ಸಮಗ್ರ ನ್ಯೂಸ್: ಹೊಳೆಯಲ್ಲಿ ಸ್ನಾನ ಮಾಡಲೆಂದು ಹೋದ ಸಂದರ್ಭದಲ್ಲಿ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅರಂತೋಡು ಗ್ರಾಮದ ಕುಕ್ಕುಂಬಳ ಎಂಬಲ್ಲಿ ಇಂದು ಸಂಜೆ ವರದಿಯಾಗಿದೆ. ಮೃತಪಟ್ಟ ಬಾಲಕನನ್ನು ಮಂಗಳೂರಿನ ಮನ್ವಿತ್(12) ಎಂದು ಗುರುತಿಸಲಾಗಿದೆ.
ಅರಂತೋಡಿನ ಬಾಲಕೃಷ್ಣ ಶೆಟ್ಟಿಯವರ ಪುತ್ರಿಯನ್ನು ಮಂಗಳೂರಿಗೆ ವಿವಾಹ ಮಾಡಿಕೊಡಲಾಗಿದ್ದು, ಅವರ ಮಗ ಮನ್ವಿತ್ ಅಜ್ಜನ ಮನೆಗೆ ಬಂದ ಸಂದರ್ಭದಲ್ಲಿ ಕುಕ್ಕುಂಬಳ ಎಂಬಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದು ಮೃತಪಟ್ಟರೆಂದು ತಿಳಿದುಬಂದಿದೆ.
ಮೃತದೇಹವನ್ನು ಶರತ್, ನಿಧೀಶ್, ತಾಜ್ ಅರಂತೋಡು, ಮುನೀರ್ ನೀರಿನಿಂದ ಹೊರತೆಗೆಯಲು ಸಹಕರಿಸಿದರು.