Ad Widget .

ತುಮಕೂರು: ದಲಿತ ಯುವಕರನ್ನು ಥಳಿಸಿ ಕೊಲೆ

ಸಮಗ್ರ ನ್ಯೂಸ್: ತುಮಕೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಇಬ್ಬರು ದಲಿತ ಯುವಕರಿಗೆ ಕಿರುಕುಳ ನೀಡಿ ಹತ್ಯೆ ಮಾಡಲಾಗಿದೆ. ಮೃತರನ್ನು ತುಮಕೂರಿನ ಗಿರೀಶ್ ಮೂಡಲ ಗಿರಿಯಪ್ಪ ಮತ್ತು ಮಂಚಲದೊರೆ ನಿವಾಸಿ ಗಿರೀಶ್ (32) ಎಂದು ಗುರುತಿಸಲಾಗಿದೆ.

Ad Widget . Ad Widget .

ಮೂಡಲಗಿರಿಯಪ್ಪನ ಮೃತದೇಹ ಹೊಲದಲ್ಲಿ ಪತ್ತೆಯಾಗಿದ್ದರೆ, ಮತ್ತೋರ್ವನ ಮೃತದೇಹ ಕೆರೆಯೊಂದರಲ್ಲಿ ತೇಲುವ ಸ್ಥಿತಿಯಲ್ಲಿ ಕಂಡುಬಂದಿದೆ.

Ad Widget . Ad Widget .

ಗುರುವಾರ ರಾತ್ರಿ ಗ್ರಾಮಸ್ಥರು ಸ್ಥಳೀಯ ದೇವರ ಉತ್ಸವ ನಡೆಸುತ್ತಿದ್ದಾಗ ಪ್ರಕರಣದ ಪ್ರಮುಖ ಆರೋಪಿ ನಂದೀಶ್ ಗಿರೀಶ್ ಮನೆಗೆ ಹೋಗಿ, ಮನವೊಲಿಸಿ ಕರೆದುಕೊಂಡು ಬಂದಿದ್ದಾನೆ. ನಂತರ ತನ್ನ ಸ್ನೇಹಿತರು ಕಾಯುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು, ಹಂತಕರು ಆತನಿಗೆ ಒಣಗಿದ ತೆಂಗಿನ ಮರದ ಗರಿಗಳಿಗೆ ಬೆಂಕಿ ಹಚ್ಚಿ ದಲಿತ ಯುವಕರಿಗೆ ಸುಡುವ ಮೂಲಕ ಕಿರುಕುಳ ನೀಡಿದ್ದಾರೆ. ತದನಂತರ ಕ್ಲಬ್ ಗೆ ಕರೆದೊಯ್ಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಿರೀಶ್ ಮೂಡಲಗಿರಿಯಪ್ಪ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೋರ್ವ ಗಿರೀಶ್ ಮೃತದೇಹವನ್ನು ಕೆರೆಯೊಂದಕ್ಕೆ ಎಸೆಯಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಬರ್ಬರ ಹತ್ಯೆಯಿಂದಾಗಿ ಊರಿನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ದಾಳಿಗೆ ಕಾರಣ ತಿಳಿದುಬಂದಿಲ್ಲ. ಮೊಬೈಕ್ ಕಳ್ಳತನ ಮತ್ತು ಅಡಿಕೆ ಕಳ್ಳತನಕ್ಕೆ ಸಂಬಂಧಿಸಿದಂತೆ ದಲಿತ ಯುವಕರು ಹಂತಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು ಎನ್ನಲಾಗಿದೆ

Leave a Comment

Your email address will not be published. Required fields are marked *