ಸಮಗ್ರ ನ್ಯೂಸ್: ರಥೋತ್ಸವದ ವೇಳೆ ಘೋರ ದುರಂತವೊಂದು ಸಂಭವಿಸಿದ್ದು, ವಿದ್ಯುತ್ ಹರಿದು 10 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಂಜಾವೂರು ಕಲಿಮೇಡು ದೇವಸ್ಥಾನದಲ್ಲಿ ನಡೆದಿದೆ.
ತಂಜಾವೂರಿನ ದೇವಾಲಯದ ರಥೋತ್ಸವದ ವೇಳೆ ವಿದ್ಯುತ್ ಹರಿದು 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ದೇವಾಲಯದ ರಥೋತ್ಸವದ ವಿದ್ಯುತ್ ವೈರ್ ಗೆ ಡಿಕ್ಕಿ ಹೊಡೆದ ಪರಿಣಾಮ 10 ಜನರು ಮೃತಪಟ್ಟಿದ್ದು, ಗಾಯಗೊಂಡ ಮೂವರನ್ನು ತಂಜಾವೂರು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.