ಮಂಗಳೂರು: ಠಾಣೆಯಲ್ಲೇ ಹೊಡೆದಾಡಿಕೊಂಡ ಪೊಲೀಸ್ ಸಿಬ್ಬಂದಿ

ಓರ್ವ ಆಸ್ಪತ್ರೆಗೆ ದಾಖಲು

Ad Widget ... ..

ಸಮಗ್ರ ನ್ಯೂಸ್: ಮಂಗಳೂರು ನಗರದ ಸಂಚಾರ ಪಶ್ಚಿಮ ಠಾಣೆಯಲ್ಲಿ ಸೋಮವಾರ ಬೆಳಗ್ಗೆ ಹಿರಿಯ ಮತ್ತು ಕಿರಿಯ ಪೊಲೀಸ್ ಸಿಬ್ಬಂದಿಯ ಮಧ್ಯೆ ಹೊಡೆದಾಟ ನಡೆದಿದ್ದು, ಗಾಯಾಳು ಹಿರಿಯ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ.

Ad Widget

ಸೋಮವಾರ ಬೆಳಗ್ಗಿನ ಗಸ್ತು ಕರ್ತವ್ಯಕ್ಕೆ ಸಂಬಂಧಿಸಿ ಠಾಣೆಗೆ ಆಗಮಿಸಿದ ಕಿರಿಯ ಸಿಬ್ಬಂದಿ, ಹಿರಿಯ ಸಿಬ್ಬಂದಿಯ ಮಧ್ಯೆ ರೇಗಾಡಿ ಹಲ್ಲೆ ನಡೆಸಿದ್ದಾರೆ . ಬಳಿಕ ಅಲ್ಲಿದ್ದ ಇತರ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಈ ಹಿಂದೆಯೂ ಕಿರಿಯ ಸಿಬ್ಬಂದಿಯ ಮೇಲೆ ಅನುಚಿತ ವರ್ತನೆಯ ಆರೋಪ ಕೇಳಿಬಂದಿತ್ತು.

ಈ ಕುರಿತು ಅಧೀನ ಅಧಿಕಾರಿಗಳ ವರದಿ ಪಡೆದು ಸೂಕ್ತ ವಿಚಾರಣೆಯ ಬಳಿಕ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *