ಸಮಗ್ರ ನ್ಯೂಸ್: ದೇಶಾದ್ಯಂತ ಕೋವಿಡ್‌ನ ನಾಲ್ಕನೆಯ ಅಲೆಯು ಹಬ್ಬುವ ಭೀತಿ ಆವರಿಸಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಕರ್ನಾಟಕ ಕೋವಿಡ್ ಟಾಸ್ಕ್‌ಫೋರ್ಸ್‌ನ ಸಲಹೆಯಂತೆ ಕರ್ನಾಟಕ ಸರಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ.
ಹೊಸ ಮಾರ್ಗಸೂಚಿಗಳು ಹೀಗಿವೆ:
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ.
ಸಾರ್ವಜನಿಕ ಸ್ಥಳದಲ್ಲಿ ದೈಹಿಕ ಅಂತರ ಪಾಲನೆ ಕಡ್ಡಾಯ.
ಪ್ರಯಾಣದ ವೇಳೆ ಮಾಸ್ಕ್ ನ್ನು ಕಡ್ಡಾಯವಾಗಿ ಧರಿಸಬೇಕು.
ಕರ್ತವ್ಯದ ವೇಳೆ ಮಾಸ್ಕ್ ಧರಿಸಿ ನಿಯಮ ಪಾಲಿಸಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡವನ್ನು ವಿಧಿಸಲಾಗುತ್ತದೆ.
ಸಮಗ್ರ ಸಮಾಚಾರ ಕಳಕಳಿ: ಸಾಂಕ್ರಾಮಿಕ ಹರಡುವ ಮುನ್ನ ಎಚ್ಚರಿಕೆ ವಹಿಸುವುದೇ ಕ್ಷೇಮ. ಮಾಸ್ಕ್ ಧರಿಸಿ, ಕೋವಿಡ್‌ನಿಂದ ದೂರವಿರಿ