Ad Widget .

ಮಗುವಿಗೆ ಜನ್ಮವಿತ್ತ 17ರ ಬಾಲಕಿ| ಅತ್ಯಾಚಾರ ಆರೋಪದಡಿ 12ರ ಬಾಲಕ ಅಂದರ್

ಸಮಗ್ರ ನ್ಯೂಸ್: 17 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿ, ಆಕೆ ಗರ್ಭವತಿಯಾಗಲು ಕಾರಣನಾದ 12 ವರ್ಷದ ಬಾಲಕನನ್ನು ತಮಿಳುನಾಡಿನ ತಂಜಾವೂರಿನ ಮಹಿಳಾ ಪೊಲೀಸರು ಬಂಧಿಸಿರುವ‌ ವಿಚಿತ್ರ ಘಟನೆ ನಡೆದಿದೆ.

Ad Widget . Ad Widget .

ಸಂತ್ರಸ್ತ ಹುಡುಗಿ ಮಗುವಿಗೆ ಜನ್ಮ ನೀಡಿರುವುದಾಗಿ ತಿಳಿದುಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Ad Widget . Ad Widget .

ಸಂತ್ರಸ್ತೆಯ ಹೇಳಿಕೆ ಆಧಾರದ ಮೇಲೆ ಬಾಲಕನನ್ನು ಬಂಧಿಸಿದ್ದು, ಈತನನ್ನು ಹೊರತುಪಡಿಸಿ, ಬೇರೆ ವ್ಯಕ್ತಿಗಳ ಶಾಮೀಲು ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತೆ ಮತ್ತು ಆರೋಪಿ ಬಾಲಕ ಇಬ್ಬರೂ ಕೂಡಾ ಶಾಲೆಯಿಂದ ಡ್ರಾಪ್ ಔಟ್ ಆಗಿದ್ದು, ಇಬ್ಬರು ಒಂದೇ ಗ್ರಾಮದಲ್ಲಿ ವಾಸಿಸುತ್ತಿದ್ದರು ಎಂದು ವರದಿ ಹೇಳಿದೆ. ಹೊಟ್ಟೆ ನೋವು ಎಂದು ಸಂತ್ರಸ್ತೆ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ವೈದ್ಯರು ಆಕೆಯನ್ನು ಪರೀಕ್ಷಿಸಿದಾಗ ಒಂಬತ್ತು ತಿಂಗಳ ಗರ್ಭಿಣಿ ಎಂಬುದು ಪತ್ತೆಯಾಗಿತ್ತು. ಆಕೆ ಅದೇ ದಿನ ಹೆಣ್ಣು ಮಗುವಿಗೆ ಜನ್ಮ ನೀಡಿರುವುದಾಗಿ ವರದಿ ತಿಳಿಸಿದೆ.

ಈ ಬಗ್ಗೆ ಆಸ್ಪತ್ರೆಯ ವೈದ್ಯರು ಮಹಿಳಾ ಪೊಲೀಸರಿಗೆ ವಿಷಯ ತಿಳಿಸಿದ್ದು, ಬಳಿಕ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದರು. ತಾನು ಗರ್ಭ ಧರಿಸಲು ಬಾಲಕ ಕಾರಣ ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಳು. ಆಕೆಯ ಆರೋಪದ ಮೇಲೆ 12 ವರ್ಷದ ಬಾಲಕನನ್ನು ಬಂಧಿಸಿ, ತಂಜಾವೂರಿನ ಬಾಲಾಪರಾಧ ಗೃಹಕ್ಕೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೈಜ್ಞಾನಿಕ ವಿಧಾನ ಮತ್ತು ಡಿಎನ್ ಎ ಪರೀಕ್ಷೆಯ ಮೂಲಕ ಬಾಲಕನ ವಯಸ್ಸನ್ನು ನಿರ್ಧರಿಸುವ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *