Ad Widget .

ಮಂಗಳೂರಿನಲ್ಲಿ ಹೆಣ ಬೀಳಿಸುತ್ತೇನೆಂದು ಪೋಸ್ಟ್ ಹಾಕಿದವ ಈಗ ಪೊಲೀಸ್ ಅತಿಥಿ

ಸಮಗ್ರ ನ್ಯೂಸ್: ಹಿಜಾಬ್ ಸಂಘರ್ಷದಿಂದ ಕರ್ನಾಟಕದಲ್ಲಿ ಧರ್ಮ ದಂಗಲ್ ಶುರುವಾಗಿದ್ದು, ಹಿಂದೂ-ಮುಸ್ಲಿಂ ಮಧ್ಯೆ ಒಂದಲ್ಲ ಒಂದು ರೀತಿಯಲ್ಲಿ ವಿವಾದಗಳು ನಡೆಯುತ್ತಲೇ ಇವೆ.

Ad Widget . Ad Widget .

ಈ ನಡುವೆ ‘ಮಂಗಳೂರಿನಲ್ಲಿ ಬೀಳಲಿದೆ ಮತ್ತೊಂದು ಹೆಣ.” ಎಂದು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ವೈರಲ್ ಆಗಿತ್ತು. ‘ಮಾರಿಗುಡಿ’ ಎಂಬ ಪೇಜ್ ನಲ್ಲಿ ಮುಹಮ್ಮದ್ ಅಝ್ಮಲ್ ಎನ್ನುವಾತ ಪೋಸ್ಟ್ ಹಾಕಿದ್ದ. ಈ ಮೂಲಕ ಎಬಿವಿಪಿ ಸಂಘಟನೆಗೆ ಸೇರಿದ ವಿದ್ಯಾರ್ಥಿಯೊಬ್ಬನಿಗೆ ಕೊಲೆ ಬೆದರಿಕೆ ಒಡ್ಡಿದ್ದ.

Ad Widget . Ad Widget .

ಈ ಪೋಸ್ಟ್ ಬೆನ್ನತ್ತಿದ ಮಂಗಳೂರು ಪೊಲೀಸರು ಮುಹಮ್ಮದ್ ಅಝ್ಮಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಮುಹಮ್ಮದ್ ಅಝ್ಮಲ್(20) ಬಂಧಿತ ಆರೋಪಿ. ಈತ ಇನ್ಸ್ಟಾಗ್ರಾಮ್, ಫೇಸ್‌ಬುಕ್‌ ಸೇರಿ ಹಲವಾರು ನಕಲಿ ಖಾತೆಗಳನ್ನು ರಚಿಸಿ ಕೊಲೆ ಬೆದರಿಕೆ ಒಡ್ಡಿದ್ದ. ಮಂಗಳೂರಿನ ರಥಬೀದಿ ದಯಾನಂದ ಪೈ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿರುದ್ದ ಮಾತನಾಡಿದ್ದ ವಿದ್ಯಾರ್ಥಿ ಸಾಯಿ ಸಂದೇಶ್ ಎಂಬಾತನಿಗೆ ಬೆದರಿಕೆ ಹಾಕಿದ್ದ.

Leave a Comment

Your email address will not be published. Required fields are marked *