April 2022

ದ.ಕ ದಲ್ಲಿ ರಾಕಿಭಾಯ್ ಟೆಂಪಲ್ ರನ್| ಕೆಜಿಎಫ್2 ಯಶಸ್ಸಿಗೆ ಪ್ರಾರ್ಥನೆ|

ಸಮಗ್ರ ನ್ಯೂಸ್: ಚಲನಚಿತ್ರ ನಟ ರಾಕಿಂಗ್ ಸ್ಟಾರ್ ಯಶ್ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಅವರು ಬಳಿಕ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗೆಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇದೇ ಏ.14ರಂದು ಬಿಡುಗಡೆಯಾಗಲಿರುವ ಕೆ.ಜಿ.ಎಫ್.2 ಚಿತ್ರದ ಹಿನ್ನೆಲೆ‌ ಮಂಜುನಾಥ ಸ್ವಾಮಿ ದರ್ಶನ ಪಡೆದು ಆಶೀರ್ವಾದ ಪಡೆದಿದ್ದಾರೆ. ಯಶ್ ಜತೆ ಕೆ.ಜಿ.ಎಫ್.2 ನಿರ್ಮಾಪಕ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಂಗದೂರು ಇದ್ದರು.ಇತ್ತೀಚೆಗಷ್ಟೇ […]

ದ.ಕ ದಲ್ಲಿ ರಾಕಿಭಾಯ್ ಟೆಂಪಲ್ ರನ್| ಕೆಜಿಎಫ್2 ಯಶಸ್ಸಿಗೆ ಪ್ರಾರ್ಥನೆ| Read More »

ಮಳೆ ಅನಾಹುತ; ಸಿಡಿಲಿಗೆ ಯುವಕ ಬಲಿ, ಎತ್ತುಗಳು ಆಹುತಿ

ಸಮಗ್ರ ನ್ಯೂಸ್: ಮಳೆ ಅನಾಹುತದಲ್ಲಿ ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಂಕನೇರಿ ಗ್ರಾಮದಲ್ಲಿ ನಡೆದಿದೆ. ನಾಗರಾಜ (22) ಮೃತಪಟ್ಟವರು. ಶೇಂಗಾ ಬೆಳೆಯ ಬಣವೆಗೆ ತಾಡಪಲ್ ಹೊದಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಮೃತಪಟ್ಟಿವೆ. ಅಲ್ಲದೇ, ಗಾಳಿ ಮಳೆಗೆ ಮನೆ ಪತ್ರಾಸ್​ಗಳು ಹಾರಿ ಹೋಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ವಿಜಯಪುರ ನಗರ, ಆಲಮಟ್ಟಿ, ತಾಳಿಕೋಟೆ ಸಿಂದಗಿ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಕಳೆದ

ಮಳೆ ಅನಾಹುತ; ಸಿಡಿಲಿಗೆ ಯುವಕ ಬಲಿ, ಎತ್ತುಗಳು ಆಹುತಿ Read More »

ಚಂದ್ರು ಹತ್ಯೆ ಪ್ರಕರಣ| ಸಿಐಡಿ‌ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಬೆಂಗಳೂರಿನ ಜೆ.ಜೆ. ನಗರದಲ್ಲಿ ಚಂದ್ರು ಕೊಲೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಚಂದ್ರು ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಸೂಚಿಸಿದ್ದೇನೆ. ನಿನ್ನೆ ಡಿಜಿ, ಐಜಿಪಿ ಮತ್ತು ಕಮಿಷನರ್ ಕರೆದು ಮಾತನಾಡಿದ್ದೇನೆ. ಇಂದು ನಗರ ಪೊಲೀಸ್ ಆಯುಕ್ತರು ಸಿಐಡಿಗೆ ಚಂದ್ರು ಹತ್ಯೆ ಕೇಸ್ ಹಸ್ತಾಂತರ ಮಾಡಲಿದ್ದಾರೆ.ಆರೋಪ ಪ್ರತ್ಯಾರೋಪ ಏನೇ ಇರಲಿ ಸತ್ಯ ಹೊರಬರಲೇಬೇಕು ಎಂದು

ಚಂದ್ರು ಹತ್ಯೆ ಪ್ರಕರಣ| ಸಿಐಡಿ‌ ತನಿಖೆಗೆ ರಾಜ್ಯ ಸರ್ಕಾರ ಆದೇಶ Read More »

ಕರಾವಳಿ ಸೇರಿದಂತೆ ರಾಜ್ಯದ್ಯಂತ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ರಾಜ್ಯಾದ್ಯಂತ ಇನ್ನೆರಡು ದಿನ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ಮೈಸೂರು, ಹಾಸನದಲ್ಲಿ ಮಳೆಯ ಆರ್ಭಟ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೆರಡು ದಿನ ಗುಡುಗು ಸಹಿತ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ

ಕರಾವಳಿ ಸೇರಿದಂತೆ ರಾಜ್ಯದ್ಯಂತ ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ Read More »

“ಇಮ್ರಾನ್ ಒಬ್ಬ ಹುಚ್ಚ; ಭಾರತದೊಂದಿಗೆ ಅಷ್ಟು ಪ್ರೀತಿಯಿದ್ದರೆ ಅಲ್ಲಿಗೇ ಹೋಗಲಿ” – ಮರಿಯಂ ನವಾಜ್

ಸಮಗ್ರ ನ್ಯೂಸ್: ಭಾರತವನ್ನು ಬಹುವಾಗಿ ಹೊಗಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ವಿರೋಧ ಪಕ್ಷ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ನ ಉಪಾಧ್ಯಕ್ಷೆ ಮರಿಯಂ ನವಾಜ್‌ ಹರಿಹಾಯ್ದಿದ್ದಾರೆ. ಭಾರತವು ಇಮ್ರಾನ್‌ಗೆ ಅಷ್ಟೊಂದು ಇಷ್ಟ ಎಂದಾದರೆ ಅವರು ಅಲ್ಲಿಗೇ ಹೋಗಲಿ ಎಂದಿದ್ದಾರೆ. ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿ ಭಾರತದ ಯಾವ ಪ್ರಧಾನಿಯೂ ಸಂವಿಧಾನವನ್ನು ಉಲ್ಲಂಘಿಸಿದ ಉದಾಹರಣೆ ಇಲ್ಲ. ಇದನ್ನು ಇಮ್ರಾನ್‌ ಅವರೂ ಅನುಸರಿಸಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರ ಮಗಳು ಮರಿಯಂ ಹೇಳಿದ್ದಾರೆ. ‘ಅತ್ಯಂತ ಹೆಮ್ಮೆಯ ಭಾವವನ್ನು

“ಇಮ್ರಾನ್ ಒಬ್ಬ ಹುಚ್ಚ; ಭಾರತದೊಂದಿಗೆ ಅಷ್ಟು ಪ್ರೀತಿಯಿದ್ದರೆ ಅಲ್ಲಿಗೇ ಹೋಗಲಿ” – ಮರಿಯಂ ನವಾಜ್ Read More »

ದ್ವಾದಶ ರಾಶಿಗಳ. ವಾರಭವಿಷ್ಯ

ಮೇಷ ರಾಶಿ: ವೃತ್ತಿರಂಗದ ಬಗ್ಗೆ ಸಂತೋಷವಿರುತ್ತದೆ. ಗುತ್ತಿಗೆ ವ್ಯವಹಾರಸ್ತರಿಗೆ ಹಣದ ಹರಿವು ಚೆನ್ನಾಗಿರುತ್ತದೆ.ನೆರೆಹೊರೆಯವರ ಜೊತೆ ನಿಷ್ಠುರವಾಗಿ ಅವರಿಂದ ದೂರವಾಗುವ ಸಾಧ್ಯತೆಗಳಿವೆ. ನಿಮ್ಮ ಸ್ವಂತ ವಿವೇಚನೆಯಿಂದ ಕೆಲವೊಂದು ಅಂತ ಕಲಹಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿರುತ್ತದೆ. ಲಲಿತಕಲೆ ಪರಿಣಿತರಿಗೆ ಪ್ರದರ್ಶನ ಮಾಡುವ ಅವಕಾಶಗಳು ದೊರೆಯಲು ಆರಂಭಿಸುತ್ತವೆ. ನಿಮ್ಮ ವಿಶ್ವಾಸಿಗಳಿಗೆ ಅನಿವಾರ್ಯವಾಗಿ ಧನಸಹಾಯ ಮಾಡಬೇಕಾಗುತ್ತದೆ. ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಅನುಕೂಲಕರ ವಾತಾವರಣ ದೊರೆಯುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಕಣ್ಣಿನ ಸಮಸ್ಯೆ ಕಾಡಬಹುದು. ವೃಷಭ ರಾಶಿ:

ದ್ವಾದಶ ರಾಶಿಗಳ. ವಾರಭವಿಷ್ಯ Read More »

ಪುತ್ತೂರು: ಬಿಜೆಪಿ ಕಾರ್ಯಕರ್ತನಿಗೆ ಕೊಲೆ‌ ಬೆದರಿಕೆ; ದೂರು ದಾಖಲು

ಸಮಗ್ರ ನ್ಯೂಸ್: ಅನಾಮಧೇಯ ಕರೆ ಮಾಡಿ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ಕಾರ್ಯಕರ್ತರೋರ್ವರಿಗೆ ಜೀವ ಬೆದರಿಕೆ ಒಡ್ಡಿದ್ದು ಈ ಕುರಿತು ಪುತ್ತೂರು ತಾಲೂಕಿನ ಸಂಪ್ಯ ಹೊರಠಾಣೆಯಲ್ಲಿ ದೂರು ದಾಖಲಾಗಿದೆ. ಬಿಜೆಪಿ ಕಾರ್ಯಕರ್ತ ಅಬ್ದುಲ್ ರಜಾಕ್ ಬಡಗನ್ನೂರು ಇವರು ದೂರು ನೀಡಿದವರು. ಅಬ್ದುಲ್ ರಜಾಕ್ ಗೆ ಅನಾಮಧೇಯ ಫೋನ್ ನಂಬರ್ ನಿಂದ ಬೆದರಿಕೆ ಕರೆ ಬಂದಿದ್ದು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ, ಇರಿದು ಕೊಲೆ ಮಾಡುತ್ತೇವೆ ಎಂಬುದಾಗಿ ಬೆದರಿಕೆ‌ ಒಡ್ಡಿದ್ದು, ಈ ಸಂಬಂಧ ಇಂದು ಸಂಪ್ಯ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪುತ್ತೂರು: ಬಿಜೆಪಿ ಕಾರ್ಯಕರ್ತನಿಗೆ ಕೊಲೆ‌ ಬೆದರಿಕೆ; ದೂರು ದಾಖಲು Read More »

ಮಳೆ ಅವಾಂತರ: ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮರ ಬಿದ್ದು ಜಖಂಗೊಂಡ ಯಾತ್ರಾರ್ಥಿಗಳ ಕಾರು|

ಸಮಗ್ರ ನ್ಯೂಸ್: ಅವಿಭಜಿತ ಸುಳ್ಯ ತಾಲೂಕಿನಲ್ಲಿ ಇಂದು ಸಂಜೆ ಭಾರೀ ಮಳೆ‌ಸುರಿದಿದ್ದು, ಮಳೆ ಅವಾಂತರಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾತ್ರಾರ್ಥಿಗಳ ಕಾರು ಜಖಂಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆಯ ಬಾರೀ ಗುಡುಗು ಸಹಿತ ಗಾಳಿ ಮಳೆಗೆ ಕಾರೊಂದರ ಮೇಲೆ ಮರದ ರೆಂಬೆ ಮುರಿದು ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟದ ಬಳಿಯಲ್ಲಿ ಘಟನೆ ನಡೆದಿದ್ದು, ದಾವಣಗೆರೆಯಿಂದ ಯಾತ್ರಿಕರಾಗಿ ಬಂದಿರುವವರ ಕಾರು ಘಟನೆಯಲ್ಲಿ ಜಖಂಗೊಂಡಿರುವುದು ಎಂದು ತಿಳಿದುಬಂದಿದೆ. ಇಲ್ಲಿನ ಬೃಹತ್ ಮರದ ರೆಂಬೆ ಮುರಿದು

ಮಳೆ ಅವಾಂತರ: ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮರ ಬಿದ್ದು ಜಖಂಗೊಂಡ ಯಾತ್ರಾರ್ಥಿಗಳ ಕಾರು| Read More »

ಪುತ್ತೂರು ಜಾತ್ರೆಗೂ ತಟ್ಟಿದ ಧರ್ಮದ್ವೇಷ| ಅನ್ಯಮತೀಯರ ಅಟೋ ಬಳಸದಂತೆ ಕ್ಯಾಂಪೇನ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವಾಗ ಅನ್ಯಧರ್ಮೀಯರ ಕ್ಯಾಬ್ ಬಳಸದಂತೆ ಕರೆ ನೀಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮತ್ತೊಂದು ಅಭಿಯಾನ ಆರಂಭವಾಗಿದೆ. ಹತ್ತು ದಿನಗಳ ಕಾಲ ನಡೆಯುವ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ವೇಳೆ ಹಿಂದೂಗಳು ಭಗವಾ ಧ್ವಜ ಇರುವ ಹಿಂದೂಗಳ ಆಟೋವನ್ನು ಹೊರತುಪಡಿಸಿ ಇತರ ಆಟೋಗಳನ್ನು ಬಳಸದಂತೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ. ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ವ್ಯಾಪಾರ ನಿರ್ಬಂಧದ

ಪುತ್ತೂರು ಜಾತ್ರೆಗೂ ತಟ್ಟಿದ ಧರ್ಮದ್ವೇಷ| ಅನ್ಯಮತೀಯರ ಅಟೋ ಬಳಸದಂತೆ ಕ್ಯಾಂಪೇನ್ Read More »

ಮಂಗಳೂರು: ಡಿವೈಡರ್ ಗೆ ಡಿಕ್ಕಿ ಹೊಡೆದ ಬಿಎಂಡಬ್ಲ್ಯೂ| ಸ್ಕೂಟಿ ಸವಾರೆ ಗಂಭೀರ

ಸಮಗ್ರ ನ್ಯೂಸ್: ಅತಿವೇಗದಿಂದ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು ಡಿವೈಡರ್ ಮೇಲಕ್ಕೆ ಹಾರಿ ಮತ್ತೊಂದು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳೂರಿನ ಬಲ್ಲಾಳ್‌ಬಾಗ್‌ನಲ್ಲಿ ನಡೆದಿದೆ. ಬಿಎಂಡಬ್ಲ್ಯು ಕಾರು ಚಾಲಕ ಮದ್ಯ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ರಸ್ತೆ ದಾಟಲು ಡಿವೈಡರ್ ಮೇಲೆ ನಿಂತಿದ್ದ ಇನ್ನೋರ್ವ ಮಹಿಳೆಯು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಡಿವೈಡರ್ ಮೇಲಿಂದ ಹಾರಿ ರಸ್ತೆಯ ಇನ್ನೊಂದು ಬದಿಗೆ ಬರುತ್ತಿರುವ ಸಂಪೂರ್ಣ

ಮಂಗಳೂರು: ಡಿವೈಡರ್ ಗೆ ಡಿಕ್ಕಿ ಹೊಡೆದ ಬಿಎಂಡಬ್ಲ್ಯೂ| ಸ್ಕೂಟಿ ಸವಾರೆ ಗಂಭೀರ Read More »