಿ ಮುಳುಗಿ ಬಾಲಕ ಸಾವು Read More »