Ad Widget .

ಕೋವಿಡ್ ಲಾಕ್ ಡೌನ್ ಎಫೆಕ್ಟ್| ದೇಶದಲ್ಲಿ ದಿಢೀರ್ ಏರಿಕೆಯಾದ ಹೆಚ್ಐವಿ| ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡಿದ ಮಾರಕ ರೋಗ

Ad Widget . Ad Widget .

ಸಮಗ್ರ ನ್ಯೂಸ್: ಕೋವಿಡ್​-19 ಹಾವಳಿಯಿಂದಾಗಿ ಹೇರಲಾಗಿದ್ದ ಲಾಕ್​ಡೌನ್​ ಸಂದರ್ಭದಲ್ಲಿನ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದಾಗಿ ಉಂಟಾಗಿರುವ ಮಾರಕ ಸಂಗತಿಯೊಂದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯಿಂದಾಗಿ ಬಹಿರಂಗಗೊಂಡಿದೆ.

Ad Widget . Ad Widget .

ಮಧ್ಯಪ್ರದೇಶದ ಆರ್​ಟಿಐ ಕಾರ್ಯಕರ್ತ ಚಂದ್ರೇಶೇಖರ್​ ಗೌರ್ ಎಂಬಾತ ಕೇಳಿದ್ದ ಪ್ರಶ್ನೆಗೆ ಸಿಕ್ಕ ಉತ್ತರ ಭಯಂಕರ ವಿಷಯವೊಂದನ್ನು ಬೆಳಕಿಗೆ ತಂದಿದೆ. ಈತ ಸಲ್ಲಿಸಿದ್ದ ಅರ್ಜಿಗೆ ರಾಷ್ಟ್ರೀಯ ಏಯ್ಡ್ಸ್​ ತಡೆ ಸಂಸ್ಥೆ ನೀಡಿರುವ ಉತ್ತರ ಚಿಂತೆಗೀಡು ಮಾಡುವಂತಿದೆ.

ಲಾಕ್​ಡೌನ್​ ಅವಧಿಯಲ್ಲಿನ ಅಸುರಕ್ಷಿತ ಸಂಭೋಗದಿಂದಾಗಿ ದೇಶದಲ್ಲಿ 85 ಸಾವಿರಕ್ಕೂ ಅಧಿಕ ಮಂದಿ ಏಯ್ಡ್ಸ್​ ಸೋಂಕಿಗೆ ಒಳಗಾಗಿದ್ದಾರೆ ಎಂದು ನ್ಯಾಕೋ ಅಂಕಿ-ಅಂಶ ತಿಳಿಸಿದೆ.

ಈ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 10,498, ಆಂಧ್ರಪ್ರದೇಶದಲ್ಲಿ 9521, ಕರ್ನಾಟಕದಲ್ಲಿ 8947, ಮಧ್ಯಪ್ರದೇಶದಲ್ಲಿ 3037 ಮತ್ತು ಪಶ್ಚಿಮ ಬಂಗಾಳದಲ್ಲಿ 2757 ಮಂದಿ ಏಯ್ಡ್ಸ್​ ಸೋಂಕಿಗೆ ಒಳಗಾಗಿದ್ದಾರೆ ಎಂದು ನ್ಯಾಕೋ ಹೇಳಿದೆ.

Leave a Comment

Your email address will not be published. Required fields are marked *