April 2022

10 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಸಾಗಾಟ: ಆರೋಪಿ ಅಂದರ್

ಸಮಗ್ರ ನ್ಯೂಸ್: ಕಾಸರಗೋಡು ಡಿ ವೈ ಎಸ್ಪಿ.ವಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ಹವಾಜ್ ಕೆ.ಪಿ (28) ಯವರನ್ನು ಬಂಧಿಸಿದ್ದಾರೆ. ಹವಾಜ್ ಕೆ.ಪಿ ಕಾಸರಗೋಡು ರೈಲ್ವೆ ನಿಲ್ದಾಣ ಸಮೀಪದ ನಿವಾಸಿ ಎಂದು ಗುರುತಿಸಲಾಗಿದೆ ಗುರುತಿಸಲಾಗಿದೆ. ಈತ ಕಾಸರಗೋಡಿಗೆ ಮಾದಕ ವಸ್ತುವನ್ನು ದೆಹಲಿಯಿಂದ ತಲಪಿಸುತ್ತಿರುವ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

10 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಸಾಗಾಟ: ಆರೋಪಿ ಅಂದರ್ Read More »

ಮಂಗಳೂರು: ಬಾಟಲ್, ಚಾಕುವಿನಿಂದ ತಿವಿದು ರೌಡಿಶೀಟರ್ ನ ಬರ್ಬರ ಹತ್ಯೆ

ಸಮಗ್ರ ನ್ಯೂಸ್: ಮಂಗಳೂರಿನ‌ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಕೆರೆಯಲ್ಲಿ ಯುವಕನನ್ನು ತಂಡವೊಂದು ಕೊಲೆಗೈದ ಘಟನೆ ಗುರುವಾರ ನಡೆದಿದೆ. ಕೊಲೆಯಾದ ಯುವಕನನ್ನು ರಾಹುಲ್ ಎಂದು ಗುರುತಿಸಲಾಗಿದೆ. ಈತ ರೌಡಿಶೀಟರ್ ಎನ್ನಲಾಗುತ್ತಿದ್ದು ವೈಯಕ್ತಿಕ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಾಲ್ಕು ಮಂದಿ ದುಷ್ಕರ್ಮಿಗಳು ಪೂರ್ವದ್ವೇಷದ ಹಿನ್ನೆಲೆಯಲ್ಲಿ ಚಾಕು, ಬಾಟಲಿಯಲ್ಲಿ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಮಂಗಳೂರು: ಬಾಟಲ್, ಚಾಕುವಿನಿಂದ ತಿವಿದು ರೌಡಿಶೀಟರ್ ನ ಬರ್ಬರ ಹತ್ಯೆ Read More »

ಹೊಸ ಇಲೆಕ್ಟಿಕ್ ಬೈಕ್ ಬಿಡುಗಡೆ ಮಾಡಬೇಡಿ| ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚನೆ|

ಸಮಗ್ರ ನ್ಯೂಸ್: ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಬೇಡಿ ಎಂದು ಸರ್ಕಾರ ಬೈಕ್ ತಯಾರಿಕಾ ಕಂಪನಿಗಳಿಗೆ ಸೂಚಿಸಿದೆ. ಬೈಕ್‌ಗಳಿಗೆ ಬೆಂಕಿ ತಗುಲುತ್ತಿರುವ, ಕೆಲವರು ಸಾವನ್ನಪ್ಪಿರುವ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೆಂಕಿ ತಗುಲಿದ ಪ್ರಕರಣಗಳ ಬಗ್ಗೆ ಪ್ರತ್ಯೇಕ ತನಿಖೆಯಾಗಬೇಕು. ಈ ತನಿಖೆ ಪೂರ್ಣಗೊಳ್ಳುವ ತನಕ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ. ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲೆಕ್ಟ್ರಿಕ್ ಬೈಕ್ ತಯಾರಿಕಾ ಕಂಪನಿಗಳ ಜೊತೆ ಸಭೆ ನಡೆಸಿದೆ. ಈ

ಹೊಸ ಇಲೆಕ್ಟಿಕ್ ಬೈಕ್ ಬಿಡುಗಡೆ ಮಾಡಬೇಡಿ| ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚನೆ| Read More »

ಬಂಟ್ವಾಳ: ಅಕ್ರಮ ದನ ಸಾಗಾಟ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚದ ಕುಕ್ಕೆಬೆಟ್ಟು ಎಂಬಲ್ಲಿ ದನಗಳನ್ನು ಪಿಕಪ್ ವಾಹನದ ಮೂಲಕ ಅಕ್ರಮವಾಗಿ ಸಾಗಿಸುತ್ತಿದ್ದಾಗ ರಕ್ಷಣೆ ಮಾಡಿದ ಘಟನೆ ತಿಳಿದು ಬಂದಿದೆ. ಜಾನುವಾರುಗಳನ್ನು ಪಿಕಪ್ ವಾಹನವೊಂದರಲ್ಲಿ ಪುತ್ತೂರಿನ ಸಾಜಾ ಎಂಬಲ್ಲಿಂದ ಅಕ್ರಮವಾಗಿ ಸಾಗಿಸುತ್ತಿದ್ದದರ ಬಗ್ಗೆ ಮಾಹಿತಿ ತಿಳಿದ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ತಿಳಿಸಿದ್ದು, ವಾಹನವನ್ನು ತಡೆದ ಪೊಲೀಸರು ದನಗಳನ್ನು ರಕ್ಷಣೆ ಮಾಡಿದ್ದಾರೆ.

ಬಂಟ್ವಾಳ: ಅಕ್ರಮ ದನ ಸಾಗಾಟ Read More »

8 ತಿಂಗಳ ತುಂಬು ಗರ್ಭಿಣಿ ಕತ್ತು ಹಿಸುಕಿ ಕೊಂದ 22 ವರ್ಷದ ಯುವಕ

ಸಮಗ್ರ ನ್ಯೂಸ್: 22 ವರ್ಷದ ಯುವಕ ಎಂಟು ತಿಂಗಳ ತುಂಬು ಗರ್ಭಿಣಿಯನ್ನು ಕತ್ತು ಹಿಸುಕಿ ಕೊಂದ ಘಟನೆ ಮುಂಬೈನಲ್ಲಿ ನಡೆದಿದೆ. ಬುಧವಾರ ನಗರ ಕುರ್ಲಾ ಪ್ರದೇಶದ ನಿವಾಸವೊಂದರಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಕೋಮಲ್ ಸಂಜಯ್ ಸೋಂಕರ್ ಎಂದು ಗುರುತಿಸಲಾಗಿದೆ. ಮಹಿಳೆಯ ಜೊತೆಗೆ ಭ್ರೂಣವು ಸಹ ಆಕೆಯ ಗರ್ಭದಲ್ಲಿಯೇ ಸಾವನ್ನಪ್ಪಿದೆ.  ಆರೋಪಿ ಅರ್ಜುನ್ ಸೋಂಕರ್ ಮೃತ ಮಹಿಳೆಯ ಪತಿ ಸಂಜಯ್ ಅವರ ಸೋದರ ಸಂಬಂಧಿಯಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಅವರೊಂದಿಗೆ ವಾಸವಾಗಿದ್ದ. ಇದೀಗ ಆರೋಪಿ ಮಹಿಳೆಯ

8 ತಿಂಗಳ ತುಂಬು ಗರ್ಭಿಣಿ ಕತ್ತು ಹಿಸುಕಿ ಕೊಂದ 22 ವರ್ಷದ ಯುವಕ Read More »

ಪೆಟ್ರೋಲ್, ಡೀಸೆಲ್‌ ತೆರಿಗೆ ಇಳಿಕೆ ವಿಚಾರ; ಸಿಎಂ ಬೊಮ್ಮಾಯಿ ನೀಡಿದ್ದಾರೆ ಗುಡ್ ನ್ಯೂಸ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತ ಮಾಡುವ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಆರ್ಥಿಕತೆಯನ್ನು ಗಮನಿಸಿದ ನಂತರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಮೇಲಿನ ತೆರಿಗೆಯನ್ನು ಕಡಿತ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಬುಧವಾರ ಕೋವಿಡ್-19 ಪರಿಸ್ಥಿತಿಯ ಕುರಿತು ಮುಖ್ಯಮಂತ್ರಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರೂ ಕೆಲವು ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್

ಪೆಟ್ರೋಲ್, ಡೀಸೆಲ್‌ ತೆರಿಗೆ ಇಳಿಕೆ ವಿಚಾರ; ಸಿಎಂ ಬೊಮ್ಮಾಯಿ ನೀಡಿದ್ದಾರೆ ಗುಡ್ ನ್ಯೂಸ್ Read More »

ಬೆಳ್ತಂಗಡಿ: ವುಡ್ ವರ್ಕ್ಸ್‌ನ ಮಾಲಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಇಲ್ಲಿನ ಪುಂಜಾಲಕಟ್ಟೆಯ ನೆರಳಕಟ್ಟೆಯ ಜಿತೇಶ್ ವುಡ್ ವರ್ಕ್ಸ್‌ನ ಮಾಲಕ ಹರೀಶ್ ಕುಲಾಲ್‌ ಎ. 28 ರಂದು ಬೆಳಿಗ್ಗೆ ತನ್ನ ಅಂಗಡಿಯಲ್ಲಿ ನೇಣು ಬಿಗಿದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನೇರಳಕಟ್ಟೆ ಕುಲಾಲು ದರ್ಖಾಸು ನಿವಾಸಿ ಹರೀಶ್(42ವ) ಎಂದು ತಿಳಿದುಬಂದಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತರು ತನ್ನ ಅಂಗಡಿಯಲ್ಲಿ ಮರದ ವಿವಿಧ ರೀತಿಯ ಪೀಠೋಪಕರಣಗಳನ್ನು ತಯಾರಿಸುತ್ತಿದ್ದರು ಅವರೊಂದಿಗೆ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಬೆಳ್ತಂಗಡಿ: ವುಡ್ ವರ್ಕ್ಸ್‌ನ ಮಾಲಕ ಆತ್ಮಹತ್ಯೆ Read More »

ಪ್ರೀತಿಸಿದಾಕೆಯ ಮೇಲೆ ವಿಕೃತಿ ತೋರಿದ ಪ್ರಿಯಕರ| ಪಾಗಲ್ ಪ್ರೇಮಿಯಿಂದ ನಡೆಯಿತು ಘೋರ ಕೃತ್ಯ

ಸಮಗ್ರ ನ್ಯೂಸ್: ಪಾಗಲ್ ಪ್ರೇಮಿಯೊಬ್ಬ ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿ ವಿಕೃತಿ ಮೆರೆದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಯುವತಿ ಮನೆಯಿಂದ ಕೆಲಸಕ್ಕೆಂದು ಕಚೇರಿಗೆ ಹೋಗುತ್ತಿದ್ದಾಗ ಬೆಂಗಳೂರಿನ ಸುಂಕದ ಕಟ್ಟೆಯ ಬಳಿ ಯುವಕ, ಯುವತಿ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದಾನೆ. ಆಸಿಡ್ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತನ್ನನ್ನು ಪ್ರೀತಿಸುವಂತೆ ಹಲವು ದಿನಗಳಿಂದ ಪಾಗಲ್ ಪ್ರೇಮಿ ಯುವತಿ ಹಿಂದೆ ಬಿದ್ದಿದ್ದ. ಆದರೆ ಯುವತಿ ನಿರಾಕರಿಸಿದ್ದಳು. ಇದೇ ಕಾರಣಕ್ಕೆ ಸೇಡಿನಿಂದ ಯುವಕ

ಪ್ರೀತಿಸಿದಾಕೆಯ ಮೇಲೆ ವಿಕೃತಿ ತೋರಿದ ಪ್ರಿಯಕರ| ಪಾಗಲ್ ಪ್ರೇಮಿಯಿಂದ ನಡೆಯಿತು ಘೋರ ಕೃತ್ಯ Read More »

ಕರ್ನಾಟಕದಲ್ಲಿ ಕನ್ನಡವೇ ಮೊದಲು| ಕಿಚ್ಚನ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ

ಸಮಗ್ರ ನ್ಯೂಸ್: ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದು ನಟ ಕಿಚ್ಚ ಸುದೀಪ್ ಹೇಳಿಕೆಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಈಗಾಗಲೇ ಬೆಂಬಲ ಸೂಚಿಸಿದ್ದಾರೆ. ಆದರೆ ಇದೀಗ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಸುದೀಪ್ ಪರ ನಿಂತಿದ್ದಾರೆ. ಭಾಷಾವಾರು, ಪ್ರಾಂತವಾರು ಆದ ಮೇಲೆ ಎಲ್ಲವೂ ಮಾತೃಭಾಷೆ ಆಗಿದೆ. ನಮ್ಮ ರಾಜ್ಯದಲ್ಲಿ ಕನ್ನಡವೇ ಸಾರ್ವಭೌಮ ಎಂದು ನಟ ಸುದೀಪ್ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆಯ ಕುರಿತು ಕಿಚ್ಚ ಸುದೀಪ್ ಮತ್ತು

ಕರ್ನಾಟಕದಲ್ಲಿ ಕನ್ನಡವೇ ಮೊದಲು| ಕಿಚ್ಚನ ಬೆನ್ನಿಗೆ ನಿಂತ ಸಿಎಂ ಬೊಮ್ಮಾಯಿ Read More »

ಕೋವಿಡ್ ಲಾಕ್ ಡೌನ್ ಎಫೆಕ್ಟ್| ದೇಶದಲ್ಲಿ ದಿಢೀರ್ ಏರಿಕೆಯಾದ ಹೆಚ್ಐವಿ| ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡಿದ ಮಾರಕ ರೋಗ

ಸಮಗ್ರ ನ್ಯೂಸ್: ಕೋವಿಡ್​-19 ಹಾವಳಿಯಿಂದಾಗಿ ಹೇರಲಾಗಿದ್ದ ಲಾಕ್​ಡೌನ್​ ಸಂದರ್ಭದಲ್ಲಿನ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಾಗಿ ಉಂಟಾಗಿರುವ ಮಾರಕ ಸಂಗತಿಯೊಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯಿಂದಾಗಿ ಬಹಿರಂಗಗೊಂಡಿದೆ. ಮಧ್ಯಪ್ರದೇಶದ ಆರ್​ಟಿಐ ಕಾರ್ಯಕರ್ತ ಚಂದ್ರೇಶೇಖರ್​ ಗೌರ್ ಎಂಬಾತ ಕೇಳಿದ್ದ ಪ್ರಶ್ನೆಗೆ ಸಿಕ್ಕ ಉತ್ತರ ಭಯಂಕರ ವಿಷಯವೊಂದನ್ನು ಬೆಳಕಿಗೆ ತಂದಿದೆ. ಈತ ಸಲ್ಲಿಸಿದ್ದ ಅರ್ಜಿಗೆ ರಾಷ್ಟ್ರೀಯ ಏಯ್ಡ್ಸ್​ ತಡೆ ಸಂಸ್ಥೆ ನೀಡಿರುವ ಉತ್ತರ ಚಿಂತೆಗೀಡು ಮಾಡುವಂತಿದೆ. ಲಾಕ್​ಡೌನ್​ ಅವಧಿಯಲ್ಲಿನ ಅಸುರಕ್ಷಿತ ಸಂಭೋಗದಿಂದಾಗಿ ದೇಶದಲ್ಲಿ 85 ಸಾವಿರಕ್ಕೂ ಅಧಿಕ ಮಂದಿ ಏಯ್ಡ್ಸ್​ ಸೋಂಕಿಗೆ

ಕೋವಿಡ್ ಲಾಕ್ ಡೌನ್ ಎಫೆಕ್ಟ್| ದೇಶದಲ್ಲಿ ದಿಢೀರ್ ಏರಿಕೆಯಾದ ಹೆಚ್ಐವಿ| ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡಿದ ಮಾರಕ ರೋಗ Read More »