April 2022

ಹೈದರಾಬಾದ್: ರೈಲು ಹರಿದು ಐವರು ದುರ್ಮರಣ; ಹಲವರಿಗೆ ಗಾಯ

ಸಮಗ್ರ ನ್ಯೂಸ್: ವೇಗವಾಗಿ ಚಲಿಸುತ್ತಿದ್ದ ಎಕ್ಸ್ ಪ್ರೆಸ್ ರೈಲು ಹರಿದು ಐದು ಮಂದಿ ಮೃತಪಟ್ಟು, ಇತರ ಹಲವರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ. ಜಿ. ಸಿಗದಾಮ್ ಮತ್ತು ಚೀಪುರುಪಲ್ಲಿ ನಿಲ್ದಾಣಗಳ ನಡುವೆ ರಾತ್ರಿ 9ರ ಬಳಿಕ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. “ಕೊಯಮತ್ತೂರು- ಸಿಲ್ಚರ್ ಎಕ್ಸ್ ಪ್ರೆಸ್ ರೈಲು (ನಂ.12515) ಚಲಿಸುತ್ತಿದ್ದ ವೇಳೆ ವಿಶಾಖಪಟ್ಟಣಂ ಪಲಸ ಮೈನ್ ಲೇನ್ ಮಧ್ಯದಲ್ಲಿ ಕೆಲವರು ರೈಲಿನ ಚೈನ್ ಎಳೆದರು. ರೈಲಿನಿಂದ ಕೆಳಕ್ಕಿಳಿದು ರೈಲು […]

ಹೈದರಾಬಾದ್: ರೈಲು ಹರಿದು ಐವರು ದುರ್ಮರಣ; ಹಲವರಿಗೆ ಗಾಯ Read More »

ಕಾಂಗ್ರೆಸ್ ಮುಕ್ತ ಭಾರತಕ್ಕೆ ಸಿದ್ದರಾಮಯ್ಯ ಕರೆ! ಬಿಜೆಪಿ ಟೀಕಿಸುವ ಭರದಲ್ಲಿ ಮಾಜಿ ಸಿಎಂ ಎಡವಟ್ಟು

ಸಮಗ್ರ ನ್ಯೂಸ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಕಾಂಗ್ರೆಸ್‌ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಭಾಷಣದ ವೇಳೆ ಮಾತಿನ ಭರಾಟೆಯಲ್ಲಿ ‘ಕಾಂಗ್ರೆಸ್‌ ಮುಕ್ತ ಭಾರತ’ಕ್ಕೆ ಕರೆ ನೀಡಿ ಪೇಚೆಗೆ ಸಿಲುಕಿದ ಪ್ರಸಂಗ ನಡೆಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್‌ ಮುಕ್ತ ಭಾರತ ಮಾಡಬೇಕು ಎಂದು ಹೇಳಿ ನಂತರ ಕ್ಷಮಿಸಿ ಬಿಜೆಪಿ ಮುಕ್ತ ಭಾರತ ಎಂದು ಹೇಳಲು ಹೋಗಿ ಕಾಂಗ್ರೆಸ್‌ ಮುಕ್ತ ಅಂದುಬಿಟ್ಟೆ ಎಂದು ಹೇಳಿದರು. ಸಿದ್ದರಾಮಯ್ಯ

ಕಾಂಗ್ರೆಸ್ ಮುಕ್ತ ಭಾರತಕ್ಕೆ ಸಿದ್ದರಾಮಯ್ಯ ಕರೆ! ಬಿಜೆಪಿ ಟೀಕಿಸುವ ಭರದಲ್ಲಿ ಮಾಜಿ ಸಿಎಂ ಎಡವಟ್ಟು Read More »

ಈ ಶೈಕ್ಷಣಿಕ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆ – ಸಚಿವ ಬಿ.ಸಿ ನಾಗೇಶ್

ಸಮಗ್ರ ನ್ಯೂಸ್: ಈ ವರ್ಷದಿಂದ ಪಠ್ಯದಲ್ಲಿ ಭಗವದ್ಗೀತೆ ಬೋಧನೆಗೆ ತಯಾರಿ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ,ಶಾಲೆಗಳಲ್ಲಿ ನೈತಿಕ ಶಿಕ್ಷಣಕ್ಕೆ ಒತ್ತು ನೀಡುತ್ತೇವೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಭಗವದ್ಗೀತೆ, ರಾಮಾಯಣ, ಮಹಾಭಾರತ ಸೇರಿ ನೈತಿಕ ಕತೆ ಅಳವಡಿಸಲಾಗುತ್ತದೆ.ಭಗವದ್ಗೀತೆ ಧಾರ್ಮಿಕ ಆಚರಣೆಯಲ್ಲ, ಪೂಜಾ ವಿಧಾನವಲ್ಲ, ಜೀವನಕ್ಕೆ ಬೇಕಾದ ಮಾರ್ಗದರ್ಶನ ಅಡಗಿದೆ ಎಂದು ನಾಗೇಶ್​ ಹೇಳಿದ್ದಾರೆ.

ಈ ಶೈಕ್ಷಣಿಕ ವರ್ಷದಿಂದಲೇ ಪಠ್ಯದಲ್ಲಿ ಭಗವದ್ಗೀತೆ – ಸಚಿವ ಬಿ.ಸಿ ನಾಗೇಶ್ Read More »

ಕಂಟೈನರ್ ನೊಳಗೆ ಸಾಗಾಟದಲ್ಲಿದ್ದಾಗ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ ಗಳು| ಮಹಾರಾಷ್ಟ್ರದಲ್ಲಿ ಸಂಭವಿಸಿತು ಮಹಾ ಅಗ್ನಿದುರಂತ|

ಸಮಗ್ರ ನ್ಯೂಸ್: ದೇಶದಲ್ಲಿಯೇ ಬೃಹತ್ ವಿದ್ಯುತ್ ಚಾಲಿತ ವಾಹನಗಳ ಅಗ್ನಿದುರಂತ ಸಂಭವಿಸಿದೆ. ಮಹಾರಾಷ್ಟ್ರದಿಂದ ಬೆಂಗಳೂರಿಗೆ ಎಲೆಕ್ಟ್ರಿಕ್ ಬೈಕ್ ಹೊತ್ತು ಹೊರಟಿದ್ದ ಕಂಟೇನರ್ ಬೆಂಕಿಗೆ ಆಹುತಿಯಾಗಿ 20ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬೈಕ್ ಗಳು ಭಸ್ಮಗೊಂಡಿರುವ ಘಟನೆ ನಡೆದಿದೆ. ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳ ಖರೀದಿ ಹೆಚ್ಚಳವಾಗುತ್ತಿರುವ ಹಾಗೂ ವಿದ್ಯುತ್ ಚಾಲಿತ ವಾಹನಗಳ ಸುರಕ್ಷತೆ ಬಗ್ಗೆಯೂ ಅನುಮಾನಗಳು ವ್ಯಕ್ತವಾಗುತ್ತಿವೆ. ಯಾಕೆಂದರೆ, ಅಲ್ಲಲ್ಲಿ ಎಲೆಕ್ಟ್ರಿಕ್ ಬೈಕ್ ಗಳು ದಿಢೀರ್ ಬೆಂಕಿಗೆ ಆಹುತಿಯಾಗುತ್ತಿರೋದೆ ಕಾರಣವಾಗಿದೆ. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಜಿತೇಂದ್ರ

ಕಂಟೈನರ್ ನೊಳಗೆ ಸಾಗಾಟದಲ್ಲಿದ್ದಾಗ ಹೊತ್ತಿ ಉರಿದ ಎಲೆಕ್ಟ್ರಿಕ್ ಬೈಕ್ ಗಳು| ಮಹಾರಾಷ್ಟ್ರದಲ್ಲಿ ಸಂಭವಿಸಿತು ಮಹಾ ಅಗ್ನಿದುರಂತ| Read More »

ಕನ್ನಡ ಮತ್ತು ಸಂಸ್ಕ್ರತಿ ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಗೆ ಕಲಾವಿದರಿಂದ ಆನ್‍ಲೈನ್ ಮೂಲಕ ನೋಂದಾವಣೆಗೆ ಸೂಚನೆ

ಸಮಗ್ರ ನ್ಯೂಸ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಾಹಿತಿಗಳು/ ಕಲಾವಿದರ ದತ್ತಾಂಶ ಸಂಗ್ರಹ ನೊಂದಣಿಯನ್ನು ಮಾ.31ರಂದು ಆರಂಭಿಸಿದ್ದು, ದತ್ತಾಂಶ ಸಂಗ್ರಹ ನೋಂದಣಿಗೆ ಅವಕಾಶ ನೀಡಲಾಗಿದೆ. ಪ್ರತಿಬಾರಿಯೂ ಕಲಾವಿರ ಮಾಹಿತಿಯನ್ನು ಪಡೆದುಕೊಳ್ಳಲು ಪರಾವಲಂಬಣೆ ಮಾಡಬೇಕಾಗಿರುತ್ತದೆ. ಈ ಕಲಾವಿದರ ದತ್ತಾಂಶ ಸಂಗ್ರಹದ ಪ್ರಕ್ರಿಯೆಯಿಂದ ರಾಜ್ಯದ ಕಲಾವಿದರ ಸಂಪೂರ್ಣ ಮಾಹಿತಿಯನ್ನು ದತ್ತಾಂಶ ರೂಪದಲ್ಲಿ ಸಂಗ್ರಹ ಮಾಡುವ ಈ ಅಭಿಯಾನ ಕಲಾವಿದರ ಸಮಗ್ರ ಮಾಹಿತಿ ಪೂರೈಸುವುದರಿಂದ ಇಲಾಖೆ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ದತ್ತಾಂಶ ಸಂಗ್ರಹ ರಾಜ್ಯದಾದ್ಯಂತ ಮತ್ತು ಹೊರರಾಜ್ಯಗಳು ಹಾಗೂ ಹೊರದೇಶಿಗಳಿಂದಲೂ ಕಲಾವಿದರು

ಕನ್ನಡ ಮತ್ತು ಸಂಸ್ಕ್ರತಿ ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಗೆ ಕಲಾವಿದರಿಂದ ಆನ್‍ಲೈನ್ ಮೂಲಕ ನೋಂದಾವಣೆಗೆ ಸೂಚನೆ Read More »

ಮಗುವನ್ನೂ ಚಿವುಟಿ ತೊಟ್ಟಿಲು ತೂಗುತ್ತಿರುವ ರಾಜಕೀಯ ನಾಯಕರು| ವಿಕೋಪಕ್ಕೆ ತಿರುಗಿದ ಮೇಲೆ ಹಿಂದೂ – ಮುಸ್ಲಿಂ ಭಾಯಿಭಾಯಿ ಮಂತ್ರ!

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸೃಷ್ಟಿಯಾದ ಕೋಮುವೈಷಮ್ಯ ವಿಕೋಪಕ್ಕೆ ತಿರುಗುತ್ತಿದ್ದು, ಇದೀಗ ರಾಜಕೀಯ ನಾಯಕರು ಶಾಂತಿಮಂತ್ರ ಜಪಿಸುತ್ತಿದ್ದಾರೆ. ತಾವೇ ಸೃಷ್ಟಿ ಮಾಡಿದ ಈ ಕೋಮುದ್ವೇಷವನ್ನು ಅತ್ತ ಆರಲೂ ಬಿಡದೆ ಇತ್ತ ಜೋರಾಗಲೂ ಬಿಡದೆ ಮಗುವನ್ನೂ ಚಿವುಟುತ್ತಾ ತೊಟ್ಟಿಲು ತೂಗುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಉಡುಪಿಯ ಸರ್ಕಾರಿ ಕಾಲೇಜೊಂದರಲ್ಲಿ ಹಿಜಾಬ್ ವಿವಾದ ಸೃಷ್ಟಿಯಾದ ಬಳಿಕ ಈ ವಿಚಾರ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೇ ವಿಚಾರ ವಿದ್ಯಾರ್ಥಿಗಳ ಮಧ್ಯೆ, ಧರ್ಮಗಳ ಮಧ್ಯೆ ದ್ವೇಷ ಉಂಟಾಗುವಂತೆ ಮಾಡಿತ್ತು. ಮೇಲ್ನೋಟಕ್ಕೆ ಇದು

ಮಗುವನ್ನೂ ಚಿವುಟಿ ತೊಟ್ಟಿಲು ತೂಗುತ್ತಿರುವ ರಾಜಕೀಯ ನಾಯಕರು| ವಿಕೋಪಕ್ಕೆ ತಿರುಗಿದ ಮೇಲೆ ಹಿಂದೂ – ಮುಸ್ಲಿಂ ಭಾಯಿಭಾಯಿ ಮಂತ್ರ! Read More »

ಕರ್ನಾಟಕದಲ್ಲಿ ಇಂದಿನಿಂದ ಬಿಜೆಪಿ ಚುನಾವಣೆ ಶಸ್ತ್ರಾಭ್ಯಾಸ| ಮೂರು ತಂಡದಲ್ಲಿ ರಾಜ್ಯ ಪ್ರವಾಸಕ್ಕೆ ಕೇಸರಿ ಪಡೆ ಸನ್ನದ್ಧ

ಸಮಗ್ರ ನ್ಯೂಸ್: ಮುಂಬರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಬಿಜೆಪಿ ಹಿರಿಯ ನಾಯಕರನ್ನು ಒಳಗೊಂಡ ಮೂರು ತಂಡಗಳ ನೇತೃತ್ವದ ರಾಜ್ಯ ಪ್ರವಾಸ ಮಂಗಳವಾರದಿಂದ ಆರಂಭವಾಗಲಿದೆ. ಮಂಗಳವಾರದಿಂದ ಈ ತಿಂಗಳ 24ರವರೆಗೆ ಅಂದರೆ, 12 ದಿನಗಳ ಕಾಲ ಮೂರು ತಂಡಗಳು ಪ್ರವಾಸ ನಡೆಸಲಿವೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮೂರು ತಂಡಗಳು ರಚನೆಯಾಗಿದ್ದು, ಅವುಗಳಲ್ಲಿ ಹಿರಿಯ ನಾಯಕರು ಇದ್ದಾರೆ. ಈ ತಂಡಗಳು

ಕರ್ನಾಟಕದಲ್ಲಿ ಇಂದಿನಿಂದ ಬಿಜೆಪಿ ಚುನಾವಣೆ ಶಸ್ತ್ರಾಭ್ಯಾಸ| ಮೂರು ತಂಡದಲ್ಲಿ ರಾಜ್ಯ ಪ್ರವಾಸಕ್ಕೆ ಕೇಸರಿ ಪಡೆ ಸನ್ನದ್ಧ Read More »

ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿದ ವೃದ್ಧ| ಪಂಚಾಯತಿ ನಡೆಸಿ ಮುಚ್ಚಿಹಾಕಲು ಯತ್ನ!

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಗೆ ಸಂಬಂಧಿ ವೃದ್ಧನೋರ್ವ ಲೈಂಗಿಕ ಕಿರುಕುಳ ನೀಡಿ ಗರ್ಭವತಿಯಾಗಿರುವ ಘಟನೆ ಪಶ್ಚಿಮ ಚಂಪಾರನ್ ಜಿಲ್ಲೆಯ ಬಗಾಹ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವೃದ್ಧನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಈ ವಿಷಯವನ್ನು ಮುಚ್ಚಿಡಲು ಸಂತ್ರಸ್ತೆಯ ಮನೆಯವರ ಮೇಲೆ ಒತ್ತಡ ಹೇರಿ ಪಂಚಾಯಿತಿ ನಡೆಸಿರುವುದಾಗಿ ತಿಳಿದುಬಂದಿದೆ. ವೃದ್ಧ ತನ್ನ ಮನೆಯಲ್ಲಿ ಯಾರೂ ಇಲ್ಲ ಎಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆಹಾರ ತಯಾರಿಸಿಕೊಡಲು ಕರೆಸಿಕೊಂಡಿದ್ದ. ಬಾಲಕಿ ತಂದೆಯ ಒಪ್ಪಿಗೆಯಂತೆ ಆಹಾರ ಮಾಡಿಕೊಡಲು ಸಂಬಂಧಿ ವೃಧ್ದನ ಮನೆಗೆ

ಅಪ್ರಾಪ್ತೆಯನ್ನು ಗರ್ಭಿಣಿಯನ್ನಾಗಿಸಿದ ವೃದ್ಧ| ಪಂಚಾಯತಿ ನಡೆಸಿ ಮುಚ್ಚಿಹಾಕಲು ಯತ್ನ! Read More »

ಮಹಿಳೆಯಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಹತ್ಯೆಗೈಯಲು ಯತ್ನಿಸಿದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಐವರು ದುಷ್ಕರ್ಮಿಗಳು ಆಕೆಯ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆಗೈಯ್ಯಲು ಯತ್ನಿಸಿದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ನಮಕ್ಕಾನ ಪೊಲೀಸ್ ಠಾಣೆಯ ದಕ್ಷಿಣ 24 ಪ್ಯಾರಗಾನ್ಸ್ ನಲ್ಲಿ ಏಪ್ರಿಲ್ 8ರಂದು ಈ ಘಟನೆ ನಡೆದಿದೆ. ಮನೆಯಲ್ಲಿ ಒಬ್ಬಳೇ ಇದ್ದ ಮಹಿಳೆ ಶೌಚಾಲಯಕ್ಕೆಂದು ಮನೆಯಿಂದ ಹೊರಗೆ ಹೋಗಿದ್ದಾಗ ಆಕೆಯನ್ನು 5 ಮಂದಿ ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. ಎರಡನೇ ಮಹಡಿ ಮೇಲೆ ಹೊತ್ತೊಯ್ದ ಮಹಿಳೆಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ

ಮಹಿಳೆಯಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಹತ್ಯೆಗೈಯಲು ಯತ್ನಿಸಿದ ದುಷ್ಕರ್ಮಿಗಳು Read More »

“ಮಧ್ಯಂತರ” ಕಿರುಚಿತ್ರ ಪೋಸ್ಟರ್ ರಿಲೀಸ್

ಸಮಗ್ರ ನ್ಯೂಸ್: ಹವ್ಯಾಸಿ ಕಲಾಬಳಗದ ನೇತೃತ್ವದಲ್ಲಿ ತಯಾರಾಗುತ್ತಿರುವ “ಮಧ್ಯಂತರ” ಕಿರುಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರವನ್ನು “ಐಡಿಯಾ ಬಾಸ್ಕೆಟ್” ಯೂ ಟ್ಯೂಬ್ ಚಾನಲ್ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿದ್ದು, ಚಿತ್ರಕ್ಕೆ ಡಾ. ಆದಿತ್ಯ ಭಟ್ ಚಣಿಲ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಇದೇ 14ರಂದು ರಿಲೀಸ್ ಆಗಲಿದೆ.

“ಮಧ್ಯಂತರ” ಕಿರುಚಿತ್ರ ಪೋಸ್ಟರ್ ರಿಲೀಸ್ Read More »