Ad Widget .

ಇಂದಿನಿಂದ ಎಸ್ಎಸ್ಎಲ್ ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಆರಂಭ

ಸಮಗ್ರ ನ್ಯೂಸ್: ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಈ ಬಾರಿಯ ಎಸ್ ಎಸ್ ಎಲ್‌ ಸಿ ಮುಖ್ಯ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಜಿಲ್ಲಾಕೇಂದ್ರಗಳಲ್ಲಿ ಇಂದಿನಿಂದ ಆರಂಭಗೊಳ್ಳಲಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮೇ ತಿಂಗಳ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಕಳೆದ ಬಾರಿ ಕೋವಿಡ್ ಕಾರಣದಿಂದಾಗಿ ಓಎಂಆರ್ ಆಧಾರಿತ ಉತ್ತರ ಪತ್ರಿಕೆಗಳಿದ್ದ ಕಾರಣ ಜಿಲ್ಲಾ ಕೇಂದ್ರಗಳಲ್ಲಿ ಮೌಲ್ಯಮಾಪನದ ವ್ಯವಸ್ಥೆ ಇರಲಿಲ್ಲ‌.
ಈ ಬಾರಿ ಒಟ್ಟು 234 ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಲಿದೆ. ಈ ಕಾರ್ಯಕ್ಕಾಗಿ 63,796 ಶಿಕ್ಷಕರನ್ನು ನಿಯೋಜಿಸಲಾಗಿದೆ.

Ad Widget . Ad Widget . Ad Widget .

ಮೌಲ್ಯಮಾಪನ ಪ್ರಕ್ರಿಯೆಯು 23 ರಿಂದ ಶುರುವಾಗಿ ಮೇ 1-2 ರೊಳಗೆ ಪೂರ್ಣಗೊಳ್ಳಲಿದೆ. ಮೇ 2 ಅಥವಾ 3 ನೇ ವಾರದೊಳಗೆ ಪರೀಕ್ಷೆಯ ಫಲಿತಾಂಶ ಪ್ರಕಟಿಸುವ ನಿರೀಕ್ಷೆ ಇದೆ.

ಎಸ್ಎಸ್ಎಲ್​ಸಿ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಮೌಲ್ಯಮಾಪಕರು, ಸಿಬ್ಬಂದಿಯ ಸಂಭಾವನೆ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಕಳೆದ ವರ್ಷ 22 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಈ ಬಾರಿ ಅದನ್ನ‌ 5% ಹೆಚ್ಚಳ ಮಾಡಲಾಗಿದೆ.

ಪರಿಷ್ಕತ ದರ ಹೀಗಿದೆ..
*ಜಂಟಿ ಮುಖ್ಯ ಪರೀಕ್ಷಕರು- 7270 ರೂ.
*ಉಪ ಮುಖ್ಯ ಪರೀಕ್ಷಕರು- 5464 ರೂ.
ಉತ್ತರ ಪತ್ರಿಕೆ ಮೌಲ್ಯಮಾಪನ ದರಗಳು: (ಪ್ರತಿ ಪತ್ರಿಕೆಗೆ)* ಪ್ರಥಮ ಭಾಷೆ- 23 ರೂ.

  • ದ್ವಿತೀಯ/ತೃತೀಯ ಭಾಷೆ- 21 ರೂ.
  • ಐಚ್ಛಿಕ ವಿಷಯಗಳು- 21 ರೂ.
    ಭತ್ಯೆ1) ದಿನಭತ್ಯೆ (ಬೆಂಗಳೂರು)- 596
    2) ದಿನ ಭತ್ಯೆ (ಇತರೆ ಸ್ಥಳ)- 469
    3) ಸ್ಥಳೀಯ ಭತ್ಯೆ( ಬೆಂಗಳೂರು)- 234
    4) ಸ್ಥಳೀಯ ಭತ್ಯೆ( ಇತರೆ ಸ್ಥಳಗಳು)- 189
    5) ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ-4515
    6) ಕ್ಯಾಂಪ್ ಸಹಾಯಕರು- 1260
    7) ಡಿ ದರ್ಜೆ ಸಿಬ್ಬಂದಿ- 630

Leave a Comment

Your email address will not be published. Required fields are marked *