Ad Widget .

ಅರಣ್ಯಕ್ಕೆ ಬೆಂಕಿ ಹಾಕಿದವರು ಸರ್ವನಾಶವಾಗಲೆಂದು ದೇವರಿಗೆ ಹರಕೆ ಹೊತ್ತ ಗ್ರಾಮಸ್ಥರು| ಸಿಂಧಿಗೆರೆ ಪರಿಸರಾಸಕ್ತರಿಂದ ವಿಶಿಷ್ಟ ಬ್ಯಾನರ್ ಅಳವಡಿಕೆ

ಸಮಗ್ರ ನ್ಯೂಸ್: ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಡೆಗಟ್ಟಲು ಅರಣ್ಯ ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದೆ. ಇಲಾಖೆ ವ್ಯಾಪ್ತಿಯ ಕಾರ್ಯಗಳ ಜೊತೆಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸವೂ ನಡೆದಿದೆ. ಆದರೆ ಕಿಡಿಗೇಡಿಗಳ ಕೃತ್ಯಕ್ಕೆ ಹಾಗೂ ಮೂಢನಂಬಿಕೆಯ ಕಾರಣಕ್ಕೆ ಇನ್ನು ಅಲ್ಲಲ್ಲಿ ಬೆಂಕಿ ಅವಘಡಗಳು ಕಾಣಿಸಿಕೊಳ್ಳುತ್ತಿದ್ದು ತಾಲೂಕಿನ ಸಿಂದಿಗೆರೆ ಗ್ರಾಮಸ್ಥರ ಪರಿಸರಾಸಕ್ತರು ಈಗ ದೇವರ ಮೊರೆ ಹೋಗಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಅರಣ್ಯಕ್ಕೆ ಬೆಂಕಿ ಬೀಳುವುದನ್ನು ತಡೆಗಟ್ಟಲು ದೇವರ ಮೊರೆ ಅಂದುಕೊಂಡರೆ ಇದು ನಿಜಕ್ಕೂ ಸತ್ಯ. ಇತ್ತೀಚೆಗೆ ಅರಣ್ಯ ಇಲಾಖೆ ಚಿಕ್ಕಮಗಳೂರು ವಲಯ ತಮ್ಮ ವ್ಯಾಪ್ತಿಯಲ್ಲಿ ಬೆಂಕಿ ಅವಘಡಗಳನ್ನು ತಪ್ಪಿಸಲು ಡ್ರೋಣ್ ಮೊರೆಹೋಗಿತ್ತು. ಸೂಕ್ಷ್ಮ ಅರಣ್ಯಗಳ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ ನಡೆಸಿ ಕಾಡ್ಗಿಚ್ಚಿಗೆ ಕಾರಣವಾಗುವವರ ಮೇಲೆ ಹದ್ದಿನ ಕಣ್ಣಿಡಲಾಗಿತ್ತು. ಇದರ ಜೊತೆಗೆ ಹಲವು ಯೋಜನೆಗಳನ್ನು ರೂಪಿಸಿದ್ದರೂ ಬೆಂಕಿ ಅವಘಡಗಳು ಪತ್ತೆಯಾಗಿದ್ದವು. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಗಳು ತನ್ನೂರಿನ ಅರಣ್ಯ ಉಳಿಸಲು ಹೊಸ ತಂತ್ರದೊಂದಿಗೆ ಮುಂದಾಗಿದ್ದಾರೆ.

Ad Widget . Ad Widget . Ad Widget .

ಸಿಂದಿಗೆರೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಹೊಸ ತಂತ್ರಕ್ಕೆ ಮುಂದಾದ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಂದಿಗೆರೆ ಮೀಸಲು ಅರಣ್ಯಕ್ಕೆ ಬೆಂಕಿ ಹಾಕುವವರ ಜೀವನ ಸರ್ವನಾಶವಾಗಲೆಂದು ಶ್ರೀ ರೇವಣಸಿದ್ದೇಶ್ವರ ಹಾಗೂ ಪುರದಮ್ಮ ದೇವರಿಗೆ ಹರಕೆ ಹೊರಲಾಗಿದೆ ಎಂದು ಅರಣ್ಯ ವ್ಯಾಪ್ತಿಯ ದೇವಗೊಂಡನಹಳ್ಳಿ, ಕರಡಿಗವಿಮಠ, ಸಿಂದಿಗೆರೆ, ಎಸ್.ಬಿದರೆ, ಭೂಚೇನಹಳ್ಳಿ ಕಾವಲ್ ನ ಹಲವು ಕಡೆಗಳಲ್ಲಿ ಈ ರೀತಿಯ ಬ್ಯಾನರ್ ಅಳವಡಿಸಿದ್ದಾರೆ.

Leave a Comment

Your email address will not be published. Required fields are marked *