April 2022

ಬೆಂಗಳೂರಿನ ವೈಮಾನಿಕ ತರಬೇತಿ ಕೇಂದ್ರದಲ್ಲಿ ತಪ್ಪಿದ ಭಾರಿ ಅನಾಹುತ

ಸಮಗ್ರ ನ್ಯೂಸ್: ಬೆಂಗಳೂರಿನ ಯಲಹಂಕದ ಜಕ್ಕೂರಿನಲ್ಲಿರುವ ವೈಮಾನಿಕ ತರಬೇತಿ ಕೇಂದ್ರದಲ್ಲಿ ಅನಾಹುತವೊಂದು ತಪ್ಪಿದೆ. ಏರ್​ಕ್ರಾಫ್ಟ್ ಲ್ಯಾಂಡಿಂಗ್ ವೇಳೆ ರನ್​ವೇನಲ್ಲಿ ನಾಯಿಯೊಂದು ಅಡ್ಡಬಂದ ಪರಿಣಾಮ, ರನ್​ವೇ ಬಿಟ್ಟು ಖಾಲಿ ಜಾಗಕ್ಕೆ ನುಗ್ಗಿ ಏರ್​ಕ್ರಾಫ್ಟ್ ಪಲ್ಟಿಯಾಗಿದೆ. ಪೈಲಟ್ ಅಪಾಯದಿಂದ ಪಾರಾಗಿದ್ದು, ಏರ್​ಕ್ರಾಫ್ಟ್​ಗೆ ಹಾನಿಯಾಗಿದೆ. ರನ್​ವೇ ಚಿಕ್ಕದಾಗಿದ್ದರಿಂದ ಪೈಲಟ್ ಶಾರ್ಟ್​ಲ್ಯಾಂಡಿಂಗ್ ಮಾಡಿದ್ದರು. ಇದು ಖಾಸಗಿ ಕಂಪನಿಗೆ ಸೇರಿದ ಏರ್ ಕ್ರಾಫ್ಟ್ ಲ್ಯಾಂಡ್ ಆಗಿ ರನ್​ ವೇ ನಲ್ಲಿ ಚಲಿಸುವಾಗ ನಾಯಿಯೊಂದು ಅಡ್ಡ ಬಂದಿತ್ತು. ನಾಯಿ ಕಂಡು ರನ್ ವೇ ಬಿಟ್ಟು ಪಕ್ಕದಲ್ಲಿರುವ […]

ಬೆಂಗಳೂರಿನ ವೈಮಾನಿಕ ತರಬೇತಿ ಕೇಂದ್ರದಲ್ಲಿ ತಪ್ಪಿದ ಭಾರಿ ಅನಾಹುತ Read More »

ಅಪ್ಪು ಧ್ವನಿಯಲ್ಲೆ ಮತ್ತೆ ಜೇಮ್ಸ್ ಚಿತ್ರ ರಿಲೀಸ್

ಸಮಗ್ರ ನ್ಯೂಸ್: ಡಾ.ಪುನೀತ್ ರಾಜ್‍ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ಇದೀಗ ಆಧುನಿಕ ತಂತ್ರಜ್ಞಾನದಿಂದ ಮತ್ತೆ ಅವರದ್ದೇ ಧ್ವನಿಯಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಹೌದು.. ಅಪ್ಪು ಧ್ವನಿ ಮರುಸೃಷ್ಟಿಸಿದ ಹೈದರಾಬಾದ್ ಸೌಂಡ್ ನಲ್ಲಿ, ಏಪ್ರಿಲ್ 22 ರಿಂದ ಪುನೀತ್ ಧ್ವನಿಯಲ್ಲೇ ಚಿತ್ರ ಪ್ರದರ್ಶನಕ್ಕೆ, ಚಿತ್ರತಂಡ ಮುಂದಾಗಿದೆ. ಈ ಸಂಬಂಧ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸೌಂಡ್ ಇಂಜಿನಿಯರ್ ಶ್ರೀನಿವಾಸ್ ರಾವ್, ಕೊನೆಗೂ ಜೇಮ್ಸ್ ಚಿತ್ರದಲ್ಲಿ ಪುನೀತ್ ಅವರ ಧ್ವನಿಯನ್ನು ರೀ

ಅಪ್ಪು ಧ್ವನಿಯಲ್ಲೆ ಮತ್ತೆ ಜೇಮ್ಸ್ ಚಿತ್ರ ರಿಲೀಸ್ Read More »

ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಹಿಂಸಾಚಾರ| 100 ಮಂದಿ ಪೊಲೀಸ್ ವಶ

ಸಮಗ್ರ ನ್ಯೂಸ್: ಭಾನುವಾರ ತಡರಾತ್ರಿ ಹುಬ್ಬಳ್ಳಿ ನಗರದಲ್ಲಿ ದೊಡ್ಡ ಗಲಭೆಯೇ ನಡೆದು ಹೋಗಿದ್ದು, ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದೆ. ಧರ್ಮ ಯುದ್ಧದ ಮಧ್ಯೆ ಹುಬ್ಬಳ್ಳಿ ಗಲಾಟೆ ರಾಜ್ಯವನ್ನು ಮತ್ತಷ್ಟು ಅಪಾಯಕಾರಿ ಪರಿಸ್ಥಿತಿಯತ್ತ ತಳ್ಳಿದೆ. ಪ್ರಚೋದನಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ಗಲಾಟೆಯಾಗಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 100ಕ್ಕೂ ಹೆಚ್ಚು ಜನರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. 88 ಆರೋಪಿಗಳನ್ನು ಬಂಧಿಸಿದ್ದಾರೆ. ಗಲಾಟೆ ಪ್ರಕರಣ ಸಂಬಂಧ ಈವರೆಗೆ 10 ಪ್ರಕರಣ ದಾಖಲಾಗಿವೆ. ಏಪ್ರಿಲ್ 18ರ ಬೆಳಗ್ಗೆ 10.30ಕ್ಕೆ ಪೊಲೀಸರು ಆರೋಪಿಗಳನ್ನು ಕೋರ್ಟ್‌ಗೆ

ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಹಿಂಸಾಚಾರ| 100 ಮಂದಿ ಪೊಲೀಸ್ ವಶ Read More »

ಮಂಗಳೂರು: ಮೀನಿನ ಪ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ| ಮೂವರ ಸಾವು; ಐದು ಮಂದಿ ಗಂಭೀರ

ಸಮಗ್ರ ನ್ಯೂಸ್: ಮಂಗಳೂರು ನಗರದ ಹೊರವಲಯದ ಎಸ್​ಇಝೆಡ್ (ವಿಶೇಷ ಆರ್ಥಿಕ ವಲಯ) ವ್ಯಾಪ್ತಿಯಲ್ಲಿ ಭಾನುವಾರ ತಡರಾತ್ರಿ ವಿಷಾನಿಲ ಸೋರಿಕೆಯಾಗಿ ಮೂವರು ಮೃತಪಟ್ಟಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಎಸ್​ಇಝೆಡ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನಿನ ಫ್ಯಾಕ್ಟರಿಯ ಟ್ಯಾಂಕೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ಈ ದುರಂತ ಸಂಭವಿಸಿದೆ. ಭಾನುವಾರ ರಾತ್ರಿ ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕನ್ನು ಶುಚಿಗೊಳಿಸಲು ಕೆಳಗಿಳಿದಿದ್ದಾನೆ. ಈ ವೇಳೆ ಏಕಾಏಕಿ ಅಸ್ವಸ್ಥಗೊಂಡು ಬಿದ್ದಿದ್ದಾನೆ. ಕೂಡಲೇ ಆತನನ್ನು ರಕ್ಷಿಸಲು 8 ಕಾರ್ಮಿಕರು ಹೋಗಿದ್ದಾರೆ. ಈ ವೇಳೆ ಅವರು ಕೂಡ ಅಸ್ವಸ್ಥಗೊಂಡು, ಉಸಿರಾಟದಲ್ಲಿ

ಮಂಗಳೂರು: ಮೀನಿನ ಪ್ಯಾಕ್ಟರಿಯಲ್ಲಿ ವಿಷಾನಿಲ ಸೋರಿಕೆ| ಮೂವರ ಸಾವು; ಐದು ಮಂದಿ ಗಂಭೀರ Read More »

ವಿಜಯನಗರ: ಗಾಯಾಳುಗಳನ್ನು ಸಾಗಿಸಲು ತಮ್ಮ ಕಾರನ್ನೇ ಬಿಟ್ಟು ಕೊಟ್ಟ ಶೋಭಾ ಕರಂದ್ಲಾಜೆ| ಕೇಂದ್ರ ಸಚಿವೆಯ ನಡೆಗೆ ವ್ಯಾಪಕ ಮೆಚ್ಚುಗೆ

ಸಮಗ್ರ ನ್ಯೂಸ್: ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ತಮ್ಮದೇ ಕಾರಿನಲ್ಲಿ ಆಸ್ಪತ್ರೆ ಸಾಗಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾನವೀಯತೆ ಮೆರೆದಿದ್ದಾರೆ. ವಿಜಯನಗರದ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯ ಕಾರಿಣಿಯಲ್ಲಿ ಭಾಗವಹಿಸಲು ಶೋಭಾ ಕರಂದ್ಲಾಜೆ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಅಪಘಾತವಾಗಿರುವುದನ್ನು ಕಂಡಿದ್ದಾರೆ. ಈ ವೇಳೆ ಶೋಭಾ ಅವರು, ಕೂಡಲೇ ಕಾರು ನಿಲ್ಲಿಸಿ ತಮ್ಮ ಕಾರನ್ನು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಬಿಟ್ಟು ಕೊಟ್ಟಿದ್ದಾರೆ. ಗಾಯಗೊಂಡಿದ್ದ ಸವಾರರ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವೆ, ತಮ್ಮ ವಾಹನದ ಮೂಲಕ

ವಿಜಯನಗರ: ಗಾಯಾಳುಗಳನ್ನು ಸಾಗಿಸಲು ತಮ್ಮ ಕಾರನ್ನೇ ಬಿಟ್ಟು ಕೊಟ್ಟ ಶೋಭಾ ಕರಂದ್ಲಾಜೆ| ಕೇಂದ್ರ ಸಚಿವೆಯ ನಡೆಗೆ ವ್ಯಾಪಕ ಮೆಚ್ಚುಗೆ Read More »

ಸುಳ್ಯ ಮೂಲದ ದಂಪತಿ ಮೈಸೂರಿನಲ್ಲಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಸುಳ್ಯ ಸಮೀಪದ ಕುಕ್ಕಾಜೆಕಾನ ಮೂಲದ ದಂಪತಿ ಮೈಸೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎ.16ರಂದು ನಡೆದಿದೆ. ಸೋಣಂಗೇರಿ, ಮಂಗಳೂರು ಮೊದಲಾದೆಡೆ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆಗಿದ್ದ ಕುಕ್ಕಾಜೆಕಾನದ ಮಾಧವ ನಾಯ್ಕ್ ರವರು 3 ವರ್ಷಗಳ ಹಿಂದೆ ಪತ್ನಿ, ಪುತ್ರಿ ಸಮೇತ ಮೈಸೂರಿಗೆ ಹೋಗಿ ಅಲ್ಲಿ ನೆಲೆಸಿದ್ದರು. ಎ.16 ರಂದು ಮಾಧವ ನಾಯ್ಕ್ (56) ಮತ್ತು ಅವರ ಪತ್ನಿ ಉಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ. ಮೈಸೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಹಜರು ನಡೆಸಿದ ಬಳಿಕ

ಸುಳ್ಯ ಮೂಲದ ದಂಪತಿ ಮೈಸೂರಿನಲ್ಲಿ ಆತ್ಮಹತ್ಯೆ Read More »

ಸರೋವರದಲ್ಲೊಂದು ಸುಳಿ| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಫೋಟೋ|

ಸಮಗ್ರ ಡಿಜಿಟಲ್ ಡೆಸ್ಕ್: ಸರೋವರದಲ್ಲಿ ತಿರುಗುತ್ತಿರುವ ಸುಳಿಯ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದು ಯುಎಸ್‌ನ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿದ್ಯಮಾನವು ಇತ್ತೀಚೆಗೆ ಪೂರ್ವ ನಾಪಾ ಕಣಿವೆಯಲ್ಲಿರುವ ಲೇಕ್ ಬೆರ್ರಿಸ್ಸಾ ಜಲಾಶಯದಲ್ಲಿ ಕಂಡುಬoದಿದೆ. ಪೋರ್ಟಲ್ ಟು ಹೆಲ್ ಹಲವು ವರ್ಷಗಳಿಂದ ಪ್ರೇಕ್ಷಕರನ್ನು ಭಯ ಪಡೆಸುತ್ತಿದೆ. ಇದು 2018 ಮತ್ತು 2019ರಲ್ಲಿ 72 ಅಡಿ ಅಗಲದ ದೈತ್ಯ ರಂಧ್ರ ಕಂಡುಬoದಿತ್ತು. ಸರೋವರದಲ್ಲಿ ನೀರಿನ ಮಟ್ಟವು ತುಂಬಾ ಹೆಚ್ಚಾದ ನಂತರ ಈ ರಂಧ್ರ ಸಂಭವಿಸಿದೆ. ಹೆಚ್ಚುವರಿ ನೀರು

ಸರೋವರದಲ್ಲೊಂದು ಸುಳಿ| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಫೋಟೋ| Read More »

ಉಡುಪಿ : ಶಾರ್ಟ್ ಸರ್ಕ್ಯೂಟ್ ನಿಂದ ಭಾರೀ ಅಗ್ನಿದುರಂತ ; ಲಕ್ಷಾಂತರ ರೂ. ನಷ್ಟ

ಸಮಗ್ರ ನ್ಯೂಸ್ : ಉಡುಪಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅಗ್ನಿ ದುರಂತವೊಂದು ನಡೆದಿದ್ದು, ಮಣಿಪಾಲದ ವೆಷ್ಟೇಕ್ ಎಂಟರ್​ಪ್ರೈಸಸ್​ನಲ್ಲಿ ಭಾರೀ ನಷ್ಟ ಸಂಭವಿಸಿದೆ. ರಾತ್ರಿ ವೇಳೆ ವೆಷ್ಟೇಕ್ ಎಂಟರ್​ಪ್ರೈಸಸ್​ನಲ್ಲಿ ಶಾರ್ಟ್​ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕಿಸಲಾಗಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಮುಂಜಾನೆವರೆಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿದೆ ಎಂದು ತಿಳಿದುಬಂದಿದೆ.

ಉಡುಪಿ : ಶಾರ್ಟ್ ಸರ್ಕ್ಯೂಟ್ ನಿಂದ ಭಾರೀ ಅಗ್ನಿದುರಂತ ; ಲಕ್ಷಾಂತರ ರೂ. ನಷ್ಟ Read More »

OTT ಗೆ ಬರಲು ಕೆಜಿಎಫ್ 2 ಸಿದ್ಧ…

ಸಮಗ್ರ ನ್ಯೂಸ್: ವಿಶ್ವದಾದ್ಯಂತ ಯಶ್ ನಟನೆಯ KGF 2 ಚಿತ್ರ ಬಿಡುಗಡೆಗೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕನ್ನಡ ಚಿತ್ರರಂಗದಲ್ಲೆ ದಾಖಲೆ ಹರಿಸುವಂತೆ ಚಿತ್ರತಂಡ ಮಾಡಿದ್ದು, ಪ್ರತಿದಿನ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಹವಾ ಹೆಚ್ಚಿದೆ. ಕೆಜಿಎಫ್ 2 ಚಿತ್ರ ಸದ್ಯ ಒಟಿಟಿಯಲ್ಲಿ ಬರಲು ಅದಾಗಲೇ ಸಜ್ಜು ಮಾಡಿದೆ. ಕೆಲವೆ ದಿನಗಳಲ್ಲಿ ಒಟಿಟಿಯಲ್ಲಿ ಬರಲಿದೆ ಎಂಬ ಮಾಹಿತಿಯು ಹೊರಬಿದ್ದಿದೆ. ಅಮೆಜಾನ್ ಪ್ರೈಮ್ ನಲ್ಲಿ ರಿಲೀಸ್ ಆಗಲಿದ್ದು, ದೊಡ್ಡ ಮೊತ್ತಕ್ಕೆ ಕೆಜಿಎಫ್ 2 ಅನ್ನು ಅಮೆಜಾನ್ ಪ್ರೈಮ್ ತೆಗೆದುಕೊಂಡಿದೆ.

OTT ಗೆ ಬರಲು ಕೆಜಿಎಫ್ 2 ಸಿದ್ಧ… Read More »

ಹನುಮ ಜಯಂತಿ ಮೇಲೆ ಕಲ್ಲು ತೂರಾಟ.., ತನಿಖೆ ನಡೆಸುತ್ತಿರುವ ಪೋಲಿಸ್ ಸಿಬ್ಬಂದಿ

ಸಮಗ್ರ ನ್ಯೂಸ್: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹನುಮ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದು 9 ಜನರನ್ನು ಬಂಧಿಸಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ವಾಯುವ್ಯ ಭಾಗದ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಶನಿವಾರ ಹನುಮ ಜಯಂತಿಯ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ 9 ಜನರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹನುಮಜಯಂತಿ ಶೋಭಾಯಾತ್ರೆಗೆ ಕಲ್ಲು ತೂರಾಟ ಮಾಡಿದು ಮಾತ್ರ ವಲ್ಲದೆ, ಗುಂಡಿನ ದಾಳಿಯು ನಡೆಸಲಾಗಿದೆ. 6 ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿದ್ದು, 14 ಜನ ಅರೆಸ್ಟ್ ಮಾಡಲಾಗಿದೆ.ಜೊತೆಗೆ

ಹನುಮ ಜಯಂತಿ ಮೇಲೆ ಕಲ್ಲು ತೂರಾಟ.., ತನಿಖೆ ನಡೆಸುತ್ತಿರುವ ಪೋಲಿಸ್ ಸಿಬ್ಬಂದಿ Read More »