April 2022

ಕೋಮುಗಲಭೆಗಳಲ್ಲಿ ಕೈವಾಡ ಆರೋಪ ಹಿನ್ನಲೆ| ಪಿಎಫ್ಐ ಬ್ಯಾನ್ ಗೆ ಕೇಂದ್ರ ಚಿಂತನೆ|

ಸಮಗ್ರ ನ್ಯೂಸ್: ಕೋಮು ಗಲಭೆ ಪ್ರಕರಣಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕೈವಾಡವಿದೆ ಎಂಬ ಆರೋಪಗಳು ಪದೇ ಪದೇ ಕೇಳಿಬರುತ್ತಿದ್ದು, ಈ ಹಿನ್ನಲೆಯಲ್ಲಿ ಪಿಎಫ್‌ಐ ಸಂಘಟನೆಯನ್ನು ದೇಶದಾದ್ಯಂತ ನಿಷೇಧಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ನಡೆದ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ನಡೆದಿದ್ದು, ಇದರ ಹಿಂದೆ ಪಿಎಫ್‌ಐ ಸಂಘಟನೆಯ ಕೈವಾಡವಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಇದನ್ನು ನಿಷೇಧಿಸುವಂತೆ ಆಗ್ರಹ ಕೇಳಿಬಂದಿತ್ತು. ಈಗಾಗಲೇ ಕೆಲವು ರಾಜ್ಯಗಳಲ್ಲಿ ಪಾಪ್ಯುಲರ್ […]

ಕೋಮುಗಲಭೆಗಳಲ್ಲಿ ಕೈವಾಡ ಆರೋಪ ಹಿನ್ನಲೆ| ಪಿಎಫ್ಐ ಬ್ಯಾನ್ ಗೆ ಕೇಂದ್ರ ಚಿಂತನೆ| Read More »

”ಕಾಮನ್ ಮ್ಯಾನ್” ಆಗಮನಕ್ಕೆ ಅಂಗಡಿ ಮುಂಗಟ್ಟು ಬಂದ್‌|ಸಿದ್ದರಾಮಯ್ಯ, ಯಡಿಯೂರಪ್ಪ ಭೇಟಿ ಕೊಟ್ಟಾಗಲೂ ಬಂದ್‌ ಆಗಿರಲಿಲ್ಲ| ಬಸವರಾಜ ಬೊಮ್ಮಾಯಿ ಆಗಮನಕ್ಕೆ ಯಾಕೆ?

ಸಮಗ್ರ ನ್ಯೂಸ್: ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸಿದ್ದ ಮುಖ್ಯಮಂತ್ರಿಗೆ ಜೀರೊ ಟ್ರಾಫಿಕ್ಸ್‌ ಕಲ್ಪಿಸಲು ಗದಗ ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿನ ಹೂ, ಹಣ್ಣು, ಕಾಯಿ ಮಾರಾಟ ಮಾಡುತ್ತಿದ್ದ ಸಣ್ಣಪುಟ್ಟ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ನಗರಕ್ಕೆ ಭೇಟಿ ನೀಡಿದ್ದರು. ಮೊದಲಿಗೆ ತೋಂಟದಾರ್ಯ ಲಿಂಗೈಕ್ಯ ಸಿದ್ದಲಿಂಗ ಮಹಾಸ್ವಾಮಿ ಐಕ್ಯ ಮಂಟಪ ಕಟ್ಟಡ ಉದ್ಘಾಟನೆ ಮಾಡಿದರು. ನಂತರ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಕವಿಗವಾಯಿಗಳ ಮಠಕ್ಕೆ ಭೇಟಿ ನೀಡಿದರು.

”ಕಾಮನ್ ಮ್ಯಾನ್” ಆಗಮನಕ್ಕೆ ಅಂಗಡಿ ಮುಂಗಟ್ಟು ಬಂದ್‌|ಸಿದ್ದರಾಮಯ್ಯ, ಯಡಿಯೂರಪ್ಪ ಭೇಟಿ ಕೊಟ್ಟಾಗಲೂ ಬಂದ್‌ ಆಗಿರಲಿಲ್ಲ| ಬಸವರಾಜ ಬೊಮ್ಮಾಯಿ ಆಗಮನಕ್ಕೆ ಯಾಕೆ? Read More »

ರಾಜೀನಾಮೆ ಮೊದಲೇ ತರಾತುರಿಯಲ್ಲಿ 29 ಪಿಡಿಓಗಳ ವರ್ಗಾವಣೆ| ಇದರಲ್ಲಿ ಎಷ್ಟು ಪರ್ಸೆಂಟ್ ಹಗರಣವಿದೆ ಈಶ್ವರಪ್ಪರವರೇ?

ಸಮಗ್ರ ನ್ಯೂಸ್ : ಈಶ್ವರಪ್ಪ ರಾಜೀನಾಮೆ ಘೋಷಣೆ ಮಾಡಿದ ಬಳಿಕ ತರಾತುರಿಯಲ್ಲಿ 29 ಪಿಡಿಓಗಳ ವರ್ಗಾವಣೆ ಮಾಡಿರುವುದರಲ್ಲಿ ಕಮಿಷನ್ ಪಡೆದಿರುವ ಬಗ್ಗೆ ಕಾಂಗ್ರೆಸ್ ಆರೋಪಿಸಿದೆ. ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ಘೋಷಣೆ ಮಾಡಿ ಅಧಿಕೃತವಾಗಿ ನೀಡಲು ಸಾಕಷ್ಟು ಸಮಯ ತೆಗೆದುಕೊಂಡು, ತರಾತುರಿಯಲ್ಲಿ 29 ಪಿಡಿಓಗಳನ್ನು ವರ್ಗಾವಣೆ ಮಾಡಿದ್ದಾರೆ. ಈ ತರಾತುರಿಯ ವರ್ಗಾವಣೆಯಲ್ಲಿ ಎಷ್ಟು ಪರ್ಸೆಂಟ್ ಹಗರಣವಿದೆ? ಇನ್ನುಳಿದ ಗುತ್ತಿಗೆದಾರರಿಂದ ಬಾಕಿಯಿದ್ದ 40 ಪರ್ಸೆಂಟ್‌ ವಸೂಲಿಗಾಗಿಯೇ ಇಷ್ಟು ಸಮಯ ತಗೆದುಕೊಂಡಿದ್ದಾ? ಎಂದು ಸರ್ಕಾರವನ್ನು ಕಾಂಗ್ರೆಸ್‌ ಪ್ರಶ್ನಿಸಿದೆ.

ರಾಜೀನಾಮೆ ಮೊದಲೇ ತರಾತುರಿಯಲ್ಲಿ 29 ಪಿಡಿಓಗಳ ವರ್ಗಾವಣೆ| ಇದರಲ್ಲಿ ಎಷ್ಟು ಪರ್ಸೆಂಟ್ ಹಗರಣವಿದೆ ಈಶ್ವರಪ್ಪರವರೇ? Read More »

ಈಶ್ವರಪ್ಪ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು: ಕಾಂಗ್ರೆಸ್‌
ಮೊನ್ನೆ, ನೂರಕ್ಕೆ ನೂರು ರಾಜೀನಾಮೆ ಕೊಡುವುದಿಲ್ಲ, ನಿನ್ನೆ, ರಾಜೀನಾಮೆ ನೀಡುತ್ತೇನೆ: ಯಾಕೀ ಸದಾರಮೆ ನಾಟಕ?

ಬೆಂಗಳೂರು: ಈಶ್ವರಪ್ಪನವರ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಅವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಸರ್ಕಾರವನ್ನು ರಾಜ್ಯ ಕಾಂಗ್ರೆಸ್‌ ಒತ್ತಾಯಿಸಿದೆ. ಈಶ್ವರಪ್ಪ ವಿರುದ್ಧ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಈಶ್ವರಪ್ಪ ಅವರನ್ನು ಜೈಲಿಗಟ್ಟಬೇಕು. ಭ್ರಷ್ಟಾಚಾರ ನಿಗ್ರಹದ ಪ್ರಕರಣ ದಾಖಲಾಗಬೇಕು. ಇದ್ಯಾವುದನ್ನೂ ಮಾಡದೆ ಸರ್ಕಾರ ರಕ್ಷಣೆಗೆ ನಿಂತರೆ ಹಿಂದೂ ಕಾರ್ಯಕರ್ತ ಸಂತೋಷ್ ಪಾಟೀಲ್‌ಗೆ ಅವಮಾನಿಸಿದಂತೆ. ದೇಶದ ಕಾನೂನಿನ ಮೇಲಿನ ಜನರ ನಂಬಿಕೆಯನ್ನು ಅಪಹಾಸ್ಯ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದೆ. ಇದ್ಯಾವುದನ್ನೂ ಮಾಡದೆ ಸರ್ಕಾರ ರಕ್ಷಣೆಗೆ ನಿಂತರೆ ಹಿಂದೂ ಕಾರ್ಯಕರ್ತ ಸಂತೋಷ್ ಪಾಟೀಲ್‌ಗೆ

ಈಶ್ವರಪ್ಪ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವುದಲ್ಲ, ಬಂಧಿಸಿ ಜೈಲಿಗಟ್ಟಬೇಕು: ಕಾಂಗ್ರೆಸ್‌
ಮೊನ್ನೆ, ನೂರಕ್ಕೆ ನೂರು ರಾಜೀನಾಮೆ ಕೊಡುವುದಿಲ್ಲ, ನಿನ್ನೆ, ರಾಜೀನಾಮೆ ನೀಡುತ್ತೇನೆ: ಯಾಕೀ ಸದಾರಮೆ ನಾಟಕ?
Read More »

ಮಂಗಳೂರು :ಎಬಿವಿಪಿ ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮಳನ|ಕಾನೂನು ವಿದ್ಯಾರ್ಥಿ ರಾಷ್ಟ್ರದ ಸಮಸ್ಯೆಗಳಿಗೆ ಮಿಡಿಯಬೇಕು – ಸುಭಾಶ್ ಆಡಿ

ಸಮಗ್ರ ನ್ಯೂಸ್: ಸ್ವಾತಂತ್ರ್ಯ ಹೋರಾಟಕ್ಕಾಗಿ ಭಾರತದ ವಿಶ್ವದರ್ಜೆಯ ವಕೀಲರು ಸರ್ವಸ್ವವನ್ನು ಮುಡಿಪಿಟ್ಟು ದುಡಿದಿದ್ದಾರೆ. ಅವರೆಲ್ಲರ ಪರಿಶ್ರಮದಿಂದ ಸಂವಿಧಾನ ಮತ್ತು ಅತ್ಯಂತ ಬೃಹತ್ ಪ್ರಜಾಪ್ರಭುತ್ವದ ರಾಷ್ಟ್ರ ನಿರ್ಮಾಣ ಸಾಧ್ಯವಾಗಿದೆ. ಕಾನೂನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಹಿರಿಯರ ಆದರ್ಶಗಳನ್ನು ಪಾಲಿಸುತ್ತಾ ಇಂದಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಸುಭಾಶ್ ಆಡಿ ಹೇಳಿದರು. ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ ಎರಡು ದಿನದ ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮೇಳನವನ್ನು

ಮಂಗಳೂರು :ಎಬಿವಿಪಿ ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮಳನ|ಕಾನೂನು ವಿದ್ಯಾರ್ಥಿ ರಾಷ್ಟ್ರದ ಸಮಸ್ಯೆಗಳಿಗೆ ಮಿಡಿಯಬೇಕು – ಸುಭಾಶ್ ಆಡಿ Read More »

ಸಿಎಂಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ| 40% ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿ ಕಟ್ಟಾಳು

ಸಮಗ್ರ ನ್ಯೂಸ್: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಸಂಬಂಧಿಸಿದಂತೆ ತಮ್ಮ ವಿರುದ್ದ ಕೇಳಿ ಬಂದಿರುವ ಆರೋಪಕ್ಕೆ ಕೆ.ಎಸ್. ಈಶ್ವರಪ್ಪ ತಮ್ಮ ಸಚಿವ ಸ್ಥಾನಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ, ತಮ್ಮ ರಾಜೀನಾಮೆ ಪತ್ರವನ್ನು ನೀಡಿದರು. ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸಕ್ಕೆ ತೆರಳಿ ಅಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದಕ್ಕೂ ಮೊದಲು ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗಾರರ ಜೊತೆಗೆ ಶುಕ್ರವಾರ ಸಿಎಂ ಭೇಟಿಯಾಗಿ ತಮ್ಮ ಸಚಿವ

ಸಿಎಂಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ| 40% ಆರೋಪದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಬಿಜೆಪಿ ಕಟ್ಟಾಳು Read More »

ಮಗನ ಒಂದು ವಿಡಿಯೋ ಕ್ಲಿಪ್ ನಿಂದ ಅಪ್ಪನ ಅಂಗಡಿ ಮುಂದೆ ಗ್ರಾಹಕರ ಕ್ಯೂ| ಇದೀಗ ವಿಡಿಯೋ ಜಾಲತಾಣದಲ್ಲಿ ಭಾರೀ ಭಾರೀ ವೈರಲ್|

ಸಮಗ್ರ ನ್ಯೂಸ್: ಬಾಲಕನೊಬ್ಬ ತನ್ನ ತಂದೆಯ ರಸ್ತೆ ಬದಿ ವ್ಯಾಪಾರಕ್ಕೆ ಬೆಂಬಲಿಸುವಂತೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಮಾಡಿ ಬಳಿಕ ಅಂಗಡಿ ಮುಂದೆ ಗ್ರಾಹಕರು ಕ್ಯೂ ನಿಂತಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಇದು ತಂದೆಯ ವ್ಯಾಪಾರಕ್ಕೆ ಉತ್ತಮ ಗ್ರಾಹಕರನ್ನು ಸೆಳೆಯಲು ಕಾರಣವಾಗಿದೆ. ಹೈದರಾಬಾದಿನ ಮೋತಿ ನಗರದಲ್ಲಿ ಹಲೀಮ್‌ ಸ್ಟಾಲ್‌ ಇಟ್ಟುಕೊಂಡಿರುವ ವರ್ತಕರೊಬ್ಬರ ಮಗ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ದಲ್ಲಿ ತನ್ನ ತಂದೆಯ ವ್ಯಾಪಾರವನ್ನು ವಿವರಿಸಿ, ಬೆಂಬಲಿಸುವಂತೆ ಜಾಹಿರಾತು ಮಾಡಿದ್ದಾನೆ. ಬಾಲಕನ ಈ ವಿಡಿಯೋ ಹೈದರಬಾದ್‌ ನಿವಾಸಿಗಳ

ಮಗನ ಒಂದು ವಿಡಿಯೋ ಕ್ಲಿಪ್ ನಿಂದ ಅಪ್ಪನ ಅಂಗಡಿ ಮುಂದೆ ಗ್ರಾಹಕರ ಕ್ಯೂ| ಇದೀಗ ವಿಡಿಯೋ ಜಾಲತಾಣದಲ್ಲಿ ಭಾರೀ ಭಾರೀ ವೈರಲ್| Read More »

ಮಂಗಳೂರು: ಬುರ್ಖಾದೊಳಗೆ ಸಾಗಾಟವಾಗ್ತಿತ್ತು ಲಕ್ಷಮೌಲ್ಯದ ಚಿನ್ನಾಭರಣ| ವಿದೇಶಿ ಚಿನ್ನ ಕಸ್ಟಮ್ಸ್ ಅಧಿಕಾರಿಗಳ ಕೈ ವಶ

ಸಮಗ್ರ ನ್ಯೂಸ್: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಬಂದ ಪ್ರಯಾಣಿಕನಿಂದ 5.34 ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ 100 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮಹಿಳೆಯರ ಬುರ್ಖಾಗಳಲ್ಲಿ ಪ್ರೆಸ್ ಬಟನ್‌ನಲ್ಲಿ ಬಚ್ಚಿಟ್ಟ ಸಣ್ಣ ಉಂಗುರದ ಆಕಾರದ ವೃತ್ತಾಕಾರದ ಸ್ಪ್ಲಿಟ್ ವಾಷರ್ ಮಾದರಿಯ ವಸ್ತುಗಳ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯಾಣಿಕ ಯತ್ನಿಸಿದ್ದ. ಈ ಘಟನೆ ಏಪ್ರಿಲ್ 14 ರಂದು ನಡೆದಿದೆ. ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳೂರು: ಬುರ್ಖಾದೊಳಗೆ ಸಾಗಾಟವಾಗ್ತಿತ್ತು ಲಕ್ಷಮೌಲ್ಯದ ಚಿನ್ನಾಭರಣ| ವಿದೇಶಿ ಚಿನ್ನ ಕಸ್ಟಮ್ಸ್ ಅಧಿಕಾರಿಗಳ ಕೈ ವಶ Read More »

ಮಂಗಳೂರು: ಹಂಪನಕಟ್ಟೆ ಅಪಘಾತ ಪ್ರಕರಣ| ಬಸ್ ಚಾಲಕನ ಬಂಧನ

ಸಮಗ್ರ ನ್ಯೂಸ್: ನಗರದ ಹಂಪನಕಟ್ಟೆ ಬಳಿ ಬೈಕ್‌ಗೆ ಖಾಸಗಿ ಬಸ್ ಢಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕನನ್ನು ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಸ್ ಚಾಲಕ ಬಿಜು ಮೋನುವಿನ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಅಪಘಾತ ಸಂಭವಿಸಿದೆ ಎಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಚಾಲಕನನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಎ.26ರ ವರೆಗೆ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸುರತ್ಕಲ್ ಜನತಾ ಕಾಲನಿಯಿಂದ ರೂಟ್ ನಂಬರ್ 45 ಜಿ ಸಂಖ್ಯೆಯ ಖಾಸಗಿ ಬಸ್‌ನ್ನು

ಮಂಗಳೂರು: ಹಂಪನಕಟ್ಟೆ ಅಪಘಾತ ಪ್ರಕರಣ| ಬಸ್ ಚಾಲಕನ ಬಂಧನ Read More »

ಒಮ್ಮೆ ನಡೆಸುವ ವ್ಯಭಿಚಾರಕ್ಕೆ ಮಹಿಳೆಯನ್ನು ಜೀವನಾಂಶದಿಂದ ಹೊರಗಿಡುವಂತಿಲ್ಲ: ಹೈಕೋರ್ಟ್

ಸಮಗ್ರ ನ್ಯೂಸ್: ಯಾವಾಗಲಾದರೂ ಒಮ್ಮೆ ಪ್ರತ್ಯೇಕವಾಗಿ ನಡೆಸುವ ವ್ಯಭಿಚಾರವು, ವ್ಯಭಿಚಾರದ ಜೀವನವೆಂದು (ಲಿವಿಂಗ್ ಇನ್ ಅಡಲ್ಟ್ರಿ) ಪರಿಗಣನೆಯಾಗುವುದಿಲ್ಲ. ಹಾಗಾಗಿ, ವಿಚ್ಛೇದನದ ಬಳಿಕವೂ ಮಹಿಳೆಯನ್ನು ಜೀವನಾಂಶದಿಂದ ದೂರವಿಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ವಿಚ್ಛೇದನದ ಬಳಿಕ ಸಿಆರ್‌ಪಿಸಿ (ಕ್ರಿಮಿನಲ್‌ ಪ್ರೊಸಿಜರ್‌ ಕೋಡ್‌) ಸೆಕ್ಷನ್ 125ರ ಅಡಿ ಪತ್ನಿಗೆ ಜೀವನಾಂಶ ನೀಡುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಲು ಕೋರಿ ಪತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿದೆ. ನಿರಂತರವಾಗಿ ನಡೆಸುವ

ಒಮ್ಮೆ ನಡೆಸುವ ವ್ಯಭಿಚಾರಕ್ಕೆ ಮಹಿಳೆಯನ್ನು ಜೀವನಾಂಶದಿಂದ ಹೊರಗಿಡುವಂತಿಲ್ಲ: ಹೈಕೋರ್ಟ್ Read More »