ಸಮಗ್ರ ನ್ಯೂಸ್: ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ತಾಯಿ, ಮಗ ಗಾಯಗೊಂಡಿರುವ ಘಟನೆ ಪುತ್ತೂರಿನ ನೆಹರೂನಗರ ಬಳಿ ನಡೆದಿದೆ. ನೆಹರೂ ನಗರ ವಿವೇಕಾನಂದ ಕಾಲೇಜು ಕ್ಯಾಂಪಸ್ ಬಳಿಯ ಸರ್ವಿಸ್ ಸ್ಟೇಷನ್ ಎದುರು ಮಿನಿ ಗೂಡ್ಸ್ ಟೆಂಪೊ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ದಾರಂದಕುಕ್ಕು ನಿವಾಸಿ ಅಭಿಷೇಕ್ ಕೆ.ಎಸ್(24ವ)ಮತ್ತು ಹಿಂಬದಿ ಸವಾರೆಯಾಗಿದ್ದ ಅವರ ತಾಯಿ ಭಾರತಿ ಕೆ. ಎಸ್. (49)ರವರು ಗಾಯಗೊಂಡಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.