ಮಂಗಳೂರು: ಅಪ್ರಾಪ್ತೆ ಹುಡುಗಿಗೆ ಕರೆ ಮಾಡಿ ಮನೆಯಲ್ಲಿ ಯಾರ್‍ಯಾರಿದ್ದಾರೆ ಎಂದ ಬಸ್ ನಿರ್ವಾಹಕ| ತಾಯಿಯಿಂದ ಹಿಗ್ಗಾಮುಗ್ಗಾ ಥಳಿತ

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಗೆ ಮೊಬೈಲ್ ನಂಬರ್ ನೀಡಿದ್ದಲ್ಲದೆ ಕರೆ ಮಾಡಿ ಮಾತನಾಡಿದ ಬಸ್ ನಿರ್ವಾಹಕನೋರ್ವನಿಗೆ ಬಾಲಕಿಯ ತಾಯಿ ಹಿಗ್ಗಾಮುಗ್ಗ ಥಳಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

Ad Widget ... ..

ಮಂಗಳೂರಿನಲ್ಲಿ 8ನೇ ತರಗತಿ ಓದುತ್ತಿರುವ ಬಾಲಕಿಯೋರ್ವಳು ಬಸ್‌ನಲ್ಲಿ ಸಂಚರಿಸುತ್ತಿದ್ದಾಗ ಮಾತನಾಡಿಸಿದ ಬಸ್ ನಿರ್ವಾಹಕ ಬಳಿಕ ಮೊಬೈಲ್ ನಂಬರ್‌ನ್ನು ಆಕೆಗೆ ನೀಡಿದ್ದಾನೆ. ಅಲ್ಲದೆ, ಬಾಲಕಿಯ ಮನೆಗೆ ಕರೆ ಮಾಡಿ ಬಾಲಕಿಯೊಂದಿಗೆ ಮಾತನಾಡಿ ಮನೆಯಲ್ಲಿ ಯಾರ್‍ಯಾರಿದ್ದಾರೆ ಎಂದು ಕೇಳಿದ್ದಾನೆ. ಇದರಿಂದ ಕೆರಳಿದ ಬಾಲಕಿಯ ತಾಯಿ ನಿರ್ವಾಹಕನನ್ನು ಭೇಟಿಯಾಗಿ ಆತನಿಗೆ ಹಿಗ್ಗಾಮಗ್ಗ ಥಳಿಸಿದ್ದಾಳೆ. ಬಾಲಕಿ ಒಂದೇ ಬಾರಿ ಈ ಬಸ್‌ನಲ್ಲಿ ಸಂಚರಿಸಿದ್ದು, ಆಗಲೇ ಮೊಬೈಲ್ ನಂಬರ್‍ ನೀಡಿದ್ದ ಎನ್ನಲಾಗಿದೆ.

Ad Widget

Leave a Comment

Your email address will not be published. Required fields are marked *