April 2022

ಮಂಗಳೂರು: ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ನಾಮಕರಣ

ಶ್ರೀ ನಾರಾಯಣ ಗುರುಗಳ ವಿಚಾರಧಾರೆಯೊಂದಿಗೆ ನಾವೆಲ್ಲರೂ ಬೆಳೆದು ಬಂದಿದ್ದು: ಸುನಿಲ್ ಕುಮಾರ್ ಮಂಗಳೂರು: ಮಹಾನಗರ ಪಾಲಿಕೆಯ (ಎಂಸಿಸಿ) ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ ನಂತರ ಲೇಡಿಹಿಲ್ ವೃತ್ತವನ್ನು ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಎಂದು ಮರುನಾಮಕರಣ ಮಾಡಲಾಗಿದ್ದು, ಏಪ್ರಿಲ್ 14 ರಂದು ಗುರುವಾರ ಶಿಲಾನ್ಯಾಸ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್‌ಕುಮಾರ್‌ ಫಲಕ ಅನಾವರಣಗೊಳಿಸಿದರು. ಸುನೀಲ್ ಕುಮಾರ್ ಮಾತನಾಡಿ, ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿಚಾರಧಾರೆಯೊಂದಿಗೆ ನಾವೆಲ್ಲರೂ ಬೆಳೆದು ಬಂದಿದ್ದು, ಲೇಡಿಹಿಲ್ ವೃತ್ತವನ್ನು ಬ್ರಹ್ಮ […]

ಮಂಗಳೂರು: ಲೇಡಿಹಿಲ್ ವೃತ್ತಕ್ಕೆ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ನಾಮಕರಣ Read More »

ಸುಳ್ಯ : ಸುವರ್ಣ ಟಿ. ವಿ ಮಲಯಾಳಂ ಚಾನೆಲ್ ಗೆ ಸೇರಿದ ಕಾರು ಪಲ್ಟಿ

ಸುಳ್ಯ: ಟಿವಿ ಚಾನಲ್ ಗೆ ಸೇರಿದ ಕಾರ್ ಅಜ್ಜಾವರ ಗ್ರಾಮದ ಎಂಬಲ್ಲಿ ಇಂದು ಮುಂಜಾನೆ ಪಲ್ಟಿ ಯಾಗಿ ಸವಾರರು ಜೀವಪಾಯದಿಂದ ಪಾರಾದ ಘಟನೆ ಸಂಭವಿಸಿದೆ. ಅಪಘಾತಕ್ಕೀಡಾದ ಕಾರು ಸುವರ್ಣ ಟಿವಿ ಚಾನೆಲ್ ಮಲಯಾಳಂ ಸಂಸ್ಥೆಗೆ ಸೇರಿದಾಗಿದ್ದು, ಬೆಂಗಳೂರಿನಿಂದ ಸುಳ್ಯ, ಅಜ್ಜಾವರ ಮಾರ್ಗವಾಗಿ ಕೇರಳದ ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಅಪಘಾತದಿಂದ ಸವಾರರು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ : ಸುವರ್ಣ ಟಿ. ವಿ ಮಲಯಾಳಂ ಚಾನೆಲ್ ಗೆ ಸೇರಿದ ಕಾರು ಪಲ್ಟಿ Read More »

ಸುಳ್ಯ: ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿ – ಜ್ಯೋತಿಷಿ ಸಹಿತ ಮೂವರಿಗೆ ಗಂಭೀರ ಗಾಯ

ಸುಳ್ಯ: ಕಲ್ಲುಗುಂಡಿ ಪೇಟೆಯ ಬಳಿ ಸೇತುವೆಯ ತಡೆಗೋಡೆಗೆ ಮಾರುತಿ 800 ಕಾರು ಡಿಕ್ಕಿಯಾಗಿ ಮೂವರಿಗೆ ಗಂಭೀರ ಗಾಯ ಗೊಂಡ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಕಲ್ಲುಗುಂಡಿ ನಿವಾಸಿ ಜ್ಯೋತಿಷಿ ಗುರುರಾಜ್, ಸಂಪಾಜೆ ಮೂಲದ ಪ್ರೇಮ್, ಹಾಗೂ ಮಾತೋರ್ವರೂ ಸೇರಿ ಮೂವರಿಗೆ ಗಂಭೀರ ಗಾಯಗೊಂಡವರು. ಸಂಪಾಜೆಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರು ಇದಾಗಿದ್ದು, ಮಳೆ ಬರುತ್ತಿದ್ದ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇನ್ನೂ ಗಾಯಾಗೊಂಡ ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ.

ಸುಳ್ಯ: ಸೇತುವೆಯ ತಡೆಗೋಡೆಗೆ ಕಾರು ಡಿಕ್ಕಿ – ಜ್ಯೋತಿಷಿ ಸಹಿತ ಮೂವರಿಗೆ ಗಂಭೀರ ಗಾಯ Read More »

ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ವಿದಿವಶ

ಸಮಗ್ರ ನ್ಯೂಸ್: ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ(67) ವಿಧಿವಶರಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮನೆಯಲ್ಲಿ ಬೆಳಗ್ಗೆ 6.45ಕ್ಕೆ ಹೃದಯಾಘಾತದಿಂದ ಕುಸಿದುಬಿದ್ದು ಜಿ.ವಿ.ಶ್ರೀರಾಮರೆಡ್ಡಿ ನಿಧನರಾಗಿದ್ದಾರೆ. ತಕ್ಷಣವೇ ಬಾಗೇಪಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಪಿಐಎಂ ಪಕ್ಷದಿಂದ ಎರಡು ಭಾರಿ ಶಾಸಕರಾಗಿದ್ದ ಶ್ರೀರಾಮರೆಡ್ಡಿ ಪ್ರಗತಿಪರ ಶಾಸಕರೆಂದೇ ಖ್ಯಾತಿಯಾಗಿದ್ದರು. ಇತ್ತೀಚೆಗೆ CPIM ಪಕ್ಷ ತೊರೆದು ತಮ್ಮದೆ ಪ್ರಜಾ ಸಂಘರ್ಷ ಸಮಿತಿ ಸ್ಥಾಪನೆ ಮಾಡಿ, ಸಾಮಾಜಿಕ ಹೋರಾಟ ಆರಂಭಿಸಿದ್ದರು. ಸಮಾಜದ ಸುಧಾರಣೆಗಾಗಿ ತಮ್ಮನ್ನು ತಾವೇ ಅರ್ಪಿಸಿಕೊಂಡಿದ್ದ ಜಿ.ವಿ.ಎಸ್ ನಿಧನದಿಂದ ಅಪಾರ ಬೆಂಬಲಿಗರಲ್ಲಿ ದುಃಖ ಮಡುಗಟ್ಟಿದೆ.

ಮಾಜಿ ಶಾಸಕ ಜಿ.ವಿ ಶ್ರೀರಾಮರೆಡ್ಡಿ ವಿದಿವಶ Read More »

“ಮಧ್ಯಂತರ” ಕಿರುಚಿತ್ರ ಟೀಸರ್ ರಿಲೀಸ್

ಸಮಗ್ರ ನ್ಯೂಸ್: ಹವ್ಯಾಸಿ ಕಲಾಬಳಗದ ನೇತೃತ್ವದಲ್ಲಿ ತಯಾರಾಗುತ್ತಿರುವ “ಮಧ್ಯಂತರ” ಕಿರುಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಚಿತ್ರವನ್ನು “ಐಡಿಯಾ ಬಾಸ್ಕೆಟ್” ಯೂ ಟ್ಯೂಬ್ ಚಾನಲ್ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿದ್ದು, ಚಿತ್ರಕ್ಕೆ ಡಾ. ಆದಿತ್ಯ ಭಟ್ ಚಣಿಲ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟೀಸರ್ ಕುತೂಹಲ ಸೃಷ್ಟಿಸುತ್ತಿದ್ದು, ನಿರೀಕ್ಷೆ ಹುಟ್ಟಿಸುವಂತಿದೆ. ಎರಡು ನಿಮಿಷಗಳ ಟೀಸರ್ ಉತ್ತಮ ಕ್ಯಾಮೆರಾ ವರ್ಕ್ ಹೊಂದಿದೆ.

“ಮಧ್ಯಂತರ” ಕಿರುಚಿತ್ರ ಟೀಸರ್ ರಿಲೀಸ್ Read More »

ರಾಜ್ಯದ ಹಲವೆಡೆ ಮಳೆಯಬ್ಬರ| ಸಿಡಿಲಿಗೆ ಇಬ್ಬರು ಬಲಿ| ಎ.18ರವರೆಗೆ ಆರೆಂಜ್ ಅಲರ್ಟ್

ಸಮಗ್ರ ನ್ಯೂಸ್: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುರುವಾರ ರಾತ್ರಿ ಭಾರೀ ಮಳೆಯಾಗಿದ್ದು, ಇಬ್ಬರು ರೈತರು ಸಿಡಿಲಿಗೆ ಬಲಿಯಾಗಿದ್ದಾರೆ. ಬೆಂಗಳೂರು, ಬೆಳಗಾವಿ, ವಿಜಯಪುರ, ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ದ.ಕನ್ನಡ, ಕೊಡಗು, ಹಾಸನ ಜಿಲ್ಲೆಗಳಲ್ಲಿ ಗುರುವಾರ ರಾತ್ರಿ ಭಾರೀ ಮಳೆಯಾಗಿದ್ದು, ಬೆಳಗಾವಿ ಜಿಲ್ಲೆಯ ತುಮ್ಮರ ಗುದ್ದಿ ಗ್ರಾಮದಲ್ಲಿ ಸಿಡಿಲು ಬಡಿದು ಭೀಮಪ್ಪ ಅಡಿವೆಪ್ಪ ಎಂಬುವರು ಸಾವನ್ನಪ್ಪಿದ್ದಾರೆ. ವಿಜಯಪುರ ತಾಲೂಕಿನ ಮದಭಾವಿ ಗ್ರಾಮದಲ್ಲಿ ಜಮೆರೆಮಸಾಬ ಸಾಹೇಬಲಾಲ ಜಾತಗಾರ ಎಂಬುವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲೂ

ರಾಜ್ಯದ ಹಲವೆಡೆ ಮಳೆಯಬ್ಬರ| ಸಿಡಿಲಿಗೆ ಇಬ್ಬರು ಬಲಿ| ಎ.18ರವರೆಗೆ ಆರೆಂಜ್ ಅಲರ್ಟ್ Read More »

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ| ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ – ನಳಿನ್ ಕುಮಾರ್

ಸಮಗ್ರ ನ್ಯೂಸ್: ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆಗೆ ಸಂಬಂಧಿಸಿ ರಾಜ್ಯ ಸರ್ಕಾರ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಮಂಗಳೂರಿನಲ್ಲಿ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, ತಪ್ಪಿತಸ್ಥರ ವಿರುದ್ಧ ಪಕ್ಷ ಮತ್ತು ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಸಂತೋಷ್ ಪಾಟೀಲರದು ವಾಟ್ಸ್‌ಆಯಪ್ ಸಂದೇಶ ಇದೆಯೇ ಹೊರತು, ಡೆತ್ ನೋಟ್ ಅಲ್ಲ. ಈ ಎಲ್ಲ ಸಂಗತಿಗಳನ್ನು

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ| ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ – ನಳಿನ್ ಕುಮಾರ್ Read More »

ಸುಳ್ಳು ಕೇಸುಗಳಿಗೆ ಎಳ್ಳು ನೀರು ಬಿಡ್ತಾ ಇರುವ ಯುವ ಲಾಯರ್| ಚಿನ್ಮಯನಿರುವಾಗ ಯಾಕೆ ಚಿಂತೆ?

ಸಮಗ್ರ ವಿಶೇಷ: ಹಿಂದೂ ಧರ್ಮರಕ್ಷಣೆ ಹೆಸರಲ್ಲಿ ಅಧಿಕಾರ ಹಿಡಿದವರ ಸರ್ಕಾರ ಇದ್ದಾಗಲೂ ಅದೆಷ್ಟೋ ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಸುಳ್ಳು ಕೇಸುಗಳು ದಾಖಲಾಗುತ್ತಿವೆ. ಸರ್ಕಾರ, ಶಾಸಕರು ಯಾರೇ ಇದ್ದರೂ ಕಾರ್ಯಕರ್ತರಿಗೆ ಪ್ರಯೋಜನವಾಗದೇ ಪೊಲೀಸ್ ಪಾಲಾದಾಗ ಕೂಡಲೇ ಕಾ ರಕ್ಷಣೆಗೆ ಆಗಮಿಸುವ ವ್ಯಕ್ತಿಯ ಹೆಸರೇ ಚಿನ್ಮಯಿ ಈಶ್ವರಮಂಗಲ. ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗ ಕಾರ್ಯದರ್ಶಿಯಾಗಿರುವ ಚಿನ್ಮಯ್ ವೃತ್ತಿಯಲ್ಲಿ ವಕೀಲರು. ಯಾವುದೇ ಹಿಂದೂ ಕಾರ್ಯಕರ್ತರು ಹಿಂದುತ್ವದ ಹೋರಾಟದಲ್ಲಿ ಜೈಲು ಸೇರಿದಾಗ ಕೂಡಲೇ ಅವರ ರಕ್ಷಣೆಗೆ ಧಾವಿಸಿ ಬರುತ್ತಾರೆ. ಯಾವುದೇ

ಸುಳ್ಳು ಕೇಸುಗಳಿಗೆ ಎಳ್ಳು ನೀರು ಬಿಡ್ತಾ ಇರುವ ಯುವ ಲಾಯರ್| ಚಿನ್ಮಯನಿರುವಾಗ ಯಾಕೆ ಚಿಂತೆ? Read More »

ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಎಸ್.ಈಶ್ವರಪ್ಪ

ಸಮಗ್ರ ನ್ಯೂಸ್: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೇಯನ್ನು ಕೆ.ಎಸ್‌ ಈಶ್ವರಪ್ಪ ನೀಡಿದ್ದಾರೆ. ಈ ಬಗ್ಗೆ ಅವರು ಶಿವಮೊಗ್ಗದಲ್ಲಿ ನಡೆದ ಪ್ರೆಸ್‌ಮೀಟ್‌ನಲ್ಲಿ ಮಾಹಿತಿ ನೀಡಿದರು. ನಾಳೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ನಿನ್ನೆ ತಮ್ಮ ವಿರುದ್ದ ಕೇಳಿ ಬಂದಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ನಾನು ಯಾವುದೇ ಕಾರಣಕ್ಕೂ ನನ್ನ ರಾಜೀನಾಮೆಯನ್ನು ಸಚಿವ ಸ್ಥಾನಕ್ಕೆ ನೀಡೋದಿಲ್ಲ ಅಂತ ಹೇಳಿದ್ದರು, ಇದಲ್ಲದೇ ನಾನು ಇನ್ನೂ ಮೂರು ದಿನಗಳ ಕಾಲ ಮಾಧ್ಯಮಗಳ ಜೊತೆಗೆ ಮಾತನಾಡುವುದಿಲ್ಲ ಅಂತ ಹೇಳಿದ್ದರು,

ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಎಸ್.ಈಶ್ವರಪ್ಪ Read More »

ಕೋಮು ಸಾಮರಸ್ಯ ಬೆಸೆದ ಬೇಲೂರು ಚೆನ್ನಕೇಶವ ಸನ್ನಿಧಿ| ರಥೋತ್ಸವ ಸಮಯದಲ್ಲಿ ಕುರಾನ್ ಪಠಿಸಿದ ಮುಸ್ಲಿಂ ಬಾಂಧವರು|

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಜಾಬ್, ದೇವಸ್ಥಾನದಲ್ಲಿ ವ್ಯಾಪಾರ ನಿಷೇಧ ಹಾಗೂ ಇತರೆ ಹಲವು ವಿಷಯಗಳಲ್ಲಿ ಹಿಂದೂ- ಮುಸ್ಲಿಂ ನಡುವೆ ಧಾರ್ಮಿಕ ವೈಮನಸ್ಯದ ಸ್ಥಿತಿ ನಿರ್ಮಾಣವಾಗಿದೆ. ಹಿಂದೂ- ಮುಸ್ಲಿಂ ನಡುವೆ ಹಲವು ವಿವಾದಗಳ ನಡುವೆಯೂ ರಾಜ್ಯದ ಹಲವೆಡೆ ಎರಡೂ ಧರ್ಮಗಳ ಸಾಮರಸ್ಯ ಮತ್ತು ಸಹೋದರತ್ವ ಬಾಂಧವ್ಯ ಮೇಳೈಸಿದೆ. ಇಂತಹ ಮತ್ತೊಂದು ಸನ್ನಿವೇಶ ಹಾಸನ ಜಿಲ್ಲೆಯ ಬೇಲೂರಿನಲ್ಲಿ‌ ನಡೆದಿದ್ದು, ಇಲ್ಲಿನ‌ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದಲ್ಲಿ ನಡೆಯುವ ಕುರಾನ್ ಪಠಣವೂ ಒಂದಾಗಿದೆ. ವಿಶ್ವವಿಖ್ಯಾತ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ಬ್ರಹ್ಮ ರಥೋತ್ಸವವು

ಕೋಮು ಸಾಮರಸ್ಯ ಬೆಸೆದ ಬೇಲೂರು ಚೆನ್ನಕೇಶವ ಸನ್ನಿಧಿ| ರಥೋತ್ಸವ ಸಮಯದಲ್ಲಿ ಕುರಾನ್ ಪಠಿಸಿದ ಮುಸ್ಲಿಂ ಬಾಂಧವರು| Read More »