Ad Widget .

ಭೀಕರ ಪ್ರಾಕೃತಿಕ ದುರಂತ| ಸಿಡಿಲು ಬಡಿದು ಛಿದ್ರಗೊಳ್ತು ಮಹಿಳೆಯ‌ ದೇಹ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಭೀಕರ ಪ್ರಾಕೃತಿಕ ದುರಂತವೊಂದು ಸಂಭವಿಸಿದ್ದು, ಇಬ್ಬರು ಸಿಡಿಲಿನಿಂದಾಗಿ ಸಾವಿಗೀಡಾಗಿದ್ದಾರೆ.

Ad Widget . Ad Widget .

ಇಂದು ಮಧ್ಯಾಹ್ನ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದ ತೆಲಗಿ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಹಣಮಂತ ಸತ್ತಿಗೇರಿ (40) ಸಿಡಿಲಪ್ಪಳಿಸಿದ ಪರಿಣಾಮವಾಗಿ ಸ್ಥಳದಲ್ಲೇ ಸಾವಿಗೀಡಾಗಿದ್ದರು. ಇದರ ಬೆನ್ನಿಗೆ ಬೆಳಗಾವಿಯಲ್ಲೂ ಅಂಥದ್ದೇ ಒಂದು ಪ್ರಕರಣ ನಡೆದಿದೆ.

Ad Widget . Ad Widget .

ಬೆಳಗಾವಿ ಜಿಲ್ಲೆಯ ಕೆಲವೆಡೆ ಇಂದು ಗುಡುಗು-ಸಿಡಿಲು ಸಮೇತ ಭಾರಿ ಮಳೆಯಾಗಿದ್ದು, ಭಾರಿ ಸಿಡಿಲೊಂದು ರೈತ ಮಹಿಳೆಯನ್ನು ಬಲಿ ಪಡೆದಿದೆ. ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದ ಮಲ್ಲಮ್ಮ ಕಲ್ಮೇಶ ವಟವಟಿ (38) ಎಂಬಾಕೆ ಸಾವಿಗೀಡಾದವರು.

ಇವರು ಗ್ರಾಮದ ಹೊರವಲಯದ ತಮ್ಮ ಹೊಲದಲ್ಲಿ ಜಾನುವಾರುಗಳಿಗಾಗಿ ಮೇವು ತೆಗೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಸಿಡಿಲಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ಈಕೆಯ ಹೊಟ್ಟೆ ಛಿದ್ರಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಘಟನೆ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *