April 2022

ಪ್ರೇತಾತ್ಮ ಉಪಟಳವೆಂದು ಠಾಣೆ ಮೆಟ್ಟಿಲೇರಿದ ಭೂಪ!

ಸಮಗ್ರ ನ್ಯೂಸ್: ಹಲವು ದೂರುಗಳನ್ನು ಹಿಡಿದುಕೊಂಡು ಸಾರ್ವಜನಿಕರು ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ವಸ್ತುಗಳ ಕಳ್ಳತನವಾಗಿದೆ ಹುಡುಕಿಕೊಡಿ ಎಂದು, ತಮ್ಮ ಪ್ರಾಣಿಗಳು ಕಳ್ಳತನವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಕೆಲವರು ಜೀವಬೆದರಿಕೆ, ತಂಟೆ, ತಕರಾರುಗಳಿಗೆ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಆದರೆ, ಇಲ್ಲೊಬ್ಬ ಯುವಕ ವಿಭಿನ್ನ ಕಾರಣಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಈ ಯುವಕನ ಹೆಸರು ವೀರಯ್ಯ ಹಿರೇಮಠ. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಕಾಲ್ವೆಕಲ್ಲಾಪುರ ಗ್ರಾಮದ ಯುವಕ. ಪಿಯುಸಿ ಓದಿಕೊಂಡಿರುವ ವೀರಯ್ಯ ಹಿರೇಮಠಗೆ ಯಾರೋ ವಾಮಾಚಾರ ಮಾಡಿಸಿದ್ದಾರಂತೆ. ಹೀಗಾಗಿ […]

ಪ್ರೇತಾತ್ಮ ಉಪಟಳವೆಂದು ಠಾಣೆ ಮೆಟ್ಟಿಲೇರಿದ ಭೂಪ! Read More »

ಮಂಗಳೂರು: ನಿಯಮಬಾಹಿರ ಧ್ವನಿವರ್ಧಕ ಬಳಕೆ;1001 ಸ್ಥಳಗಳಿಗೆ ನೊಟೀಸ್

ಸಮಗ್ರ ನ್ಯೂಸ್: ಹೈಕೋರ್ಟ್ ಆದೇಶ, ಸರ್ಕಾರದ ನಿಯಮ ಮೀರಿ ಧ್ವನಿವರ್ಧಕ ಬಳಕೆಯನ್ನು ತಡೆಯಲು ಮಂಗಳೂರು ಪೊಲೀಸರು ಮುಂದಾಗಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 1001 ಸ್ಥಳಗಳಿಗೆ ಪೊಲೀಸರು ನೋಟಿಸ್​ ನೀಡಿದ್ದು, ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ. ಮಂಗಳೂರು ನಗರದ 357 ದೇವಸ್ಥಾನ, 168 ಚರ್ಚ್, 95 ಚರ್ಚ್​, 106 ಶಿಕ್ಷಣ ಸಂಸ್ಥೆಗಳು, 60 ಕೈಗಾರಿಕಾ ಸ್ಥಳಗಳು ಹಾಗೂ 98 ಮನರಂಜನಾ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಯಾಗುತ್ತಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಧ್ವನಿವರ್ಧಕಗಳ ಶಬ್ದ ಹೈಕೋರ್ಟ್​

ಮಂಗಳೂರು: ನಿಯಮಬಾಹಿರ ಧ್ವನಿವರ್ಧಕ ಬಳಕೆ;1001 ಸ್ಥಳಗಳಿಗೆ ನೊಟೀಸ್ Read More »

ಧರ್ಮ ಸಂಘರ್ಷಕ್ಕೆ ಕಾರಣವಾಗಿರುವ ಗೃಹಸಚಿವರನ್ನು ಬಂಧಿಸಿ – ಡಿಕೆಶಿ

ಸಮಗ್ರ ನ್ಯೂಸ್: ‘ಧರ್ಮಗಳ ನಡುವೆ ಸಂಘರ್ಷ ಭಾವನೆ ಮೂಡಿಸಿ, ಅಶಾಂತಿ ಸೃಷ್ಟಿಗೆ ಕಾರಣವಾಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕೂಡಲೇ ಬಂಧಿಸಿ ಕ್ರಮ ಜರುಗಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ. ಮಂಡ್ಯದ ಕೆ.ಆರ್ ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಪಘಾತದ ನಂತರದ ಜಗಳದ ವೇಳೆ ಚಂದ್ರು ಕೊಲೆಯಾಗಿದ್ದರೂ, ಉರ್ದು ಭಾಷೆ ಬರುವುದಿಲ್ಲವೆಂಬ ಕಾರಣಕ್ಕೆ ದಲಿತ ಯುವಕನ ಕೊಲೆಯಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ಆದರೆ ಸಮಾಜಕ್ಕೆ ಸತ್ಯ ತಿಳಿಸಿರುವ ಪೊಲೀಸರು ಅಭಿನಂದನೆಗೆ ಅರ್ಹರು’ ಎಂದರು.

ಧರ್ಮ ಸಂಘರ್ಷಕ್ಕೆ ಕಾರಣವಾಗಿರುವ ಗೃಹಸಚಿವರನ್ನು ಬಂಧಿಸಿ – ಡಿಕೆಶಿ Read More »

ಕಡಲತಡಿಯಲ್ಲಿ ಮನದರಸಿ ಕೈಹಿಡಿದ ಸಕ್ಕರೆ ನಾಡಿನ ಹುಡುಗ| ಆಹಾ… ಇದು ಪ್ರಕೃತಿ ಸೌಂದರ್ಯದ ಸಿಂಪಲ್ ಮದ್ವೆ!

ಸಮಗ್ರ ನ್ಯೂಸ್: ಇದೇ ಮೊದಲ ಬಾರಿಗೆ ಕಡಲ ತೀರದಲ್ಲಿ ಯುವ ಜೋಡಿಯೊಂದು ಸಪ್ತಪದಿ ತುಳಿದಿದೆ. ಸಮುದ್ರ ತೀರದಲ್ಲಿ ಸಕ್ಕರೆ ನಾಡಿನ ಜೋಡಿಯೊಂದು ಸಪ್ತಪದಿ ತುಳಿದಿದೆ. ಪ್ರಕೃತಿ ಮಡಿಲಲ್ಲಿ ಸರಳವಾಗಿ ಮದುವೆ ಆಗಿದ್ದರೂ ಪ್ರಕೃತಿಯ ಸೌಂದರ್ಯ ಮದ್ವೆಗೆ ಅದ್ದೂರಿತನ ನೀಡಿದೆ. ಈ ಜೋಡಿಯ‌ ಮದುವೆ ಫೋಟೋಗಳೂ ವೈರಲ್​ ಆಗಿದ್ದು, ವ್ಹಾವ್​ ಎನ್ನುತ್ತಿದ್ದಾರೆ ನೆಟ್ಟಿಗರು. ಮಂಡ್ಯದ ಲಿಂಗಾಯತ ಸಮುದಾಯದ ಯುವಕ-ಯುವತಿ ಕುಂದಾಪುರದ ಎಂ.ಕೋಡಿ ಸಮೀಪ ಬುಧವಾರ ಬೆಳಗ್ಗೆ ಕಡಲ ತೀರದ ಪ್ರಕೃತಿ ಮಡಿಲಲ್ಲಿ ಮದುವೆಯಾದರು. ಕಡಲ ತೀರದಲ್ಲೇ ವಿವಾಹ ಮಂಟಪ

ಕಡಲತಡಿಯಲ್ಲಿ ಮನದರಸಿ ಕೈಹಿಡಿದ ಸಕ್ಕರೆ ನಾಡಿನ ಹುಡುಗ| ಆಹಾ… ಇದು ಪ್ರಕೃತಿ ಸೌಂದರ್ಯದ ಸಿಂಪಲ್ ಮದ್ವೆ! Read More »

ಸುಳ್ಯ: ಸಂಪಾಜೆ ಮನೆ ದರೋಡೆ ಪ್ರಕರಣ| ಆರೋಪಿಗಳಿಂದ ನಗ-ನಗದು ವಶಪಡಿಸಿಕೊಂಡ ಪೊಲೀಸರು|

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಚಟ್ಟೆ ಕಲ್ಲು ಎಂಬಲ್ಲಿ ಕಳೆದ ಮಾ.20ರಂದು ನಡೆದ ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ 20ಸಾವಿರ ನಗದು, ಚಿನ್ನಾಭರಣ, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನ ವಶಪಡಿಸಿಕೊಂಡಿದ್ದಾರೆ. ಚಟ್ಟೆಕಲ್ಲಿನ ಅಂಬರೀಶ್ ಎಂಬವರ ಮನೆಗೆ ದುಷ್ಕರ್ಮಿಗಳು ಒಳಪ್ರವೇಶಿಸಿ ಮನೆಯಲ್ಲಿದ್ದ ಸುಮಾರು 1,52,000/- ನಗದು ಮತ್ತು ಸುಮಾರು 83 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ದರೋಡೆ ಮಾಡಿದ ಘಟನೆ ನಡೆದಿತ್ತು. ಈ ಬಗ್ಗೆ ತನಿಖೆ

ಸುಳ್ಯ: ಸಂಪಾಜೆ ಮನೆ ದರೋಡೆ ಪ್ರಕರಣ| ಆರೋಪಿಗಳಿಂದ ನಗ-ನಗದು ವಶಪಡಿಸಿಕೊಂಡ ಪೊಲೀಸರು| Read More »

ಮುಸ್ಕಾನ್ ಪರ ಬ್ಯಾಟಿಂಗ್ ನಡೆಸಿದ ಅಲ್ ಖೈದಾ ನಾಯಕ ಜವಾಹಿರಿ| “ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ” ಎಂದು ಅಲವತ್ತುಕೊಂಡ ಮುಸ್ಕಾನ್ ಕುಟುಂಬ

ಸಮಗ್ರ ನ್ಯೂಸ್ : ನಮ್ಮನ್ನು ‌ನಮ್ಮಷ್ಟಕ್ಕೇ ಬಿಟ್ಟುಬಿಡಿ, ಹೇಗೋ ನಾವು ಜೀವನ ಮಾಡಿಕೊಂಡು ಹೋಗುತ್ತಿದ್ದೇವೆ. ನಮಗೆ ಯಾರ ಸಹಾಯ ಬೇಡ, ನಮ್ಮನ್ನು ನೆಮ್ಮದಿಯಾಗಿ ಬದುಕಲು ಬಿಟ್ಟುಬಿಡಿ ಎಂದು ಮಂಡ್ಯ‌ ವಿದ್ಯಾರ್ಥಿನಿ ಮುಸ್ಕಾನ್‌ ತಂದೆ ಮನವಿ ಮಾಡಿದ್ದಾರೆ. ಹಿಜಾಬ್‌ ಗಲಾಟೆ ವೇಳೆ “ಅಲ್ಲಾಹು ಅಕ್ಬರ್‌ ” ಎಂದು ಘೋಷಣೆ ಕೂಗಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್‌ ಪರ ಅಲ್‌ ಖೈದಾ ನಾಯಕ ಜವಾಹಿರಿ ಬ್ಯಾಟಿಂಗ್‌ ಮಾಡಿದ್ದು, ಭಾರತದ ಶ್ರೇಷ್ಠ ಮಹಿಳೆ! ಎಂದು ಕೊಂಡಾಡಿದ್ದಾನೆ. ಸಧ್ಯ ಈ ಕುರಿತು ಪ್ರತಿಕ್ರಿಯಿಸಿದ ಮುಸ್ಕಾನ್‌,

ಮುಸ್ಕಾನ್ ಪರ ಬ್ಯಾಟಿಂಗ್ ನಡೆಸಿದ ಅಲ್ ಖೈದಾ ನಾಯಕ ಜವಾಹಿರಿ| “ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ” ಎಂದು ಅಲವತ್ತುಕೊಂಡ ಮುಸ್ಕಾನ್ ಕುಟುಂಬ Read More »

ನೈತಿಕ ಪೊಲೀಸ್ ಗಿರಿಯಲ್ಲಿ ಭಜರಂಗದಳ ಕಾರ್ಯಕರ್ತರ ಬಂಧನ| ತನಗೇನೂ ಸಂಬಂಧವಿಲ್ಲವೆಂದು ತೆರಳಿದ ಶಾಸಕ ಸಂಜೀವ ಮಠಂದೂರು| ಧಿಕ್ಕಾರ ಕೂಗಿದ ಕಾರ್ಯಕರ್ತರು

ಸಮಗ್ರ ನ್ಯೂಸ್: ನೈತಿಕ ಪೊಲೀಸ್ ಗಿರಿ ಆರೋಪದಡಿ ಹಿಂದೂ ಕಾರ್ಯಕರ್ತರ ಬಂಧನ ಮಾಡಿದ್ದನ್ನು ಆಕ್ಷೇಪಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಪುತ್ತೂರು ಶಾಸಕ ಸಂಜೀವ ಮಠಂದೂರು ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ತಡರಾತ್ರಿ ದ.ಕ ಜಿಲ್ಲೆಯ ಉಪ್ಪಿನಂಗಡಿ ಬಳಿ ಶಾಸಕ ಸಂಜೀವ ಮಠಂದೂರು ತಡೆದು ಕಾರ್ಯಕರ್ತರು ವಾಗ್ವಾದ ನಡೆಸಿದ್ದಾರೆ. ಮನೆಯಲ್ಲಿದ್ದೇನೆ ಎಂದು ಹೇಳಿ ಶಾಸಕ ಮಠಂದೂರು ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಉಪ್ಪಿನಂಗಡಿ ಬಳಿ ತಡೆದು ಧಿಕ್ಕಾರ ಕೂಗಿದ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಪರ ನಿಲ್ಲದ ಹಿನ್ನೆಲೆ ಶಾಸಕರ ವಿರುದ್ದ

ನೈತಿಕ ಪೊಲೀಸ್ ಗಿರಿಯಲ್ಲಿ ಭಜರಂಗದಳ ಕಾರ್ಯಕರ್ತರ ಬಂಧನ| ತನಗೇನೂ ಸಂಬಂಧವಿಲ್ಲವೆಂದು ತೆರಳಿದ ಶಾಸಕ ಸಂಜೀವ ಮಠಂದೂರು| ಧಿಕ್ಕಾರ ಕೂಗಿದ ಕಾರ್ಯಕರ್ತರು Read More »

ಉಡುಪಿ: ಟೈಮಿಂಗ್ಸ್ ವಿಚಾರ – ಸಿಟಿ ಬಸ್ ಕಂಡಕ್ಟರ್‌ಗಳ ನಡುವೆ ಮಾರಾಮಾರಿ

ಸಮಗ್ಎ ನ್ಯೂಸ್: ಉಡುಪಿಯ ಸಿಟಿ ಬಸ್ ನಿಲ್ದಾಣದಲ್ಲಿ ಟೈಮಿಂಗ್ ವಿಷಯದಲ್ಲಿ ಖಾಸಗಿ ಬಸ್ ನಿರ್ವಾಹಕರು ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಘಟನೆ ನಡೆದಿದೆ. ಖಾಸಗಿ ಬಸ್ ನಿರ್ವಾಹಕರ ನಡುವೆ ಟೈಮಿಂಗ್ಸ್ ವಿಚಾರವಾಗಿ ಮಾತಿಗೆ ಮಾತು ಬೆಳೆದು ಸಿಟಿ ಬಸ್ ನಿಲ್ದಾಣದಲ್ಲೇ ಹೊಡೆದಾಡಿಕೊಂಡಿದ್ದಾರೆ. ಇನ್ನು ಹೂಡೆ ಕೆಮ್ಮಣ್ಣು ಕಡೆ ತೆರಳುವ ಈ ಎರಡು ಬಸ್‌ಗಳ ಕಂಡಕ್ಟರ್‌ಗಳು ಟೈಮಿಂಗ್ಸ್ ವಿಚಾರದಲ್ಲಿ ಹೊಡೆದಾಡಿಕೊಂಡಿದ್ದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಉಡುಪಿ: ಟೈಮಿಂಗ್ಸ್ ವಿಚಾರ – ಸಿಟಿ ಬಸ್ ಕಂಡಕ್ಟರ್‌ಗಳ ನಡುವೆ ಮಾರಾಮಾರಿ Read More »

ಯುವಕನ ಅಪಹರಿಸಿ ಲೈಂಗಿಕ ದೌರ್ಜನ್ಯ| ಉಡುಪಿ ಮೂಲದ‌ ನಟೋರಿಯಸ್ ಗಳಿಗೆ ಗುಂಡೇಟು|

ಸಮಗ್ರ ನ್ಯೂಸ್: ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅಪಹರಿಸಿ ಹಣ ದರೋಡೆ ಮಾಡಿದಲ್ಲದೆ, ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಉಡುಪಿ ಮೂಲದ ಇಬ್ಬರು ನಟೋರಿಯಸ್ ಸುಲಿಗೆಕೋರರಿಗೆ ಕೊತ್ತನೂರು ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಉಡುಪಿಯ ಕಾಪು ತಾಲೂಕಿನ ಮೊಹಮ್ಮದ್ ಆಶೀಕ್ ಮತ್ತು ಕುಂದಾಪುರ ತಾಲೂಕಿನ ಇಸಾಕ್ ಎಂಬವರಿಗೆ ಗುಂಡೇಟು ಬಿದ್ದಿದ್ದು, ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಂದ ಹತ್ತು ಮೊಬೈಲ್‌ಗಳು, ಒಂದು ಕಾರು ವಶಕ್ಕೆಪಡೆಯಲಾಗಿದೆ. ಮಾ.26 ರಂದು ಮುಂಜಾನೆ 5 ಗಂಟೆ ಸುಮಾರಿಗೆ ನಂಬರ್ ಪ್ಲೇಟ್ ಇಲ್ಲದ

ಯುವಕನ ಅಪಹರಿಸಿ ಲೈಂಗಿಕ ದೌರ್ಜನ್ಯ| ಉಡುಪಿ ಮೂಲದ‌ ನಟೋರಿಯಸ್ ಗಳಿಗೆ ಗುಂಡೇಟು| Read More »

ಮಡಿಕೇರಿ: ಧರ್ಮಸಂಘರ್ಷದ‌ ನಡುವೆ ಸಹಬಾಳ್ವೆಗಾಗಿ ದೇವಾಲಯದಲ್ಲಿ ಪ್ರಾರ್ಥಿಸಿದ ಮುಸ್ಲಿಂ ಮಹಿಳೆ!

ಸಮಗ್ರ ನ್ಯೂಸ್: ರಾಜ್ಯದಲ್ಲಿ ಧರ್ಮಗಳ ಮಧ್ಯೆ ಹಲವು ದಿನಗಳಿಂದ ನಡೆಯುತ್ತಿರುವ ಸಂಘರ್ಷಗಳ ನಡುವೆ ಹಿಂದೂ, ಮುಸ್ಲಿಮರು ಭಾವೈಕ್ಯತೆಯಿಂದ ಒಟ್ಟಾಗಿ ಬಾಳುವಂತೆ ಮಾಡಿ ಎಂದು ಹಿಂದೂ ದೇವಾಲಯದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ವಿಶೇಷ ಪ್ರಾರ್ಥನೆ ಮಾಡಿದ ಅಪರೂಪದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ರಾಜ್ಯದಲ್ಲಿ ಹಿಜಾಬ್ ವಿವಾದದ ಬಳಿಕ ಹಿಂದೂ ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಇದನ್ನು ಗಮನಿಸಿದ ಬಳಿಕ ಹಾವೇರಿ ಮೂಲದ ರಜಿಯಾ, ಮಡಿಕೇರಿ ನಗರದ ಮುನೇಶ್ವರ ದೇವಾಲಯದ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಹಿಂದೂ-ಮುಸ್ಲಿಂ

ಮಡಿಕೇರಿ: ಧರ್ಮಸಂಘರ್ಷದ‌ ನಡುವೆ ಸಹಬಾಳ್ವೆಗಾಗಿ ದೇವಾಲಯದಲ್ಲಿ ಪ್ರಾರ್ಥಿಸಿದ ಮುಸ್ಲಿಂ ಮಹಿಳೆ! Read More »