ಸಮಗ್ರ ನ್ಯೂಸ್: ದಕ್ಷಿಣ ಕನ್ನಡದ ಗುಂಡ್ಯ ಹೊಳೆಯಲ್ಲಿ ನೂರಾರು ಮೀನುಗಳು ಸತ್ತುಬಿದ್ದ ದೃಶ್ಯ ಬೆಳಕಿಗೆ ಬಂದಿದ್ದು, ಈ ದುರ್ಘಟನೆಯ ಮೇಲೆ ಗಮನ ಹರಿಸಿದ ಉಪ್ಪಿನಂಗಡಿ ಪೊಲೀಸರು ಆಂಧ್ರದ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಉದನೆ ತೂಗು ಸೇತುವೆ ಸಮೀಪ ಗುಂಡ್ಯ ಹೊಳೆಯಲ್ಲಿ ನೂರಾರು ಮೀನುಗಳು ಸತ್ತು ಬಿದ್ದಿದೆ ಮತ್ತು ನೀರಿಗೆ ತೋಟೆ ಹಾಕಿರುವುದರಿಂದ ಮೀನುಗಳು ಸತ್ತಿದೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ವಿಚಾರವಾಗಿ ಕಾರ್ಯಾಚರಣೆ ನಡೆಸಿದ ನೆಲ್ಯಾಡಿ ಹೊರ ಠಾಣೆ ಪೊಲೀಸರು ಉದನೆಯ ಕಳಪಾರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯ ಕೆಲಸಕ್ಕೆ ಬಂದಿದ್ದ ಆಂಧ್ರ ಮೂಲದ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.