ನಟಿ ಜಾಕ್ವೆಲಿನ್ ಗೆ ಇಡಿ‌ ಸಂಕಷ್ಟ| 7.27 ಕೋಟಿ ಆಸ್ತಿ ಮುಟ್ಟುಗೋಲು

ಸಮಗ್ರ ನ್ಯೂಸ್: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ 7.27 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.

Ad Widget ... ..

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾನ್ಮನ್ ಸುಕೇಶ್ ಚಂದ್ರಶೇಖರ್ ಲಗತ್ತಿಸಲಾದ ಆಸ್ತಿಯು ಸ್ಥಿರ ಠೇವಣಿಯಾಗಿದೆ ಎಂದು ಮೂಲಗಳು ತಿಳಿಸಿವೆ.

Ad Widget

ಜಾಕ್ವೆಲಿನ್‌, ಸುಕೇಶ್‌ ನಡುವೆ ಅಕ್ರಮ ಹಣ ವರ್ಗಾವಣೆ ಆಗಿರುವ ಬಗ್ಗೆ ಸಾಕ್ಷ್ಯಾಧಾರಗಳನ್ನು ಜಾರಿ ನಿರ್ದೇಶನಾಲಯ ಕಲೆಹಾಕಿತ್ತು. ಜ್ಯಾಕ್ವೆಲಿನ್‌ರ ವಿರುದ್ಧ “ಲುಕ್‌ ಔಟ್‌ ಸರ್ಕ್ಯುಲರ್ ‘ ಜಾರಿ ಗೊಳಿಸಿ ವಿಚಾರಣೆಗೊಳಪಡಿಸಿತ್ತು.

ಸುಕೇಶ್‌ ಚಂದ್ರಶೇಖರ್‌ ನಿಂದ ಜಾಕ್ವೆಲಿನ್‌ 10 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದು, ಅದರಲ್ಲಿ 52 ಲಕ್ಷ ರೂ. ಮೌಲ್ಯದ ಕುದುರೆ, 9 ಲಕ್ಷ ರೂ. ಮೌಲ್ಯದ ಪರ್ಷಿಯಾ ದೇಶದ ಬೆಕ್ಕು ಸೇರಿದೆ ಎನ್ನುವ ವಿಚಾರ ಬಯಲಾಗಿತ್ತು.

Leave a Comment

Your email address will not be published. Required fields are marked *