Ad Widget .

ಚಲಿಸುತ್ತಿರುವ ಬೈಕ್ ನಲ್ಲಿ ಪ್ರೇಮಿಗಳ ಲಿಪ್ ಲಾಕ್ | ಅಪಾಯ ಮೈಮೇಲೆ ಎಳೆದುಕೊಂಡ ಫೋಟೋ ವೈರಲ್!

ಸಮಗ್ರ ನ್ಯೂಸ್: ಚಲಿಸುತ್ತಿರುವ ಬೈಕ್‌ನಲ್ಲಿ ಎದುರು ಬದುರಾಗಿ ಕುಳಿತುಕೊಂಡು ಪ್ರೇಮಿಗಳಿಬ್ಬರು ರೊಮ್ಯಾನ್ಸ್ ಮಾಡುತ್ತಿರುವ ಮೂಲಕ ಹುಚ್ಚಾಟ ಮೆರೆದಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

Ad Widget . Ad Widget .

ಯುವತಿಯು ಬೈಕ್‌ನ ಪಂಪ್ ಮೇಲೆ ಬೈಕ್ ಚಾಲನೆ ಮಾಡುತ್ತಿರುವ ಯುವಕನಿಗೆ ಎದುರಾಗಿ ಕುಳಿತುಕೊಂಡು ರೊಮ್ಯಾನ್ಸ್ ಮಾಡಿಕೊಂಡು ತೆರಳುತ್ತಿರುವ ವೀಡಿಯೋ ವೈರಲ್ ಆಗಿದ್ದು, ಸಾಮಾಜಿಕ ತಾಣಗಳಲ್ಲಿ ಪ್ರೇಮಿಗಳಿಬ್ಬರ ಹುಚ್ಚಾಟಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Ad Widget . Ad Widget .

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ವಾಹನ ಸಂಚಾರ ಹೆಚ್ಚಿರುವ ರಸ್ತೆಯಲ್ಲೇ ಈ ಘಟನೆ ನಡೆದಿದ್ದು, ಚಲಿಸುವ ಬೈಕ್‌‌ನಲ್ಲಿಯೇ ಪರಸ್ಪರ ಲಿಪ್‌ಲಾಕ್ ಮಾಡಿಕೊಂಡು ಜಾಲಿರೈಡ್ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ.

ರಸ್ತೆಯಲ್ಲಿ ಚಲಿಸುತ್ತಿರುವ ಇತರ ವಾಹನಗಳನ್ನು ಲೆಕ್ಕಿಸದೆ ಅಪಾಯವನ್ನು ಮೈಮೇಲೆ ಎಳೆದುಕೊಂಡು ಈ ಪ್ರೇಮಿಗಳಿಬ್ಬರು ಹುಚ್ಚಾಟ ಮೆರೆದಿದ್ದಾರೆ. ಸಾರ್ವಜನಿಕ ಪ್ರದೇಶ ಎಂಬ ಅರಿವೂ ಇಲ್ಲದಂತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ.

ಹಿಂಬದಿಯಿಂದ ಸಂಚರಿಸುತ್ತಿದ್ದವರು ಈ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಸದ್ಯ ಇಬ್ಬರ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸಾರ್ವಜನಿಕರು ಮತ್ತು ನೆಟ್ಟಿಗರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *