Ad Widget .

ಮದುವೆ ಆಮಂತ್ರಣದಲ್ಲಿ ಕೆಜಿಎಫ್-2 ಡೈಲಾಗ್| ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಸಮಗ್ರ ನ್ಯೂಸ್: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯಿಸಿರುವ ʼಕೆಜಿಎಫ್‌ – 2ʼ ಚಿತ್ರ ವಿಶ್ವದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಭಾರತ ಒಂದರಲ್ಲೇ 6 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು, ಬಾಕ್ಸಾಫೀಸ್‌ ಕೊಳ್ಳೆ ಹೊಡೆಯುತ್ತಿದೆ.

Ad Widget . Ad Widget .

ಪ‌್ರಶಾಂತ್‌ ನೀಲ್‌ ನಿರ್ದೇಶನದ ಕೆಜಿಎಫ್‌ -2 ಚಿತ್ರದಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌, ಸಂಜಯ್‌ ದತ್‌, ರವೀನಾ ಟಂಡನ್‌, ಪ್ರಕಾಶ್‌ ರಾಜ್ ಸೇರಿದಂತೆ ಹಲವು ಖ್ಯಾತ ನಟರು ಅಭಿನಯಿಸಿದ್ದು, ವಿಜಯ್‌ ಕಿರಂಗದೂರು ಅವರು ತಮ್ಮ ಹೊಂಬಾಳೆ ಫಿಲ್ಸ್ಮ್‌ ಬ್ಯಾನರ್‌ ನಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಭಾರತದಾದ್ಯಂತ ಕೆಜಿಎಫ್‌ – 2 ಕ್ರೇಜ್‌ ಮುಂದುವರೆದಿದ್ದು, ಅದರಲ್ಲೂ ಚಿತ್ರದ ಐಕಾನಿಕ್‌ ಡೈಲಾಗ್‌ “Violence, Violence, Violence. I Don’t Like It. I Avoid! But. Violence Likes Me, I Can’t Avoid!” ಗೆ ಎಲ್ಲರೂ ಫಿದಾ ಆಗಿದ್ದಾರೆ.

Ad Widget . Ad Widget .

ಕೆಜಿಎಫ್‌ – 2 ಚಿತ್ರವನ್ನು ಮುಗಿಬಿದ್ದು ಮತ್ತೆ ಮತ್ತೆ ವೀಕ್ಷಿಸುತ್ತಿರುವ ಅಭಿಮಾನಿಗಳು ಚಿತ್ರ ಆರಂಭಕ್ಕೂ ಮುನ್ನ ನೆಚ್ಚಿನ ನಟನ ಜನಪ್ರಿಯ ಡೈಲಾಗ್‌ ಹೇಳಿ ಖುಷಿ ಪಡುತ್ತಿದ್ದಾರೆ. ಇಲ್ಲೊಬ್ಬ ಅಭಿಮಾನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ರಾಕಿಂಗ್‌ ಸ್ಟಾರ್‌ ಯಶ್‌ ಅವರ ಫೇಮಸ್‌ ಡೈಲಾಗ್‌ ಅನ್ನು ಸ್ವಲ್ಪ ಮಾರ್ಪಡಿಸಿ ತಮ್ಮ ಮದುವೆ ಆಮಂತ್ರಣ ಪತ್ರಿಕೆ ಮೇಲೆ ಮುದ್ರಿಸಿಕೊಂಡಿದ್ದಾರೆ. ಈ ಮದುವೆ ಆಮಂತ್ರಣ ಪತ್ರಿಕೆಯ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ವೈರಲ್‌ ಆಗಿದೆ.

ಬೆಳಗಾವಿಯ ಚಂದ್ರಶೇಖರ್‌ ಎಂಬವರು ಮೇ 13 ರಂದು ಶ್ವೇತಾ ಅವರನ್ನು ವಿವಾಹವಾಗಲಿದ್ದು, ತಮ್ಮ ವಿವಾಹ ಆಮಂತ್ರಣ ಪತ್ರದಲ್ಲಿ “Marriage, Marriage, Marriage, I Don’t Like It, I Avoid, But My Relatives Like marriage, I Can’t Avoid.” ಎಂದು ಪ್ರಿಂಟ್‌ ಮಾಡಿಸಿಕೊಂಡಿದ್ದಾರೆ. ಅದು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Leave a Comment

Your email address will not be published. Required fields are marked *