ಸಮಗ್ರ ನ್ಯೂಸ್: ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಐಸ್‌ಕ್ರೀಂ ಪೆಟ್ಟಿಗೆಯೊಳಗೆ ಅಡಗಿ ಕುಳಿತು ಕೊಳ್ಳಲು ಮುಂದಾಗಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಮಸಗೆ ಗ್ರಾಮದಲ್ಲಿ ನಡೆದಿದೆ.
ನಾಗರಾಜು ಮತ್ತು ಚಿಕ್ಕದೇವಮ್ಮ ಎಂಬುವರ ಪುತ್ರಿ ಭಾಗ್ಯ (12), ರಾಜನಾಯಕ ಮತ್ತು ಗೌರಮ್ಮ ಎಂಬುವರ ಪುತ್ರಿ ಕಾವ್ಯ (7) ಮೃತ ಬಾಲಕಿಯರು.
ಮೃತ ಬಾಲಕಿಯರಾದ ಭಾಗ್ಯ ಹಾಗೂ ಕಾವ್ಯ ಬುಧವಾರ ಬೆಳಿಗ್ಗೆ ಶಾಲೆಗೆ ಬೇಸಿಗೆ ರಜೆ ಇದ್ದ ಕಾರಣ ಆಟವಾಡುತ್ತಿದ್ದರು. ಈ ವೇಳೆ ಕಣ್ಣಾಮುಚ್ಚಾಲೆ ಆಟವಾಡುವ ಸಂದರ್ಭ ಐಸ್ ಕ್ರೀಮ್ ಬಾಕ್ಸ್ ಒಳಗೆ ಅವಿತಿದ್ದಾರೆ.
ಈ ವೇಳೆ ಬಾಕ್ಸ್ ಲಾಕ್ ಆಗಿದ್ದು, ಬಾಕ್ಸ್ ಒಳಗೆ ಸೇರಿದ ಬಾಲೆಯರು ಹೊರಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಇವರೊಡನೆ ಆಟವಾಡುತ್ತಿದ್ದ ಇತರ ಮಕ್ಕಳು ಅಡಗಿರುವ ಬಾಲಕಿಯರಿಬ್ಬರು ಅರ್ಧ ಗಂಟೆಯಾದರೂ ಹೊರಬಾರದ ಕಾರಣ ಮೇಲಿನಿಂದ ಲಾಕ್ ತೆಗೆದಿದ್ದಾರೆ. ಆದರೆ ಆ ವೇಳೆಗಾಗಲೇ ಬಾಲಕಿಯರು ಉಸಿರು ಗಟ್ಟಿ ಸಾವನ್ನಪ್ಪಿದ್ದಾರೆ.