April 2022

ಮಣಿಪಾಲ: ಬಾಡಿಗೆ ನೆಪದಲ್ಲಿ ಕಾರು ಚಾಲಕನಿಂದ ಸುಲಿಗೆ

ಸಮಗ್ರ ನ್ಯೂಸ್: :  ಕಾರಿನ ಚಾಲಕನನ್ನು ಬಾಡಿಗೆಗೆ ಕರೆದೊಯ್ದು ಬಳಿಕ ಬೆದರಿಸಿ , ಹಲ್ಲೆಗೈದು ಸುಲಿಗೆ ಮಾಡಿದ ಘಟನೆ ನಡೆದಿದೆ. ಬಡಗಬೆಟ್ಟುವಿನ ಶಾಂತಿನಗರದ ಶ್ರೀಧರ ಭಕ್ತ(61) ಕಾರು ಚಾಲಕರಾಗಿದ್ದು, ಎ.27 ರಂದು ರಾತ್ರಿ ಈ ಘಟನೆ ನಡೆದಿದೆ. ಶ್ರೀಧರ್ ಅವರು ಮಣಿಪಾಲ ಟೈಗರ್ ಸರ್ಕಲ್ ಬಳಿ ಸಂಜೆ ತನ್ನ ಕಾರನ್ನು ಬಾಡಿಗೆಗೆ ನಿಲ್ಲಿಸಿದ್ದು, ಸುಮಾರು 35ರಿಂದ 45 ವರ್ಷ ಪ್ರಾಯದ ತುಳು ಮಾತನಾಡುವ ನಾಲ್ಕು ಮಂದಿ ಬಂದು, ಕಾರವಾರಕ್ಕೆ ಹೋಗಲು ಕಾರನ್ನು ಬಾಡಿಗೆ ಗೊತ್ತು ಮಾಡಿ ಕರೆದುಕೊಂಡು ಹೋಗಿದ್ದರು. […]

ಮಣಿಪಾಲ: ಬಾಡಿಗೆ ನೆಪದಲ್ಲಿ ಕಾರು ಚಾಲಕನಿಂದ ಸುಲಿಗೆ Read More »

ಠಾಣೆಯಲ್ಲೇ ದೂರುದಾರ ಮಹಿಳೆಯರಿಂದ ಮಸಾಜ್ ಮಾಡಿಸಿಕೊಂಡ ಪೊಲೀಸಪ್ಪ

ಸಮಗ್ರ ನ್ಯೂಸ್: ಠಾಣೆಯೊಳಗೆ ಮಹಿಳಾ ದೂರುದಾರರಿಂದ ಮಸಾಜ್ ಮಾಡಿಸಿಕೊಂಡಿದ್ದ ಬಿಹಾರದ ಹಿರಿಯ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಈ ಘಟನೆ ರಾಜ್ಯದ ಸಹರ್ಸಾ ಜಿಲ್ಲೆಯಲ್ಲಿ ವರದಿಯಾಗಿದ್ದು, ಮಹಿಳಾ ದೂರುದಾರರಿಂದ ಪೊಲೀಸ್ ಮಸಾಜ್ ಮಾಡಿಸಿಕೊಂಡ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ನೌಹಟ್ಟಾ ಪೊಲೀಸ್ ಠಾಣೆಯ ದರ್ಹಾರ್ ಔಟ್‍ಪೋಸ್ಟ್‌ನ ಹಿರಿಯ ಅಧಿಕಾರಿ ಶಶಿಭೂಷಣ ಸಿನ್ಹಾ ಅವರು ಫೋನ್‍ನಲ್ಲಿ ಮಾತನಾಡುತ್ತಾ ಮಹಿಳೆಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯವನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಪೊಲೀಸ್ ಔಟ್‍ಪೋಸ್ಟ್‌ನಲ್ಲಿರುವ ವಸತಿ ಕ್ವಾರ್ಟರ್‌ನಿಂದ ಈ ವೀಡಿಯೋವನ್ನು ಸೆರೆಹಿಡಿಯಲಾಗಿದೆ.

ಠಾಣೆಯಲ್ಲೇ ದೂರುದಾರ ಮಹಿಳೆಯರಿಂದ ಮಸಾಜ್ ಮಾಡಿಸಿಕೊಂಡ ಪೊಲೀಸಪ್ಪ Read More »

ಪಿಎಸ್ಐ ನೇಮಕಾತಿ ರದ್ದು; ಮರು ಪರೀಕ್ಷೆಗೆ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್‌ಪಿನ್ ದಿವ್ಯಾ ಹಾಗರಗಿ ಬಂಧನದ ಬೆನ್ನಲ್ಲೇ ಪಿಎಸ್‌ಐ ನೇಮಕಾತಿಯನ್ನು ರದ್ದುಗೊಳಿಸಿ ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ ಮಾಡಲಾಗಿದೆ. ಆರೋಪಿಗಳನ್ನು ಹೊರತುಪಡಿಸಿ ಉಳಿದವರಿಗೆ ,ಮರು ಪರೀಕ್ಷೆ ನಡೆಸಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು, ರಾಜಕಾರಣಿಗಳು ಯಾರೇ ಇರಲಿ ಎಷ್ಟೇ ಪ್ರಭಾವಿಗಳು ಇದ್ದರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. 54289 ಮಂದಿ ಅರ್ಭಯರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಇದ್ದ ಆಪಾದಿತರನ್ನು ಬಿಟ್ಟು ,

ಪಿಎಸ್ಐ ನೇಮಕಾತಿ ರದ್ದು; ಮರು ಪರೀಕ್ಷೆಗೆ ಸರ್ಕಾರ ಆದೇಶ Read More »

ಗ್ರಾಮ ಪಂಚಾಯತ್ ಚುನಾವಣೆ-ಅಧಿಸೂಚನೆ ಪ್ರಕಟ

ಸಮಗ್ರ ನ್ಯೂಸ್: ಅವಧಿ ಮುಕ್ತಾಯವಾದ ಒಂದು ಗ್ರಾಮ ಪಂಚಾಯಿತಿ ಹಾಗೂ ಕಳೆದ ಸಾರ್ವತ್ರಿಕ ಚುನಾವಣೆ ವೇಳೆ ನಾಮಪತ್ರ ಸಲ್ಲಿಕೆಯಾಗದ ಕಾರಣಕ್ಕೆ ಚುನಾವಣೆ ನಡೆಯದ 2 ಗ್ರಾಮ ಪಂಚಾಯಿತಿಗಳು ಸೇರಿದಂತೆ ವಿವಿಧ ಕಾರಣಗಳಿಗೆ ತೆರವಾಗಿದ್ದ 201 ಗ್ರಾ.ಪಂ. ಸದಸ್ಯ ಸ್ಥಾನಗಳ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಮೇ 5- ಜಿಲ್ಲಾಧಿಕಾರಿಗಳಿಂದ ಅಧಿಸೂಚನೆ ಪ್ರಕಟ. ಮೇ 10- ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ಮೇ 11-ನಾಮಪತ್ರಗಳ ಪರಿಶೀಲನೆ. ಮೇ 13-ನಾಮಪತ್ರ ವಾಪಸ್‌ ಪಡೆಯಲು ಕೊನೆ ದಿನ. ಮೇ

ಗ್ರಾಮ ಪಂಚಾಯತ್ ಚುನಾವಣೆ-ಅಧಿಸೂಚನೆ ಪ್ರಕಟ Read More »

ಹಾವೇರಿಯಲ್ಲಿ ಕೈಗಾರಿಕಾ ಟೌನ್‌ಶಿಪ್- ಸಿ.ಎಂ ಬೊಮ್ಮಾಯಿ

ಸಮಗ್ರ ನ್ಯೂಸ್: ಹಾವೇರಿ ಜಿಲ್ಲೆಯಲ್ಲಿ ಔದ್ಯೋಗಿಕ ಕ್ರಾಂತಿ ಮಾಡಲಾಗುವುದು. ಜಿಲ್ಲೆಯಲ್ಲಿ ಒಂದು ಸಾವಿರ ಎಕರೆಯ ಕೈಗಾರಿಕಾ ಟೌನ್ ಶಿಪ್‌ನ್ನು ಪ್ರಾರಂಭ ಆಗಲಿದೆ. ಹೆಚ್ಚು ಉದ್ಯೋಗ ನೀಡುವ ಸಿದ್ಧ ಉಡುಪು ತಯಾರಿಕಾ ಘಟಕಗಳನ್ನು ಹೆಚ್ಚೆಚ್ಚು ಜಿಲ್ಲೆಗೆ ತರಲಾಗುವುದು. ಶಿಗ್ಗಾಂವಿ ತಾಲೂಕನ್ನು ಭಾರತ ದೇಶದಲ್ಲೇ ಟೆಕ್ಸಟೈಲ್ಸ್ ಹಬ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಾವೇರಿಯಲ್ಲಿ ಮೆಗಾ ಡೈರಿ ಅನುಮೋದನೆ ಕೊಟ್ಟಿದ್ದೇವೆ. ಹಾವೇರಿಯ ಹಾಲು ಒಕ್ಕೂಟದ ಕೆಲಸ ಈಗಾಗಲೆ ಪ್ರಾರಂಭ ಆಗಿದೆ. ಹಾಲು ಒಕ್ಕೂಟಕ್ಕಾಗಿ ನಾನು ಹೋರಾಟ ಮಾಡಿದ್ದೆ.

ಹಾವೇರಿಯಲ್ಲಿ ಕೈಗಾರಿಕಾ ಟೌನ್‌ಶಿಪ್- ಸಿ.ಎಂ ಬೊಮ್ಮಾಯಿ Read More »

ರಷ್ಯಾ ಉಕ್ರೇನ್ ಯುದ್ಧ – ಖೆರ್ಸಾನ್ ರಷ್ಯಾ ವಶ| ರುಬೆಲ್ ಖೆರ್ಸಾನ್ ಹೊಸ‌ ಕರೆನ್ಸಿ

ಸಮಗ್ರ ನ್ಯೂಸ್: ಉಕ್ರೇನ್‌ನ ಮೇಲೆ ದಾಳಿ ಮುಂದುವರಿಸಿರುವ ರಷ್ಯಾದ ಗುರುವಾರದ ಘೋಷಣೆಯ ಪ್ರಕಾರ ಖೆರ್ಸಾನ್ ರಷ್ಯಾ ಪಡೆಯ ಸಂಪೂರ್ಣ ನಿಯಂತ್ರಣದಲ್ಲಿದೆ. ಹೀಗಾಗಿ ಮೇ 1ರಿಂದ ರಷ್ಯಾದ ರುಬೆಲ್‌ ಖೆರ್ಸಾನ್‌ನ ಅಧಿಕೃತ ಕರೆನ್ಸಿಯಾಗಿರಲಿದೆ. ಅಲ್ಲಿನ ಜನರಿಗೆ ಕರೆನ್ಸಿ ಬದಲಾವಣೆ ಮಾಡಿಕೊಳ್ಳಲು 4 ತಿಂಗಳ ಕಾಲಾವಕಾಶ ಕೊಡಲಾಗುವುದು ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾ ಉಕ್ರೇನ್ ಯುದ್ಧ – ಖೆರ್ಸಾನ್ ರಷ್ಯಾ ವಶ| ರುಬೆಲ್ ಖೆರ್ಸಾನ್ ಹೊಸ‌ ಕರೆನ್ಸಿ Read More »

ಭಾರತ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟ್ಟೋ ವಿಧಿವಶ

ಸಮಗ್ರ ನ್ಯೂಸ್: ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟ್ಟೋ ವಯೋಸಹಜ ಖಾಯಿಲೆಗಳಿಂದಾಗಿ ಮಂಗಳವಾರ(ಎ.26) ಬೆಳಿಗ್ಗೆ ನಿಧನರಾಗಿದ್ದಾರೆ. 81 ವರ್ಷದ ಎಲ್ವೆರಾ, 60ರ ದಶಕದ ಭಾರತ ಹಾಕಿ ವಲಯದಲ್ಲಿ ಬ್ರಿಟ್ಟೊ ಸಹೋದರಿಯರೆಂದೇ (ರೀತಾ ಮತ್ತು ಮೇ) ಪ್ರಸಿದ್ಧಿಯಾಗಿದ್ದ ಮೂವರು ಸಹೋದರಿಯರಲ್ಲಿ ಹಿರಿಯವರು. ಈ ಮೂವರು 1960-67ರವರೆಗ ದೇಶಿ ಟೂರ್ನಿಗಳಲ್ಲಿ ತಮ್ಮದೇ ಪ್ರಾಬಲ್ಯ ಸಾಧಿಸಿ ಕರ್ನಾಟಕ ತಂಡಕ್ಕೆ 7 ರಾಷ್ಟ್ರೀಯ ಚಾಂಪಿಯನ್​ಶಿಪ್ ತಂದುಕೊಟ್ಟಿದ್ದರು. ಎಲ್ವಿರಾ ಭಾರತ ತಂಡವನ್ನು ಪ್ರತಿನಿಧಿಸಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧ ಆಡಿದ್ದಾರೆ.

ಭಾರತ ಹಾಕಿ ತಂಡದ ಮಾಜಿ ನಾಯಕಿ ಎಲ್ವೆರಾ ಬ್ರಿಟ್ಟೋ ವಿಧಿವಶ Read More »

ಮಂಗಳೂರು: ಗುಟ್ಕಾ ಜಗಿದ ಬಸ್ ಚಾಲಕರಿಗೆ 5000 ದಂಡ ವಿಧಿಸಿದ ಆರ್ ಟಿಒ ಅಧಿಕಾರಿಗಳು!

ಸಮಗ್ರ ನ್ಯೂಸ್: ಚಾಲನೆ ವೇಳೆ ಗುಟ್ಕಾ ಜಗಿಯುತ್ತಿದ್ದ ಬಸ್‌ ಚಾಲಕರಿಗೆ‌ ಮಂಗಳೂರು ಆರ್‌ಟಿಒ ಅಧಿಕಾರಿಗಳು ದಂಡ ವಿಧಿಸಿದ್ದಾರೆ.ಬಿಜೈ ಬಳಿ ರಾತ್ರಿ ದಾಖಲೆ ತಪಾಸಣೆ ಸಂದರ್ಭ 2 ಬಸ್‌ಗಳ ಚಾಲಕರು ಗುಟ್ಕಾ ಜಗಿಯುತ್ತ ಅಧಿಕಾರಿಗಳ ಮುಂದೆ ಬಂದರು. ಇದನ್ನು ಗಮನಿಸಿದ ಆರ್‌ಟಿಒ ಅಧಿಕಾರಿಗಳು ಇಬ್ಬರು ಚಾಲಕರಿಗೂ ತಲಾ 5,000 ರೂ. ದಂಡ ವಿಧಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಟಿಒ ಆರ್‌.ಎಂ. ವರ್ಣೇಕರ್‌, “ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಮಾತ್ರವಲ್ಲದೆ ಯಾವುದೇ ರೀತಿಯ ಅಮಲು ಪದಾರ್ಥಗಳನ್ನು ಸೇವಿಸಿ ಚಲಾಯಿಸುವವರ

ಮಂಗಳೂರು: ಗುಟ್ಕಾ ಜಗಿದ ಬಸ್ ಚಾಲಕರಿಗೆ 5000 ದಂಡ ವಿಧಿಸಿದ ಆರ್ ಟಿಒ ಅಧಿಕಾರಿಗಳು! Read More »

ಕೊನೆಗೂ ಬಂಧಿಯಾದ ದಿವ್ಯಾ ಹಾಗರಗಿ| ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ನಡೆದಿದೆ ಎನ್ನಲಾದ 545 ಪಿಎಸ್​ಐ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 18 ದಿನಗಳಿಂದ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ದಿವ್ಯ ಹಾಗರಗಿ ಕಳೆದ 18 ದಿನಗಳಿಂದ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದರು. ಪುಣೆಯ ಬಳಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಆಕೆಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪಿಎಸ್‌ಐ ನೇಮಕಾತಿ ಅಕ್ರಮ ಬಯಲಾಗುತ್ತಿದ್ದಂತೆ ಪರಾರಿಯಾಗಿದ್ದಳು. ದಿವ್ಯಾ ಅವರಿಗಾಗಿ ಸಿಐಡಿ ತಂಡ ಎಲ್ಲಾ ಕಡೆ ಹುಡುಕಾಟ ನಡೆಸುತ್ತಿತ್ತು. ಸಾಕಷ್ಟು ದಿನಗಳವರೆಗೆ

ಕೊನೆಗೂ ಬಂಧಿಯಾದ ದಿವ್ಯಾ ಹಾಗರಗಿ| ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಬಿಜೆಪಿ ನಾಯಕಿ Read More »

ಹಾಡುಹಗಲೇ ಯುವತಿಯ ಮೇಲೆರಗಿದೆ ಕಾಮುಕ ಆಟೋಡ್ರೈವರ್

ಸಮಗ್ರ ನ್ಯೂಸ್: ಯುವತಿ ಮೇಲೆ ಹಾಡಹಗಲೇ ಅತ್ಯಾಚಾರವೆಸಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ತಾಲೂಕಿನ ಹಳ್ಳಿಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಯುವತಿ ಏಪ್ರಿಲ್​ 26ರಂದು ಕೆಲಸ ಮುಗಿಸಿ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಡಿಸೇಲ್​ ಹಾಕಿಸಬೇಕು ಎಂದು ಆಟೋ ಬೇರೆ ಕಡೆ ತಿರುಗಿಸಿದ್ದ ಆರೋಪಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಯುವತಿ ಮೇಲೆ ಅತ್ಯಾಚಾರ ನಡೆಸುವ ದ್ಯಶ್ಯವನ್ನು ಆಟೋ ಚಾಲಕನ ಸ್ನೇಹಿತ ವಿಡಿಯೋ ಸೆರೆ ಹಿಡಿದಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಯುವತಿ

ಹಾಡುಹಗಲೇ ಯುವತಿಯ ಮೇಲೆರಗಿದೆ ಕಾಮುಕ ಆಟೋಡ್ರೈವರ್ Read More »