Ad Widget .

ಮಂಗಳೂರು: ಮಳಲಿ ಜುಮಾ ಮಸೀದಿ ಕೆಡವದಂತೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ

ಸಮಗ್ರ ನ್ಯೂಸ್: ಮಂಗಳೂರಿನ ತೆಂಕ ಉಳಿಪಾಡಿ ಗ್ರಾಪಂ ವ್ಯಾಪ್ತಿಯ ಮಳಲಿಪೇಟೆಯ ಪುರಾತನ ಜುಮಾ ಮಸೀದಿಯ ಹಳೆಯ ಕಟ್ಟಡವನ್ನು ಕೆಡವದಂತೆ ಮಂಗಳೂರು ಮೂರನೇ ಅಡಿಷನಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಶುಕ್ರವಾರ ತಾತ್ಕಾಲಿಕ ಆದೇಶ ನೀಡಿದೆ.

Ad Widget . Ad Widget .

ಮಳಲಿಪೇಟೆಯ ಮಸೀದಿಯ ನವೀಕರಣಕ್ಕೆ ಸಂಘಪರಿವಾರದ ಕಾರ್ಯಕರ್ತರು ಗುರುವಾರ ಅಡ್ಡಿಪಡಿಸಿದ್ದರಲ್ಲದೆ, ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಗ್ರಾಪಂಗೆ ಲಿಖಿತ ದೂರು ನೀಡಿದ್ದರು. ಈ ಮಧ್ಯೆ ಬಜರಂಗದಳ-ವಿಎಚ್‌ಪಿ ಮುಖಂಡರು ಮಂಗಳೂರಿನ ಸಿವಿಲ್ ನ್ಯಾಯಾಲಯದ ಮೊರೆ ಹೋಗಿ ನವೀಕರಣಕ್ಕೆ ಅನುಮತಿ ನೀಡಬಾರದು ಎಂದು ಮನವಿ ಸಲ್ಲಿಸಿದ್ದರು.

Ad Widget . Ad Widget .

ಮನವಿಯನ್ನು ಸ್ವೀಕರಿಸಿದ ನ್ಯಾಯಾಲಯವು ಮುಂದಿನ ಆದೇಶದವರೆಗೆ ಮಸೀದಿಯ ಹಳೆಯ ಕಟ್ಟಡವನ್ನು ಕೆಡವಬಾರದು ಎಂದು ಮಸೀದಿಯ ಆಡಳಿತ ಸಮಿತಿಗೆ ತಾತ್ಕಾಲಿಕವಾಗಿ ನಿರ್ಬಂಧಕಾಜ್ಞೆ ಹೊರಡಿಸಿದೆ. ಅಲ್ಲದೆ ಮುಂದಿನ ವಿಚಾರಣೆಯನ್ನು ಜೂ.3ಕ್ಕೆ ನಿಗದಿಪಡಿಸಿದೆ.

ವಿವಾದ ಆರಂಭವಾಗುತ್ತಲೇ ಜಿಲ್ಲಾಧಿಕಾರಿಯು ಮಂಗಳೂರು ತಹಶೀಲ್ದಾರರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಅಲ್ಲದೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಅದರ ಮಧ್ಯೆಯೇ ನ್ಯಾಯಾಲಯ ನಿರ್ಬಂಧಕಾಜ್ಞೆ ಹೊರಡಿಸಿದೆ.

Leave a Comment

Your email address will not be published. Required fields are marked *