Ad Widget .

‘ಕುಸುಮ ಕರೀತಿದಾಳೆ ಓಡಿ ಹೋಗೋ ವಿಶಾಲ್’!? ನೋಟಿನಲ್ಲೊಂದು ರೋಚಕ ಲವ್ ಕಹಾನಿ

ಸಮಗ್ರ ನ್ಯೂಸ್: ಕೆಲವರ ಕೈಗೆ ಪೆನ್ ಸಿಕ್ಕಿದ್ರೆ ಸಾಕು, ಏನಾದ್ರೂ ಗೀಚ್ತಾ ಇರ್ತಾರೆ. ಇನ್ನು ಕೆಲವರಿಗೆ ಕರೆನ್ಸಿ ನೋಟಿನಲ್ಲಿ ಏನಾದ್ರೂ ಬರೆಯುವ ಹುಚ್ಚಿರುತ್ತದೆ. ಇತ್ತೀಚಿನ ದಿನಗಳಲ್ಲಿ ನೋಟುಗಳಲ್ಲಿ ಯಾರೂ ಸಂದೇಶ ಬರೆಯುವುದಿಲ್ಲ. ಆದರೆ, ಇಲ್ಲೊಂದೆಡೆ 10 ರೂಪಾಯಿಯ ನೋಟಿನಲ್ಲಿ ಯುವತಿಯೊಬ್ಬಳು ತನ್ನ ಪ್ರೇಮಿಗೆ ಬರೆದಿರುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

Ad Widget . Ad Widget .

ಯುವತಿಯೊಬ್ಬಳು 10 ರೂ. ನೋಟಿನಲ್ಲಿ ವಿಶಾಲ್, ನನ್ನ ಮದುವೆ ಏಪ್ರಿಲ್ 26ರಂದು ನಿಶ್ಚಯವಾಗಿದೆ. ದಯವಿಟ್ಟು ನನ್ನನ್ನು ಕರೆದುಕೊಂಡು ಹೋಗು. ನಾವು ಓಡಿ ಹೋಗೋಣ. ನಾನು ನಿನ್ನನ್ನು ಪ್ರೀತಿಸುತ್ತೇನೆ, ನಿಮ್ಮ ಕುಸುಮ್ ಎಂದು ಬರೆಯಲಾಗಿದೆ. ಇದರ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದ್ದು, ಮೆಮ್ಸ್ ಸೃಷ್ಟಿಯಾಗಿದೆ.

Ad Widget . Ad Widget .

ಏಪ್ರಿಲ್ 26 ರಂದು ಯುವತಿಯೊಬ್ಬಳು ಬೇರೊಬ್ಬರೊಂದಿಗೆ ಮದುವೆಯಾಗಲಿರುವ ಕಾರಣ ತನ್ನ ಪ್ರೇಮಿ ವಿಶಾಲ್‌ನನ್ನು ತನ್ನನ್ನು ಕರೆದುಕೊಂಡು ಹೋಗುವಂತೆ ನೋಟಿನಲ್ಲಿ ಸಂದೇಶ ಬರೆದಿದ್ದಾಳೆ. ತನ್ನ ಪ್ರೇಮಿಗಾಗಿ ನೋಟಿನಲ್ಲಿ ಬರೆದ ಸಂದೇಶವು ಇಂಟರ್ನೆಟ್ ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಟ್ವಿಟ್ಟರ್ ಬಳಕೆದಾರರು ಚಿತ್ರವನ್ನು ಹಂಚಿಕೊಂಡಿದ್ದು, ಮೆಮೆಗಳ ಸುರಿಮಳೆಗೈದಿದ್ದಾರೆ. ದಯವಿಟ್ಟು ನಿಮಗೆ ತಿಳಿದಿರುವ ವಿಶಾಲ್ ನನ್ನು ಟ್ಯಾಗ್ ಮಾಡಿ ಅಂತೆಲ್ಲಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ನೆಟ್ಟಿಗರು ವಿಶಾಲ್ ಹೆಸರಿನ ಹಲವರನ್ನು ಟ್ಯಾಗ್ ಮಾಡಿ ತಮಾಷೆ ಮಾಡಿದ್ದಾರೆ.

Leave a Comment

Your email address will not be published. Required fields are marked *