ಸಮಗ್ರ ನ್ಯೂಸ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೇಲೆ ಎತ್ತು ದಾಳಿಗೆ ಯತ್ನಿಸಿದ್ದು, ಸಿಎಂ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಳಿಕೋಟೆ ತಾಲೂಕಿನ ಕೊಡಗನೂರ ಗ್ರಾಮಕ್ಕೆ ಭೇಟಿ ನೀಡಿದ ಸಿಎಂಗೆ ಬರಮಾಡಿ ರೈತರು ಜೋಡೆತ್ತುಗಳನ್ನು ನೀಡಿದರು. ಬಳಿಕ ಎತ್ತುಗಳಿಗೆ ಪೂಜಿಸೋ ವೇಳೆಯಲ್ಲಿ ಬೆದರಿ ಕೋಪಗೊಂಡು ಎತ್ತು ತಿವಿಯುವ ಹಂತಕ್ಕೆ ಬಂದಿತ್ತು. ಘಟನೆಯಲ್ಲಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಬೊಮ್ಮಾಯಿ ಪಾರಾಗಿದ್ದಾರೆ.
ಅಲ್ಲಿಯೇ ಇದ್ದಂತ ಎಎಸ್ಪಿಯವರು ಎತ್ತಿನ ಕೊಂಬನ್ನು ಇಡಿದು, ಬೊಮ್ಮಾಯಿಯನ್ನು ತಿವಿತದಿಂದ ಪಾರು ಮಾಡಿದರು. ಕೆಲ ಕಾಲ ಈ ಘಟನೆಯಿಂದ ಸ್ಥಳದಲ್ಲಿ ಆತಂಕ ಉಂಟಾಗಿತ್ತು.