ಸಮಗ್ರ ನ್ಯೂಸ್: ಸರಕಾರಗಳು ಹಮ್ಮಿಕೊಂಡ ಸ್ವಚ್ಚತಾ ಆಂದೋಲನವು ಬಹಳ ಉತ್ತಮವಾಗಿ ನಡೆಯುತ್ತಿದ್ದಾರೆ ನಾಗರಿಕರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದು ಸ್ವಚ್ಚತಾ ಆಂದೋಲನಕ್ಕೆ ಅಡ್ಡಿ ಉಂಟುಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ತಾಲೂಕು ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ.
ನಗರಗಳ ಸುತ್ತಮುತ್ತಲಿನ ವ್ಯಾಪಾರಿಗಳು ತ್ಯಾಜ್ಯ ವಸ್ತುಗಳನ್ನು ಮತ್ತು ಕೋಳಿ ತ್ಯಾಜ್ಯ ಗಳನ್ನು ಎಲ್ಲೆಂದರಲ್ಲಿ ರಸ್ತೆಗಳ ಬದಿಯಲ್ಲಿ ಚೆಲ್ಲಿ ನಾಗರಿಕರಿಗೆ ತೊಂದರೆ ಕೊಡುವುದರೊಂದಿಗೆ ಸರಕಾರದ ಸ್ವಚ್ಚತಾ ಆಂದೋಲನ ಎಂಬ ಪರಿಕಲ್ಪನೆ ಯನ್ನೇ ಬುಡಮೇಲು ಮಾಡುತ್ತಿದ್ದಾರೆ.ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಸೇರಿದಂತೆ ಕ್ಷೇತ್ರಗಳಿಗೆ ಬರುವ ಭಕ್ತಾದಿಗಳು ಮರಗಳ ಕೆಳಗೆ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುವ ಪರಿಪಾಠ ವಿದೆ.

ಇಂತಹ ಕಡೆಗಳಲ್ಲಿ ಕೆಲವರು ತಾವು ತಂದ ಆಹಾರ ವಸ್ತುಗಳನ್ನು ತಿನ್ನುತ್ತಾರೆ. ಸಾರ್ವಜನಿಕರು ವಿವಿಧ ಬಗೆಯ ತ್ಯಾಜ್ಯ ಗಳನ್ನು ಈ ರೀತಿ ಸಾರ್ವಜನಿಕ ವಾಗಿ ಚೆಲ್ಲುವಾಗ ಅದು ಭಕ್ತಾದಿಗಳಿಗೆ ತುಂಬಾ ತೊಂದರೆ ಯಾಗುತ್ತದೆ. ಪರಿಸರವನ್ನು ಕೆಡಿಸುವ ತ್ಯಾಜ್ಯ ಚೆಲ್ಲುವ ಸಮಾಜದ್ರೋಹಿ ಗಳನ್ನು ಪತ್ತೆ ಹಚ್ಚಿ ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಪ್ರಶಾಂತ್ ರೈ ಮರುವಂಜ ಆಗ್ರಹಿಸಿದ್ದಾರೆ.
