ಬೆಳ್ತಂಗಡಿ: ಆದಿವಾಸಿ ಮಹಿಳೆಯ ಅರೆಬೆತ್ತಲೆಗೊಳಿಸಿ ಹಲ್ಲೆ; ಬಿಜೆಪಿ ಮುಖಂಡ ಸಹಿತ 9 ಮಂದಿ‌ ಬಂಧನ

ಸಮಗ್ರ ನ್ಯೂಸ್: ಜಾಗದ ತಕರಾರಿನ ವಿಚಾರದಲ್ಲಿ ಆದಿವಾಸಿ ಮಹಿಳೆಯನ್ನು ಅರೆಬೆತ್ತಲೆ ಗೊಳಿಸಿ ಹಲ್ಲೆ ನಡೆಸಿದ ಬಿಜೆಪಿ ಮುಖಂಡ ಸೇರಿದಂತೆ 9 ಮಂದಿ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರಿಪಳ್ಳ ಎಂಬಲ್ಲಿ ಘಟನೆ ನಡೆದಿದೆ.

Ad Widget ... ..

ನೆರೆಹೊರೆಯ ಮನೆಯವರ ಜಾಗದ ತಕರಾರಿನ ಹಿನ್ನಲೆಯಲ್ಲಿ ತಂಡದಿಂದ ಮಹಿಳೆಯರ ಬಟ್ಟೆ ಹರಿದು ಅರೆ ನಗ್ನಗೊಳಿಸಿ ಹಲ್ಲೆ ಮಾಡಲಾಗಿದೆ.

Ad Widget

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣಾ ಪೊಲೀಸರು ಬಿಜೆಪಿ ಎಸ್‌ಟಿ ಮೋರ್ಚಾದ ಅಧ್ಯಕ್ಷ ಸೇರಿದಂತೆ 9 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಸಂದೀಪ್, ಸಂತೋಷ್, ಗುಲಾಬಿ, ಕುಸುಮ, ಸುಗುಣ, ಲೋಕಯ್ಯ, ಅನಿಲ್, ಲಲಿತ, ಚೆನ್ನಕೇಶವ ಎಂಬವರ ವಿರುದ್ದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಜಾಗದ ವಿವಾದ ಕುರಿತಂತೆ ಮಹಿಳೆಯೊರ್ವರ ಮೇಲೆ ಹಲ್ಲೆನಡೆಸಿದ್ದು, ಈ ಘಟನೆ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Leave a Comment

Your email address will not be published. Required fields are marked *