ಒಂದೇ ವಾರದಲ್ಲಿ 700 ಕೋಟಿ‌ ಬಾಚಿದ ಕೆಜಿಎಫ್-2

ಸಮಗ್ರ ಸಿನಿಮಾ: ರಾಕಿಂಗ್‌ ಸ್ಟಾರ್‌ ಯಶ್‌ ನಟಿಸಿರುವ ಪ್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್-2 ಚಿತ್ರ ಬಿಡುಗಡೆ ಆಗಿ ಒಂದು ವಾರ ಕಳೆದಿದ್ದು, ಈ ವಾರದಲ್ಲಿ 700 ಕೋಟಿ ಗಳಿಸಿದ್ದು, ಭಾರತೀಯ ಚಿತ್ರರಂಗದಲ್ಲೇ ಅತೀ ದೊಡ್ಡ ಓಪನಿಂಗ್‌ ಪಡೆದ 2ನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Ad Widget ... ..

ಕೆಜಿಎಫ್‌ ಮೊದಲ ಭಾಗದ ಚಿತ್ರ ಕನ್ನಡ ಚಿತ್ರರಂಗದ ಗಡಿಗಳನ್ನು ದಾಟಿ ಅತೀ ಹೆಚ್ಚು ಲಾಭ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

Ad Widget

ಆದರೆ ಕೆಜಿಎಫ್-‌2 ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಓಪನಿಂಗ್‌ ಪಡೆದ 2ನೇ ಚಿತ್ರ ಎಂಬ ದಾಖಲೆ ಬರೆದಿದೆ.

ಏಪ್ರಿಲ್‌ 14ರಂದು ಜಗತ್ತಿನಾದ್ಯಂತ ಬಿಡುಗಡೆ ಆದ ಕೆಜಿಎಫ್‌-2 ಏಳು ದಿನ ಪೂರೈಸಿದ್ದು ಪ್ರತಿ ದಿನ 100 ಕೋಟಿಯಂತೆ 719.30 ಕೋಟಿ ಕಲೆ ಹಾಕಿದೆ. ಇದೇ ರೀತಿ ಮುಂದುವರಿದರೆ 2 ವಾರ ಪೂರೈಸುವಷ್ಟರಲ್ಲಿ 1000 ಕೋಟಿ ರೂ. ಗಡಿ ದಾಟುವ ನಿರೀಕ್ಷೆಯಿದೆ.

ಬಾಹುಬಲಿ ಕನ್‌ ಕ್ಲೂಶನ್‌ ಚಿತ್ರ ಒಂದೇ ವಾರದಲ್ಲಿ 800 ಕೋಟಿ ರೂ.ಸಂಗ್ರಹಿಸಿ ಮೊದಲ ಸ್ಥಾನದಲ್ಲಿದ್ದರೆ, ಕೆಜಿಎಫ್-‌2, 719.30 ಕೋಟಿ ಸಂಗ್ರಹಿಸಿ 2ನೇ ಸ್ಥಾನದಲ್ಲಿದೆ.

ಹಿಂದಿಯಲ್ಲಿ 250 ಕೋಟಿ ಸಂಗ್ರಹಿಸಿದ್ದು ಅತ್ಯಂತ ವೇಗವಾಗಿ ಇಷ್ಟು ದೊಡ್ಡ ಮೊತ್ತ ಗಳಿಸಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಕೆಜಿಎಫ್‌-2 ಪಾತ್ರವಾಗಿದೆ.

Leave a Comment

Your email address will not be published. Required fields are marked *