ಸುಕ್ಷೇತ್ರ ಸಜ್ಜಲಗುಡ್ಡದ ಸಜ್ಜಲಾಂಬೆ ಶರಣಮ್ಮ ದೇವಿ ಭಕ್ತಿಗೀತೆ ಮ್ಯೂಸಿಕ್ ಆಲ್ಬಮ್ ಬಿಡುಗಡೆ

Ad Widget ... ..

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಮಂಗಳೂರಿನ ಬೊಕ್ಕಪಟ್ಟಣದ ಅಬ್ಬಕ್ಕ ವಿಹಾರ ನೌಕೆಯಲ್ಲಿ ನಡೆದ ರಾಷ್ಟ್ರೀಯ ಸಾಹಿತ್ಯ ಸಮಾರಂಭದಲ್ಲಿ ಜ್ಯೋತಿಷಿ ಮತ್ತು ಸಾಹಿತಿ ಎಚ್ . ಭೀಮರಾವ್ ವಾಷ್ಠರ್ ರವರು ಸಾಹಿತ್ಯ ರಚಿಸಿ ಹಾಡಿರುವ ಸಜ್ಜಲಾಂಬೆ ಶ್ರೀ ಶರಣಮ್ಮ ತಾಯಿ ವಿಡಿಯೋ ಭಕ್ತಿಗೀತೆಯನ್ನು ಕರ್ನಾಟಕ ಸರಕಾರದ ಅನಿವಾಸಿ ಕನ್ನಡಿಗರ ಕೋಶ ಇದರ ಮಾಜಿ ಉಪಾಧ್ಯಕ್ಷರಾದ ಕ್ಯಾ . ಗಣೇಶ್ ಕಾರ್ಣಿಕ್ ರವರು ಬಿಡುಗಡೆ ಮಾಡಿದರು . ರಾಯಚೂರು ಜಿಲ್ಲೆಯ ಸಜ್ಜಲಗುಡ್ಡ ಸುಕ್ಷೇತ್ರದ ಈ ಹಾಡನ್ನು ಕಡಬದ ಶಶಿ ಗಿರಿವನ ರೆಕಾರ್ಡಿಂಗ್ ಸ್ಟುಡಿಯೋ ದಲ್ಲಿ ಧ್ವನಿ ಮುದ್ರಣ ಮಾಡಲಾಗಿದೆ .ಎಡಿಟಿಂಗ್ ನ್ನು ಬೆಂಗಳೂರಿನ ಲಕ್ಕೆಗೌಡ ಮತ್ತು ಉಜ್ವಲ್ ವಾಷ್ಠರ್ ಮಾಡಿದ್ದಾರೆ . ಕಾರ್ಯಕ್ರಮದಲ್ಲಿ ಬೆಂಗಳೂರಿನ ಡಾ.ಮನೋಜ್ ಶರ್ಮ ಗುರೂಜಿ , ಆದರ್ಶ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷರಾದ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ , ಮಂಜುನಾಥ್ ಸಾಗರ್ , ಬೆಂಗಳೂರಿನ ವಾಟಿಕಾ ಕ್ಲಬ್ ಮತ್ತು ರೆಸಾರ್ಟ್ ನ ಶ್ರೀ ಆರ್ ಕಾರ್ತಿಕ್ ರೆಡ್ಡಿ , ಡಾ.ಎಸ್ ಎಮ್ ಶಿವಪ್ರಕಾಶ್ , ಪ್ರೊ.ಪಿ ಎಲ್ ಧರ್ಮ , ಗೋಪಾಲ್ ಡಿ ರಾಥೋಡ್ ರವರು ಉಪಸ್ಥಿತರಿದ್ದರು.

Ad Widget

Leave a Comment

Your email address will not be published. Required fields are marked *