ಸಮಗ್ರ ನ್ಯೂಸ್: ಸಿಡಿಲು ಬಡಿದು ಯುವಕಯೋರ್ವ ಮೃತಪಟ್ಟ ಘಟನೆ ಪಾಂಡವರಕಲ್ಲು ಎಂಬಲ್ಲಿ ನಡೆದಿದೆ.
ಪಾಂಡವರಕಲ್ಲು ನಿವಾಸಿ ಲೋಕೇಶ್ ಎಂಬವರು ಮೃತ ವ್ಯಕ್ತಿ.ಕೂಲಿ ಕೆಲಸ ಮಾಡುತ್ತಿದ್ದ ಲೋಕೇಶ್ ಅವರು ರಜೆಯಲ್ಲಿದ್ದರು.ಮನೆಯಲ್ಲಿ ಮಧ್ಯಾಹ್ನ ಊಟ ಮುಗಿಸಿ ಮಲಗಿದ್ದ ವೇಳೆ ಸುಮಾರು ಮೂರು ಗಂಟೆಯ ವೇಳೆ ಬಡಿದ ಸಿಡಲಿನ ಆಘಾತಕ್ಕೆ ಇವರು ಮೃತಪಟ್ಟದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.