Ad Widget .

ಪ್ರೇಯಸಿ ಜೊತೆ ಬೈಕ್ ನಲ್ಲಿ “ಲಿಪ್ ಲಾಕ್” ಮಾಡಿದ ಪ್ರಿಯಕರ ಪೊಲೀಸ್ ಠಾಣೆಯೊಳಗೆ “ಲಾಕ್”

ಸಮಗ್ರ ನ್ಯೂಸ್: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ರಸ್ತೆಯಲ್ಲಿ ಬೈಕ್ ಟ್ಯಾಂಕ್ ಮೇಲೆ ಹುಡುಗಿಯನ್ನು ಕೂರಿಸಿಕೊಂಡು ಲಿಪ್ ಲಾಕ್ ಮಾಡುತ್ತಾ ಬೈಕ್ ಚಲಾಯಿಸಿದ ಸವಾರನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬೈಕ್ ಮೇಲೆ ಸವಾರನಿಗೆ ಎದುರಾಗಿ ಕುಳಿತಿದ್ದ ಹುಡುಗಿ ಆತನನನ್ನು ಬಿಗಿಯಾಗಿ ತಬ್ಬಿಕೊಂಡು, ಪರಸ್ಪರ ಚುಂಬಿಸುವ ದೃಶ್ಯಗಳ ವಿಡಿಯೋ ವೈರಲ್ ಆಗಿತ್ತು.

Ad Widget . Ad Widget .

ಎ.21ರಂದು ಮಧ್ಯಾಹ್ನ ಈ ಪ್ರಕರಣ ನಡೆದಿತ್ತು. ಬೈಕ್ ಹಿಂಭಾಗದಲ್ಲಿ ಸಂಚರಿಸುತ್ತಿದ್ದವರು ಈ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಸಾರ್ವಜನಿಕರಿಂದ ಈ ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

Ad Widget . Ad Widget .

ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡ ನಗರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಶುಕ್ರವಾರ ಬೈಕ್ ನೋಂದಣಿ ಸಂಖ್ಯೆ ಆಧರಿಸಿ, ಅದರ ಮಾಲೀಕನನ್ನು ಪತ್ತೆ ಹಚ್ಚಿ, ಆರೋಪಿ ಸ್ವಾಮಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Comment

Your email address will not be published. Required fields are marked *