April 2022

ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಮ್ ಉಚ್ಚಿಲ್ ಪದಚ್ಯುತಿ

ಸಮಗ್ರ ನ್ಯೂಸ್: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅವರನ್ನು ಪದಚ್ಯುತಿಗೊಳಿಸಲಾಗಿದೆ. “ಶ್ರೀ ರಹೀಂ ಉಚ್ಚಿಲ್ ಅವರನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ’ ಎಂದು ಕನ್ನಡ ಮತ್ತು ಸಾಹಿತ್ಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಆರ್.ರಮೇಶ್ ಆದೇಶದಲ್ಲಿ ತಿಳಿಸಿದ್ದಾರೆ. ರಹೀಂ ಉಚ್ಚಿಲ್ ಅವರ ಪದಚ್ಯುತಿಗೆ ಕಾರಣ ತಿಳಿದುಬಂದಿಲ್ಲ.

ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಮ್ ಉಚ್ಚಿಲ್ ಪದಚ್ಯುತಿ Read More »

ಗುಂಡ್ಯ: ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ ಪ್ರಕರಣ| ಹಲ್ಲೆಗೈದ ಇಬ್ಬರು ಅರೆಸ್ಟ್

ಸಮಗ್ರ ನ್ಯೂಸ್: ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇರೆಗೆ ಉಪ್ಪಿನಂಗಡಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡ ಘಟನೆ ಮಂಗಳವಾರದಂದು ಗುಂಡ್ಯದಿಂದ‌ ವರದಿಯಾಗಿದೆ. ಪುತ್ತೂರು ಸಂಪ್ಯ ನಿವಾಸಿ ನಝೀರ್(21) ಎಂಬಾತ ಪೂಜಾ ಎಂಬಾಕೆಯನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್ ಹಾಗೂ ಇತರರು ಆಟೋರಿಕ್ಷಾವನ್ನು ತಡೆದು ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ

ಗುಂಡ್ಯ: ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ ಪ್ರಕರಣ| ಹಲ್ಲೆಗೈದ ಇಬ್ಬರು ಅರೆಸ್ಟ್ Read More »

ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್)ದ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆರೋಗ್ಯದಲ್ಲಿ ಏರುಪೇರು ಆಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲಡ್ಕದ ತನ್ನ ವಿದ್ಯಾಸಂಸ್ಥೆಯಲ್ಲಿದ್ದಾಗಲೇ ಪ್ರಭಾಕರ್ ಭಟ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇನ್ನು ಕೆಲ ಕಿಡಿಗೇಡಿಗಳು ಜಾಲತಾಣಗಳಲ್ಲಿ ಕಲ್ಲಡ್ಕರವರ ಕುರಿತು ಅಸಂಬದ್ಧ ಸುದ್ದಿಗಳನ್ನು ಹರಿಯ ಬಿಡುತ್ತಿದ್ದಾರೆ. ಜಾಲತಾಣಗಳಲ್ಲಿ ವಿಕೃತಿ ಮೆರೆಯುತ್ತಿರುವ ಈ ಕಿಡಿಗೇಡಿಗಳ ಕುರಿತು ನಿಗಾವಹಿಸಲಾಗಿದೆ ಎಂದು

ಆರ್ ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು Read More »

ಗುಂಡ್ಯ: ಭಿನ್ನಕೋಮಿನ ಜೋಡಿಯ ಪತ್ತೆ ಪ್ರಕರಣ| ಸಂಘಟನೆಯ ವಿರುದ್ಧ ದೂರು ನೀಡಿದ ಯುವಕ

ಸಮಗ್ರ ನ್ಯೂಸ್: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಸಮೀಪದ ಕಾಡಿನಲ್ಲಿ ಭಿನ್ನಕೋಮಿನ ಜೋಡಿ ಪತ್ತೆ ಪ್ರಕರಣ ಸಂಬಂಧಿಸಿ, ಯುವಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ತಿರುವು ಪಡೆದುಕೊಂಡಿದೆ. ನಾನು ಪ್ರೀತಿಸುತ್ತಿದ್ದ ಯುವತಿಯೊಂದಿಗೆ ಆಟೋದಲ್ಲಿ ಹೋಗುತ್ತಿದ್ದಾಗ ಭಜರಂಗದಳದ ಕಾರ್ಯಕರ್ತರು ನಮ್ಮನ್ನು ತಡೆದು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದು, ಇದೊಂದು ‘ಲವ್ ಜಿಹಾದ್’ ಎಂದು ಹೇಳಲಾಗಿದೆ. ಹಲ್ಲೆ ಮಾಡಿದ ಆರೋಪದಲ್ಲಿ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ನ ಆಟೋ ರಿಕ್ಷಾದಲ್ಲಿ

ಗುಂಡ್ಯ: ಭಿನ್ನಕೋಮಿನ ಜೋಡಿಯ ಪತ್ತೆ ಪ್ರಕರಣ| ಸಂಘಟನೆಯ ವಿರುದ್ಧ ದೂರು ನೀಡಿದ ಯುವಕ Read More »

ಕಾಸರಗೋಡು: ಪುತ್ರನಿಂದಲೇ ತಂದೆಯ ಕೊಲೆ

ಸಮಗ್ರ ನ್ಯೂಸ್: ತಂದೆಯನ್ನು ಪುತ್ರ ಕೊಲೆಗೈದ ಘಟನೆ ಆದೂರು ಸಮೀಪದ ಪಾಂಡಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ಮೃತಪಟ್ಟವರನ್ನು ಬಾಲಕೃಷ್ಣ (56) ಮತ್ತು ಕೊಲೆಗಾರನನ್ನು ನರೇಂದ್ರ ಪ್ರಸಾದ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಪಾನಮತ್ತರಾಗಿ ಪರಸ್ಪರ ಹೊಡೆ ದಾಡಿಕೊಂಡಿದ್ದು, ಈ ಸಂದರ್ಭದಲ್ಲಿ ಪುತ್ರನ ಹೊಡೆತಕ್ಕೆ ತಂದೆ ಬಲಿಯಾಗಿದ್ದಾರೆ. ಕೃತ್ಯಕ್ಕೆ ಸಂಬಂಧ ಪಟ್ಟಂತೆ ಪುತ್ರ ನರೇಂದ್ರ ಪ್ರಸಾದ್ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಆದೂರು ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ಆರಂಭಿಸಿದ್ದಾರೆ.

ಕಾಸರಗೋಡು: ಪುತ್ರನಿಂದಲೇ ತಂದೆಯ ಕೊಲೆ Read More »

ಮಂಗಳೂರು: ಮಂತ್ರ ಮಾಂಗಲ್ಯಕ್ಕೆ ಸಾಕ್ಷಿಯಾದ ಕಡಲ ನಗರಿ| ಕುವೆಂಪು ಆಶಯದಂತೆ ಹಸೆಮಣೆ ಏರಿದ ನವಜೋಡಿ

ಸಮಗ್ರ ನ್ಯೂಸ್: ಮದುವೆಯೆಂದರೆ ಅದೊಂದು ಗೌಜಿ. ಅದ್ಧೂರಿಯಾಗಿ ಎಲ್ಲರ ಗಮನ ಸೆಳೆಯಬೇಕು, ವಿಐಪಿಗಳು ಬರಬೇಕು, ಎಂದು ಬಯಸುವವರೇ ಅಧಿಕ. ಆದರೆ, ಮಂಗಳೂರಿನಲ್ಲಿ ನಡೆದ ಸರಳ ಮದುವೆಯೊಂದು ಮೆಚ್ಚುಗೆಗೆ ಪಾತ್ರವಾಗಿದೆ. ಅರ್ಚಕರ ಪೂಜೆ, ಮಂತ್ರಘೋಷಗಳಿಲ್ಲದೇ ಮಂತ್ರಮಾಂಗಲ್ಯದ ಮೂಲಕ ವಿವಾಹವಾಗಿ ಕಡಲತಡಿಯ ಜೋಡಿಯೊಂದು ಗಮನ ಸೆಳೆದಿದೆ. ಸುರತ್ಕಲ್​ನ ಹೋಂ ಸ್ಟೇಯಲ್ಲಿ ವಿವೇಕ ಗೌಡ ಮತ್ತು ಶಿವಾನಿ ಶೆಟ್ಟಿ ಎಂಬುವವರು ನಾಡಗೀತೆ, ಪರಿಸರ ಸ್ನೇಹಿ ಆದರ್ಶಗಳ ಜೊತೆ ಹೊಸಜೀವನ ಆರಂಭಿಸಿದರು. ಲ್ಯಾಂಡ್ ಲಿಂಕ್ಸ್​ನ ಉದ್ಯಮಿಯಾಗಿರುವ ವಿವೇಕಗೌಡ ಛಾಯಾಗ್ರಹಣ ಮತ್ತು ವಿಡಿಯೋ ಎಡಿಟಿಂಗ್

ಮಂಗಳೂರು: ಮಂತ್ರ ಮಾಂಗಲ್ಯಕ್ಕೆ ಸಾಕ್ಷಿಯಾದ ಕಡಲ ನಗರಿ| ಕುವೆಂಪು ಆಶಯದಂತೆ ಹಸೆಮಣೆ ಏರಿದ ನವಜೋಡಿ Read More »

ಸುಳ್ಯ ವಕೀಲರ ಸಂಘ ಚುನಾವಣೆ| ಪ್ರ. ಕಾರ್ಯದರ್ಶಿ ಆಯ್ಕೆ ಪ್ರಶ್ನಿಸಿ ಭಿನ್ನಮತ| ಹಾಲಿ-ಮಾಜಿ ಅಧ್ಯಕ್ಷರ ಮಧ್ಯೆ ಚಕಮಕಿ

ಸಮಗ್ರ ನ್ಯೂಸ್: ತಾಲೂಕು ವಕೀಲರ ಸಂಘದ ಚುನಾವಣೆ ಕಳೆದ ಕೆಲವು ದಿನಗಳ ಹಿಂದೆ ನಡೆದಿದ್ದು, ನೂತನ ಸಮಿತಿ ಅಧ್ಯಕ್ಷ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಎ 6 ರಂದು ನಡೆಯಲಿತ್ತು. ಆದರೆ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಗೊಂಡಿರುವ ವಿನಯ ಮುಳುಗಾಡುರವರ ಆಯ್ಕೆ ಸಂಘದ ಬೈಲಾಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ನ್ಯಾಯವಾದಿ ಶ್ರೀಪಾದ ಹೆಗಡೆ ಸಂಘಕ್ಕೆ ಪತ್ರವನ್ನು ಬರೆದಿದ್ದು ಭಿನ್ನಮತ ಸ್ಪೋಟಗೊಂಡಂತಾಗಿದೆ. ಸಂಘದ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಲು ಸಂಘದ ಸದಸ್ಯರಾಗಿ ಎಂಟು ವರ್ಷಗಳಾಗಿರಬೇಕು. ಆದರೆ ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ

ಸುಳ್ಯ ವಕೀಲರ ಸಂಘ ಚುನಾವಣೆ| ಪ್ರ. ಕಾರ್ಯದರ್ಶಿ ಆಯ್ಕೆ ಪ್ರಶ್ನಿಸಿ ಭಿನ್ನಮತ| ಹಾಲಿ-ಮಾಜಿ ಅಧ್ಯಕ್ಷರ ಮಧ್ಯೆ ಚಕಮಕಿ Read More »

ಗಾಂಜಾ ವ್ಯಸನಿ ಮಗನಿಗೆ ಖಾರದ ಪುಡಿ ಎರಚಿ ತಾಯಿ; ಇಲ್ಲಿದೆ ವಿಡಿಯೋ…

ಸಮಗ್ರ ನ್ಯೂಸ್: ಗಾಂಜಾ ವ್ಯಸನಕ್ಕೆ ಒಳಗಾದ ಮಗನನ್ನು ತಾಯಿಯೋರ್ವಳು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾ ಮುಗ್ಗ ಥಳಿಸಿ ಕಣ್ಣಿಗೆ ಖಾರದ ಪುಡಿ ಎರಚಿದ ಪ್ರಸಂಗ ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯ ಕೊಡಡ್‌ನಲ್ಲಿ ನಡೆದಿದೆ. ಗಾಂಜಾ ವ್ಯಸನಕ್ಕೆ ಒಳಗಾದ 15 ವರ್ಷದ ಪುತ್ರನಿಗೆ ಹಲವಾರು ಬಾರಿ ಈ ತಾಯಿ ಬುದ್ದಿ ಹೇಳಿ ವ್ಯಸನದಿಂದ ಹೊರ ಬರುವಂತೆ ಎಚ್ಚರಿಸಿದ್ದಾಳೆ. ಶಾಲೆಗೆ ಹೋಗುತ್ತಿರುವ ಮಗನ ಬಗ್ಗೆ ಇದರಿಂದ ತಾಯಿಗೆ ಚಿಂತೆ ಶುರುವಾಗಿತ್ತು. ಆತ ಕೇಳದೇ ವ್ಯಸನ ಮುಂದುವರಿಸಿದ್ದಕ್ಕೆ ತಾಯಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ

ಗಾಂಜಾ ವ್ಯಸನಿ ಮಗನಿಗೆ ಖಾರದ ಪುಡಿ ಎರಚಿ ತಾಯಿ; ಇಲ್ಲಿದೆ ವಿಡಿಯೋ… Read More »

ತಾಂತ್ರಿಕ ದೋಷ; ಬಾರ್ ಗಳಲ್ಲಿ ‌ಮದ್ಯ ಖಾಲಿ| ವೈನ್ ಮರ್ಚೆಂಟ್ ಗ್ರೂಪ್ ನಿಂದ ಪ್ರತಿಭಟನೆಗೆ ನಿರ್ಧಾರ

ಸಮಗ್ರ ನ್ಯೂಸ್: ರಾಜ್ಯದ ಬಾರ್ ಆ್ಯಂಡ್ ರೆಸ್ಟೋರೆಂಟ್ ಗಳಲ್ಲಿ ಮದ್ಯ ಖಾಲಿಯಾಗಿರುವ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ನೂತನ ಸಾಫ್ಟ್​ವೇರ್​ ಅಪ್​ಡೇಟ್ ಆಗಿರುವ ಹಿನ್ನೆಲೆ ಬಿಲ್ ಮಾಡಲು ಆಗದೆ ಮದ್ಯ ಪೂರೈಕೆ ಆಗುತ್ತಿಲ್ಲ. ಕೆಎಸ್​​ಬಿಸಿಎಲ್​ನಿಂದ​ ಬಾರ್​ಗಳಿಗೆ ಮದ್ಯ ಪೂರೈಕೆಯಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ನಿನ್ನೆಯಿಂದ ರಾಜ್ಯದ ಎಣ್ಣೆ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದೆ. ಕೆಲ ಅಂಗಡಿಗಳಲ್ಲಿ ಅಲ್ಪ ಸ್ಪಲ್ಪ ಎಣ್ಣೆ ಇದೆ. ಇಂದು (ಏಪ್ರಿಲ್ 5) ಸಂಜೆ ವೇಳೆಗೆ ರಾಜ್ಯದ ಎಲ್ಲಾ ಅಂಗಡಿಗಳಲ್ಲಿ ಎಣ್ಣೆ ಸಂಪೂರ್ಣ ಖಾಲಿಯಾಗುವ ಸಾಧ್ಯತೆಯಿದೆ.

ತಾಂತ್ರಿಕ ದೋಷ; ಬಾರ್ ಗಳಲ್ಲಿ ‌ಮದ್ಯ ಖಾಲಿ| ವೈನ್ ಮರ್ಚೆಂಟ್ ಗ್ರೂಪ್ ನಿಂದ ಪ್ರತಿಭಟನೆಗೆ ನಿರ್ಧಾರ Read More »

ಗುಂಡ್ಯ: ಪೊದೆಯೊಳಗೆ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ

ಸಮಗ್ರ ನ್ಯೂಸ್ : ಭಿನ್ನಕೋಮಿನ ಜೋಡಿಯೊಂದು ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗುಂಡ್ಯ ಕಾಡಿನ ಪೊದೆಯೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಾ ಸಿಕ್ಕಿಬಿದ್ದಿರುವ ಘಟನೆ ಇಂದು ನಡೆದಿದೆ. ಪೊದೆಯೊಳಗೆ ಚಕ್ಕಂದವಾಡುತ್ತಿದ್ದ ಈ ಯುವ ಜೋಡಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿ ಪೊಲೀಸರಿಗೆ ಒಪ್ಪಿಸಿರುವ ಬಗ್ಗೆ ತಿಳಿದು ಬಂದಿದೆ. ಈ ಜೋಡಿಯ ಕುರಿತು ಫೋಟೋ ಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೇಣೂರು ಮೂಲದ ಯುವತಿ ಹಾಗೂ ಪುತ್ತೂರಿನಲ್ಲಿ ಆಟೋ ಚಾಲಕನಾಗಿರುವ ಮುಸ್ಲಿಂ ಯುವಕ ಇಂದು ಗುಂಡ್ಯಕ್ಕೆ ಜಾಲಿ ಟ್ರಿಪ್ ತೆರಳಿದ್ದು, ಕಾಡಿನ

ಗುಂಡ್ಯ: ಪೊದೆಯೊಳಗೆ ಸಿಕ್ಕಿಬಿದ್ದ ಭಿನ್ನಕೋಮಿನ ಜೋಡಿ Read More »