Ad Widget .

ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗೋದು ಫಿಕ್ಸ್..

Ad Widget . Ad Widget .

ಸಮಗ್ರ ಡಿಜಿಟಲ್ ಡೆಸ್ಕ್: ತಂತ್ರಜ್ಞಾನ ಹೆಚ್ಚಾದಂತೆ ನಮ್ಮ ಕೆಲಸಗಳು ತುಂಬಾ ಸರಳವಾಗಿ ಆಗುತ್ತಿವೆ. ಇಂದಿನ ಕಾಲದಲ್ಲಿ ತಂತ್ರಜ್ಞಾನದ ಅತೀ ಬಳಕೆಯಿಂದ ಇಡೀ ವಿಶ್ವವೇ ನಮ್ಮ ಅಂಗೈಯಲ್ಲಿ ಇದ್ದಂತಾಗಿದೆ. ಅಷ್ಟರ ಮಟ್ಟಿಗೆ ಇಂದಿನ ಡಿಜಿಟಲ್‌ ಯುಗ ಮಾರ್ಪಾಡು ಹೊಂದಿದೆ. ಹೀಗೆ ಇಂದಿನ ಕಾಲಘಟ್ಟದಲ್ಲಿ ಬ್ಯಾಂಕ್‌ ಅಕೌಂಟ್‌ಗಳನ್ನು ಮನೆಯಲ್ಲೇ ಕುಳಿತು ಓಪನ್‌ ಮಾಡಬಹುದು . ಅಷ್ಟೇ ಯಾಕೆ ಮನೆಯಿಂದಲೇ ಸಾಲವನ್ನು ಪಡೆದುಕೊಳ್ಳುವ ಸೌಲಭ್ಯಗಳು ಇಂದು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇನ್ನು ಇದರ ನಡುವೆ ನಮ್ಮ ಕೆಲವೊಂದು ತಪ್ಪುಗಳಿಂದ ನಮ್ಮ ಬ್ಯಾಂಕ್‌ ಖಾತೆಗಳು ಇದ್ದಕ್ದಿದ್ದಂತೆ ನಿಷ್ಕ್ರಿಯಗೊಳ್ಳುತ್ತವೆ. ಯಾಕೆ ಹಾಗೆ? ಇಲ್ಲಿದೆ ಮಾಹಿತಿ

Ad Widget . Ad Widget .

ಅನೇಕ ಬಾರಿ ಜನರು ಬ್ಯಾಂಕ್ ಖಾತೆ ತೆರೆದ ನಂತರ ಯಾವುದೇ ರೀತಿಯ ವಹಿವಾಟು ನಡೆಸುವುದಿಲ್ಲ. ಹೀಗೆ ಮಾಡುವುದರಿಂದ ಅವರ ಬ್ಯಾಂಕ್ ಖಾತೆ ನಿಷ್ಕ್ರಿಯವಾಗುತ್ತದೆ.

RBI ಪ್ರಕಾರ, ಉಳಿತಾಯ ಅಥವಾ ಚಾಲ್ತಿ ಖಾತೆಯಲ್ಲಿ ನಮೂದಾಗಿರುವ ಬ್ಯಾಂಕ್‌ ಖಾತೆಗಳಲ್ಲಿ ಎರಡು ವರ್ಷಗಳವರೆಗೆ ಯಾವುದೇ ವಹಿವಾಟು ನಡೆಯದಿದ್ದರೆ, ಆ ಖಾತೆಯನ್ನು ನಿಷ್ಕ್ರಿಯ ಖಾತೆ ಎಂದು ಗುರುತಿಸಲಾಗುತ್ತದೆ. ಒಮ್ಮೆ ನಿಷ್ಕ್ರಿಯ ಖಾತೆ ಎಂದು ಬದಲಾದರೆ, ನಂತರ ಹತ್ತು ವರ್ಷಗಳವರೆಗೆ ಖಾತೆ ನಿಷ್ಕ್ರಿಯವಾಗಿಯೇ ಇರುತ್ತದೆ. ಅಂದರೆ ನಂತರ ಈ ಖಾತೆ ಮೂಲಕ ಯಾವುದೇ ವಹಿವಾಟು ನಡೆಸುವುದು ಸಾಧ್ಯವಾಗುವುದಿಲ್ಲ.

ಖಾತೆದಾರರ ಅಪಾಯದ ವರ್ಗವನ್ನು ಆಧರಿಸಿ ಬ್ಯಾಂಕ್ ಗ್ರಾಹಕರ ನಿಷ್ಕ್ರಿಯ ಬ್ಯಾಂಕ್ ಖಾತೆಗಳನ್ನು ಕ್ರಮಬದ್ಧಗೊಳಿಸಬಹುದು.

ಅವರು KYC ಡಾಕ್ಯುಮೆಂಟ್‌ಗಳನ್ನು ಸ್ವೀಕರಿಸಿದ ನಂತರ ನಿಷ್ಕ್ರಿಯ ಖಾತೆಗಳನ್ನು ನಿರ್ವಹಿಸಲು ಗ್ರಾಹಕರಿಗೆ ಅನುಮತಿಸಬಹುದು. ಇವುಗಳ ಜೊತೆಗೆ ಬ್ಯಾಂಕ್‌ಗಳು ವಿವರಗಳನ್ನು ಪರಿಶೀಲಿಸುತ್ತವೆ ಮತ್ತು ದಾಖಲೆಗಳ ಜೊತೆಗೆ ಖಾತೆದಾರರ ಸಹಿಯನ್ನು ಕೇಳುತ್ತವೆ. ಈ ಎಲ್ಲಾ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಖಾತೆಯು ಸಕ್ರಿಯವಾಗಿರಲಿ ಅಥವಾ ಇಲ್ಲದಿರಲಿ ಉಳಿತಾಯ ಬ್ಯಾಂಕ್ ಖಾತೆಗಳ ಮೇಲಿನ ಬಡ್ಡಿಯನ್ನು ಸಕಾಲಿಕವಾಗಿ ಜಮಾ ಮಾಡಬೇಕು ಎಂಬುದನ್ನು ಗ್ರಾಹಕರು ಗಮನಿಸಬೇಕು. ಸೆಂಟ್ರಲ್ ಬ್ಯಾಂಕ್ ಪ್ರಕಾರ, ಬ್ಯಾಂಕ್‌ನಲ್ಲಿ ಕ್ಲೈಮ್ ಮಾಡದೆ ಉಳಿದಿರುವ ಮೊತ್ತವು ಉಳಿತಾಯ ಬ್ಯಾಂಕ್ ಬಡ್ಡಿದರವನ್ನು ಆಕರ್ಷಿಸುತ್ತದೆ, ಆದಾಯವನ್ನು ಪಾವತಿಸದಿದ್ದಲ್ಲಿ ಮತ್ತು FD ಪಕ್ವವಾಗುತ್ತದೆ.
ಹೆಚ್ಚು ಬಳಸದ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ಅದನ್ನು ಕ್ಲೋಸ್ ಮಾಡಿ. ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದರೆ, ಅವುಗಳನ್ನು ನಿರ್ವಹಿಸುವಾಗ ವಿಶೇಷ ಗಮನ ಕೊಡುವುದು ಅಗತ್ಯ. ನಿಮ್ಮ ಖಾತೆಯು ನಿಷ್ಕ್ರಿಯ ಖಾತೆಯಾಗಿ ಬದಲಾಗಿದ್ದರೆ, ತಕ್ಷಣವೇ ನಿಮ್ಮ ಹೋಮ್ ಬ್ರಾಂಚ್ ಅನ್ನು ಸಂಪರ್ಕಿಸಿ.

Leave a Comment

Your email address will not be published. Required fields are marked *