April 2022

ದ್ವಾದಶ ರಾಶಿಗಳಿಗೆ ವಾರಭವಿಷ್ಯ

ಸಮಗ್ರ ನ್ಯೂಸ್: ಹೊಸ ಸಂವತ್ಸರಾರಂಭದ ಮೊದಲ ವಾರದಲ್ಲಿ ನಾವಿದ್ದೇವೆ. ಯುಗಾದಿಯ ಆದಿಯಲ್ಲಿ ದ್ವಾದಶ ರಾಶಿಗಳ ಮೇಲೆ ಗ್ರಹಾಧಿಪತಿಗಳ ಪರಿಣಾಮ ಮತ್ತು ಗೋಚಾರಫಲ ಯಾವ ರೀತಿ ಇದೆ ಎಂದು ತಿಳಿದುಕೊಳ್ಳೋಣ. ಮೇಷ: ರಾಶಿಯಿಂದ ಮೀನ ರಾಶಿಯವರಿಗೆ ಈ ಸಂವತ್ಸರದಲ್ಲಿ ಶನಿಯು ರಾಜನು ಹಾಗೂ ಗುರುವೇ ಮಂತ್ರಿ ಆಗಿರುತ್ತಾನೆ. ಏಕಾದಶಕ್ಕೆ ಶನಿಯು ಬಂದು ಜೀವನದಲ್ಲಿ ಸುಖ ಸಂತೋಷ ಆನಂದ ಬಂದು ಸೇರುತ್ತದೆ.ನಿರೀಕ್ಷಿಸಿದ ಧನವೂ ಬಂದು ಕೂಡುತ್ತದೆ. ಭಕ್ತಿಯೊಂದೇ ಮನುಷ್ಯನ ಶ್ರೇಯಸ್ಸಿಗೆ ಕಾರಣವು. ಮಾತಾಪಿತರಿಗೆ ವಂದಿಸಿ ಪ್ರತಿ ವಾರದಲ್ಲಿ ಶನಿಯನ್ನು ಪೂಜಿಸಿದರೆ […]

ದ್ವಾದಶ ರಾಶಿಗಳಿಗೆ ವಾರಭವಿಷ್ಯ Read More »

ಹರ್ಷ ಕೊಲೆ ಕೋಮು ಗಲಭೆ ಸೃಷ್ಟಿಸುವ ಹುನ್ನಾರ – ಎನ್ಐಎ

ಸಮಗ್ರ ನ್ಯೂಸ್ : ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಪ್ರಾಥಮಿಕ ವರದಿ ನೀಡಿದ್ದು, ಹರ್ಷ ಕೊಲೆ ಹಿಂದೆ ಕೋಮು ಗಲಭೆಯ ಹುನ್ನಾರವಿತ್ತು ಎಂದು ತಿಳಿಸಿದೆ. ಹರ್ಷ ಹತ್ಯೆ ಹಿಂದೆ ಸಮಾಜದ ಸ್ವಾಸ್ಥ್ಯ ಕದಡುವ ಉದ್ದೇಶ ಅಡಗಿತ್ತು. ಈ ಮೂಲಕ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ಅಡಗಿತ್ತು ಎಂದು ಎನ್ ಐ ಎ ವರದಿಯಲ್ಲಿ ಬಹಿರಂಗವಾಗಿದೆ. ಪ್ರಕರಣ ಸಂಬಂಧ ಈಗಾಗಲೇ 10 ಆರೋಪಿಗಳನ್ನು ಬಂಧಿಸಲಾಗಿದೆ. ಹರ್ಷ ಹತ್ಯೆ ನಡೆದಿರುವುದು

ಹರ್ಷ ಕೊಲೆ ಕೋಮು ಗಲಭೆ ಸೃಷ್ಟಿಸುವ ಹುನ್ನಾರ – ಎನ್ಐಎ Read More »

ಚಂದ್ರದರ್ಶನ ಹಿನ್ನಲೆ; ನಾಳೆಯಿಂದ ಪವಿತ್ರ ರಂಜಾನ್ ಉಪವಾಸ ಆರಂಭ

ಸಮಗ್ರ ನ್ಯೂಸ್: ನಾಳೆಯಿಂದ ಮುಸ್ಲಿಂ ಭಾಂಧವರ ಪವಿತ್ರ ರಂಝಾನ್ ತಿಂಗಳು ಆರಂಭವಾಗಲಿದ್ದು, ಉಪವಾಸ ಆಚರಣೆಗೆ ಸಂಬಂಧಿಸಿದಂತೆ ಹಿಲಾಲ್ ಸಮಿತಿ ಕರೆನೀಡಿದೆ. ಇಂದು ರಂಜಾನ್ ಚಂದ್ರದರ್ಶನವಾದ ಕಾರಣ ಬೆಂಗಳೂರು, ದ.ಕ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ರವಿವಾರದಿಂದ (ಎ.3) ಉಪವಾಸ ಆಚರಣೆ ಮಾಡಲು ಹಿಲಾಲ್ ಸಮಿತಿ ಕರೆ ನೀಡಿದೆ. ಇಂದು ರಾತ್ರಿಯಿಂದಲೇ ತಾರಾವೀಹ್ ನಮಾಜ್ ಮಾಡುವಂತೆಯೂ ತಿಳಿಸಲಾಗಿದೆ.

ಚಂದ್ರದರ್ಶನ ಹಿನ್ನಲೆ; ನಾಳೆಯಿಂದ ಪವಿತ್ರ ರಂಜಾನ್ ಉಪವಾಸ ಆರಂಭ Read More »

ಕುಂದಾಪುರ: ಮೀನುಗಾರಿಕೆಯ ವೇಳೆ ಬೋಟ್ ಮುಳುಗಡೆ – ಐವರ ರಕ್ಷಣೆ

ಸಮಗ್ರ ನ್ಯೂಸ್: ಮಲ್ಪೆ ಮೀನುಗಾರಿಕಾ ಬಂದರಿನಿಂದ ಹೊರಟು ಗಾಳಿಯ ಒತ್ತಡ ಹಾಗೂ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾದ ಘಟನೆ ಗಂಗೊಳ್ಳಿಯಿಂದ ಸುಮಾರು 20 ನಾಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಸಂಭವಿಸಿದ್ದು ಅದರಲ್ಲಿದ್ದ ಐದು ಮೀನುಗಾರರನ್ನು ರಕ್ಷಿಸಲಾಗಿದೆ. ಬೋಟಿನಲ್ಲಿದ್ದ ಮೀನುಗಾರರಾದ ತಾಂಡೇಲಾ ನಾಗಪ್ಪ ರಾಮ ಅಂಬಿಗ, ಕಲಾಸಿಯವರಾದ ಸಚಿನ್ ಉಲ್ಲಾಸ, ದೀಪಕ್ ಖಾರ್ವಿ, ಸುಭಾಷ್ ಗಾಂಗೇಶ್ವರ, ಸೂರಜ್ ಕುಮಾರ್ ಭಗತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸಮೀಪದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ರಾಜರಕ್ಷಾ ಬೋಟಿನಲ್ಲಿದ್ದ ಮೀನುಗಾರರು ರಕ್ಷಿಸಿ, ದಡಕ್ಕೆ ಕರೆತಂದಿದ್ದಾರೆ. ಉದ್ಯಾವರ

ಕುಂದಾಪುರ: ಮೀನುಗಾರಿಕೆಯ ವೇಳೆ ಬೋಟ್ ಮುಳುಗಡೆ – ಐವರ ರಕ್ಷಣೆ Read More »

ಪ್ರೇಯಸಿಯ ಬಂಧಮುಕ್ತಗೊಳಿಸಿ ವಿವಾಹವಾದ ಪ್ರಿಯಕರ| ಹಿಟ್ ಸಿನಿಮಾವನ್ನೇ ಮೀರಿಸುವ ಲವ್ ಸ್ಟೋರಿ|

ಸಮಗ್ರ ನ್ಯೂಸ್: ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ದಾಂಪತ್ಯಕ್ಕೆ ಕಾಲಿಟ್ಟಿರುವ ಜೋಡಿಗೆ ಹುಡುಗಿಯ ಪೋಷಕರಿಂದ ಜೀವ ಬೆದರಿಕೆಯಿದ್ದು, ರಕ್ಷಣೆ ಕೋರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ‌ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಬ್ಳಿ ಗ್ರಾಮದ ಯುವಕ ಯೋಗನಾಂದ್, ಕಬ್ಳಿ ಪಕ್ಕದ ಜಿ ಕೊಪ್ಪಲು ಗ್ರಾಮದ ಯುವತಿ ಇಬ್ಬರು ಕಡೂರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದರು. ಈ ಸಂದರ್ಭದಲ್ಲಿ ಯೋಗಾನಂದ್, ಯುವತಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕಳೆದ ಎರಡು

ಪ್ರೇಯಸಿಯ ಬಂಧಮುಕ್ತಗೊಳಿಸಿ ವಿವಾಹವಾದ ಪ್ರಿಯಕರ| ಹಿಟ್ ಸಿನಿಮಾವನ್ನೇ ಮೀರಿಸುವ ಲವ್ ಸ್ಟೋರಿ| Read More »

“ಶುಭಕೃತ್” ಸಂವತ್ಸರದಲ್ಲಿ ದ್ವಾದಶ ರಾಶಿಗಳ ವರ್ಷಭವಿಷ್ಯ

ಯುಗಾದಿ ಎಂದೂ ಕರೆಯಲ್ಪಡುವ ಉಗಾದಿಯನ್ನು ಹಿಂದೂಗಳ ಪಾಲಿನ ಹೊಸ ವರ್ಷದ ಆರಂಭದ ಮೊದಲ ದಿನದಂದು ಆಚರಿಸಲಾಗುತ್ತದೆ. ಯುಗಾದಿಯನ್ನು ಮುಖ್ಯವಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಆಚರಿಸಲಾಗುತ್ತದೆ. ಹೂವಿನ ಮಾದರಿಗಳಿಂದ ಹಿಡಿದು ರಾಜ್ಯಗಳ ಪಾಕಪದ್ಧತಿಯನ್ನು ಪ್ರತಿನಿಧಿಸುವ ರುಚಿಕರವಾದ ಊಟದವರೆಗೆ, ಯುಗಾದಿಯು ಹೊಸ ವರ್ಷದ ತಾಜಾತನವನ್ನು ಮತ್ತು ಜನರಲ್ಲಿ ಸಂತೋಷವನ್ನು ತರುತ್ತದೆ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್‌ನ ಪ್ರಕಾರ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎಂದು ಆಚರಿಸಲಾಗುತ್ತದೆ. ಪ್ರತಿ ವರ್ಷ ಸಾಮಾನ್ಯ ಮಾರ್ಚ್‌ ತಿಂಗಳಾಂತ್ಯ ಅಥವಾ ಏಪ್ರಿಲ್‌ ಮೊದಲ

“ಶುಭಕೃತ್” ಸಂವತ್ಸರದಲ್ಲಿ ದ್ವಾದಶ ರಾಶಿಗಳ ವರ್ಷಭವಿಷ್ಯ Read More »

ಸಿದ್ದಗಂಗಾ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ‌ ತಮ್ಮ ಮಗುವಿಗೆ ‘ಶಿವಮಣಿ’ ಹೆಸರಿಟ್ಟ ಮುಸ್ಲಿಂ ದಂಪತಿ

ಸಮಗ್ರ ನ್ಯೂಸ್: ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹ ಇಡೀ ದೇಶಕ್ಕೆ ಜನಪ್ರಿಯ. ನಡೆದಾಡುವ ದೇವರೆಂದೇ ಜನಪ್ರಿಯರಾದವರು. ಏಪ್ರಿಲ್ 1ರಂದು ಅವರ 115ನೇ ಜಯಂತ್ಯೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಸಿದ್ದಗಂಗಾ ಮಠದಲ್ಲಿ ಭಕ್ತಿಪೂರ್ವಕ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮದಲ್ಲಿ ಕ್ಯಾತ್ಸಂದ್ರ ನಿವಾಸಿ ಶಾಹಿಸ್ತಾ ಮತ್ತು ಜಮೀರ್ ದಂಪತಿ ತಮ್ಮ ಮಗುವಿಗೆ ʼಶಿವಮಣಿʼ ಎಂದು ನಾಮಕರಣ ಮಾಡುವ ಮೂಲಕ ಸೌಹಾರ್ದ ಸಾರಿದ್ದು ವಿಶೇಷವಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಮಠಕ್ಕೆ ಬಂದಿದ್ದ ಮಕ್ಕಳಿಗೆ ನಾಮಕರಣ ಮಾಡುವುದರ ಜೊತೆಗೆ

ಸಿದ್ದಗಂಗಾ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ‌ ತಮ್ಮ ಮಗುವಿಗೆ ‘ಶಿವಮಣಿ’ ಹೆಸರಿಟ್ಟ ಮುಸ್ಲಿಂ ದಂಪತಿ Read More »

ನವಯುಗಾದಿ; ತರಲಿ ಸಂತಸದ ಹಾದಿ

ಅನಾದಿ ಕಾಲದ ಸನಾತನ ಸಂಸ್ಕೃತಿ ಹೊಂದಿರುವ ಭಾರತ ಹಲವು ಅಚ್ಚರಿಪಡಿಸುವ ಮತ್ತು ವೈಜ್ಙಾನಿಕ ಆಚರಣೆಗಳ ತಳಹದಿ. ಇಲ್ಲಿ ಪ್ರತಿದಿನ ಒಂದೊಂದು ಹಬ್ಬ. ಒಂದೊಂದು ಹಬ್ಬಕ್ಕೂ ಅದರದ್ದೇ ವೈಶಿಷ್ಟತೆ ಮತ್ತು ನಂಬಿಕೆ. ಆಚರಣೆಗಳಲ್ಲೂ ವಿಭಿನ್ನತೆ. ಈ ಕಾರಣದಿಂದಲೇ ಭಾರತ ವಿಭಿನ್ನ ಸಂಸ್ಕೃತಿಯ ತವರು ಎಂದು ಕರೆಸಿಕೊಳ್ಳುತ್ತದೆ.ಹಿಂದೂ ಹಬ್ಬಗಳಲ್ಲಿ ಎಲ್ಲಕ್ಕಿಂತ ಶ್ರೇಷ್ಠ ಎನಿಸಿಕೊಳ್ಳುವುದು ಯುಗಾದಿ. ಪಕ್ಷಿಗಳಲ್ಲಿ ನವಿಲಿನಂತೆ, ಪ್ರಾಣಿಗಳಲ್ಲಿ ಮಾನವನಂತೆ, ಋತುಗಳಲ್ಲಿ ವಸಂತ ನಂತೆ ಹಬ್ಬಗಳಲ್ಲಿ “ಯುಗಾದಿ” ಮೊದಲಿಗ. ಹಿಂದುಗಳ ದೃಷ್ಟಿಯಲ್ಲಿ ಇದು ಹೊಸ ವರ್ಷಾರಂಭ. ಸಂಸ್ಕೃತದ ಎರಡು ಶಬ್ಧಗಳಾದ

ನವಯುಗಾದಿ; ತರಲಿ ಸಂತಸದ ಹಾದಿ Read More »

ಕಡಬ: ಪರ್ಸ್ ಎಗರಿಸಿದ ಬಾಲಕರು

ಸಮಗ್ರ ನ್ಯೂಸ್: ಅಟೋ ರಿಕ್ಷಾದಲ್ಲಿದ್ದ ವ್ಯಕ್ತಿಯೋರ್ವರ ಪರ್ಸನ್ನು ಅಪ್ರಾಪ್ತ ಬಾಲಕರಿಬ್ಬರು ಎಗರಿಸಿ ಪರಾರಿಯಾಗಲು ಯತ್ನಿಸಿದ ಘಟನೆ ಕಡಬ ಸಮೀಪದ ಪಿಜಕ್ಕಳ ಎಂಬಲ್ಲಿ ನಡೆದಿದೆ. ಈ ವೇಳೆ ಸ್ಥಳೀಯರು ಅವರನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ. ಪರ್ಸ್ ಎಗರಿಸಿದ ಅಪ್ತಾಪ್ತ ಬಾಲಕರು ಕುಂತೂರು ಸಮೀಪದವರೆಂದು ತಿಳಿದು ಬಂದಿದ್ದು, ಈ ಬಾಲಕರು ಕಡಬ ಸಮೀಪದ ಕೇವಳದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ಅಲ್ಲಿಯ ವ್ಯಕ್ತಿಯೋರ್ವರು ಅಟೋ ರಿಕ್ಷಾದಲ್ಲಿ ಬಂದಿದ್ದು ಅವರು ತಮ್ಮ ಸ್ನೇಹಿತರೋರ್ವರ ಜತೆ ಮಾತನಾಡುತ್ತಿದ್ದಾಗ ಆ ವ್ಯಕ್ತಿಯ ಪರ್ಸನ್ನು ಈ

ಕಡಬ: ಪರ್ಸ್ ಎಗರಿಸಿದ ಬಾಲಕರು Read More »

ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ

ಸಮಗ್ರ ನ್ಯೂಸ್: ಐಪಿಎಸ್ ಸೇವೆಗೆ ಭಾಸ್ಕರ್ ರಾವ್ ಅವರು ಸೇವೆಗೆ ಸ್ವಯಂ ನಿವೃತ್ತಿ ಹೇಳಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಪ್ರಸ್ತುತ ರೈಲ್ವೆ ಇಲಾಖೆಯ ಎಡಿಜಿಪಿಯಾಗಿ ಭಾಸ್ಕರ್ ರಾವ್ ಕಾರ್ಯನಿರ್ವಹಿಸುತ್ತಿದ್ದರು. ಸ್ವಯಂ ನಿವೃತ್ತಿ ಕೋರಿ 2021ರ ಸೆಪ್ಟೆಂಬರ್ 16ರಂದು ಅವರು ಅರ್ಜಿ ಸಲ್ಲಿಸಿದ್ದರು. ನಿರ್ಧಾರ ಪುನರ್ಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರದಿಂದ ಅವಕಾಶ ನೀಡಲಾಗಿದ್ದು, ಗೃಹಸಚಿವಾಲಯವು ಸಂಬಂಧಿಸಿದ ಅಧಿಕಾರಿಯನ್ನು ಸಂಪರ್ಕಿಸಬೇಕಿತ್ತು. ಆದರೆ, 6 ತಿಂಗಳಾದರೂ ಸಚಿವಾಲಯದಿಂದ ಉತ್ತರ ಬಾರದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ

ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸ್ವಯಂ ನಿವೃತ್ತಿ Read More »