Ad Widget .

ಕಾಂಗ್ರೆಸ್ ನಾಲಾಯಕ್ ಪಕ್ಷ, ರಾಹುಲ್ ಗಾಂಧಿ ಇಮ್ಮೆಚ್ಯೂರ್ಡ್ ಪರ್ಸನ್| ಡಿಕೆ, ಸಿದ್ದುನಿಂದ ರಾಜ್ಯ ಕಾಂಗ್ರೆಸ್ ಮುಕ್ತ | ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ಮೇಲೆ ಮುಗಿಬಿದ್ದ ರಾಜ್ಯ ನಾಯಕರು

ಸಮಗ್ರ ನ್ಯೂಸ್: ವಿಜಯನಗರದಲ್ಲಿ ಮೊನ್ನೆಯಷ್ಟೇ ರಾಜ್ಯ ಕಾರ್ಯಕಾರಿಣಿ ಕಂಡಿದ್ದ ಬಿಜೆಪಿ ಎ.19ರಂದು ಗಡಿ ಜಿಲ್ಲೆ ಬಳ್ಳಾರಿಯಲ್ಲಿ ಸಮಾವೇಶ ಹಮ್ಮಿಕೊಂಡಿತ್ತು. ಸಮಾವೇಶದಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ತೆಗಳಿ, ಪ್ರಧಾನಿ ಮೋದಿಯನ್ನ ಕೊಂಡಾಡಿದರು. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ನಿಂದ ಲೈಟ್ ಕಂಬ ನಿಲ್ಲಿಸಿದ್ರೂ ಗೆಲ್ಲುತ್ತೆ ಎನ್ನಲಾಗುತಿತ್ತು. ಇವತ್ತು ಕಾಂಗ್ರೆಸ್ ನಿಂದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನಿಂತರೂ ಸೋಲುತ್ತಾರೆ! ದೇಶಾದ್ಯಂತ ಪರಿವರ್ತನೆಯಾಗಿದ್ದು, ಕಾಂಗ್ರೆಸ್ ಮುಕ್ತವಾಗ್ತಿದೆ‌ ಎಂದು ಹೇಳಿದರು.

Ad Widget . Ad Widget .

ಹಿಂದೆ ಭಾರತ ದೇಶದ ಮೇಲೆ ಪಾಕಿಸ್ತಾನ ಆಕ್ರಮಣ ಮಾಡಿತ್ತು. ಆದರೆ ಈಗ ಮೋದಿ ಸರ್ಜಿಕಲ್ ಸ್ಟ್ರೈಕ್ ಮಾಡಿದ ಮೇಲೆ ಎಲ್ಲರೂ ತಣ್ಣಗಾಗಿದ್ದಾರೆ. ಇಡೀ ಜಗತ್ತಿನಲ್ಲಿ ಉಚಿತ ಕೋವಿಡ್ ಲಸಿಕೆ ಕೊಟ್ಟಿದ್ದು ಮೋದಿ ಸರ್ಕಾರ ಮಾತ್ರ. ಕಾಂಗ್ರೆಸ್ ನಾಯಕರು ಮೊದಲು ಟೀಕೆ ಮಾಡಿ, ರಾತ್ರಿ ಹೊತ್ತಲ್ಲಿ ಕದ್ದು ಮುಚ್ಚಿ ಲಸಿಕೆ ಹಾಕಿಸಿಕೊಂಡರು! ಇಡೀ ಜಗತ್ತು ಭಾರತದತ್ತ ನೋಡ್ತಾ ಇದೆ, ಭಾರತ ಭಾರತೀಯ ಜನತಾ ಪಕ್ಷದತ್ತ ನೋಡ್ತಿದೆ. ಕಾಂಗ್ರೆಸ್ ವಿರೋಧ ಪಕ್ಷ ಅಲ್ಲ, ನಾಲಾಯಕ್ ಪಕ್ಷ ಎಂದು ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ಮಾಡಿದರು.

Ad Widget . Ad Widget .

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಮಾವೇಶದಲ್ಲಿ ಮಾತನಾಡಿ, ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲಕಚ್ಚಿದೆ. ಮೋದಿಯವರು ಹೇಳಿದಂತೆ ಕಾಂಗ್ರೆಸ್ ಮುಕ್ತ ಭಾರತವಾಗಿದೆ ಎಂದು ಹೇಳಿದರು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಟಾರ್ಗೆಟ್ ಹೊಂದಿದ್ದೇವೆ. ನಮ್ಮ ಅಧ್ಯಕ್ಷ ಜೆ.ಪಿ. ನಡ್ಡಾ ನಮಗೆ ಟಾರ್ಗೆಟ್​ ಕೊಟ್ಟಿದ್ದಾರೆ. ನರೇಂದ್ರ ಮೋದಿಯವರು ವಿಶ್ವ ನಾಯಕರಾಗಿದ್ದಾರೆ. ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸುವಂತೆ ಮೋದಿಗೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕರೆ ಮಾಡಿ ಮನವಿ ಮಾಡಿದ್ದಾರೆ. ಮೋದಿಯವರಿಗೆ ಪರ್ಯಾಯ ನಾಯಕರು ಯಾರೂ ಇಲ್ಲ ಎಂದು ಬಳ್ಳಾರಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಮಾವೇಶದಲ್ಲಿ ಶೆಟ್ಟರ್ ನುಡಿದರು.

ಪಂಜಾಬ್ ನಲ್ಲಿ ಸಿದ್ದು, ಕರ್ನಾಟಕದಲ್ಲಿ ಸಿದ್ದು – ಕಾಂಗ್ರೆಸ್ ಮುಗಿಸೋಕೆ ಈ ಇಬ್ಬರೇ ಸಾಕು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ಗೆ ಹೊಂದಾಣಿಕೆ ಇಲ್ಲ, ಇವರು ಜಗಳದ ಮೂಲಕವೇ ಕಾಂಗ್ರೆಸ್ ಗೆ ಇತಿಶ್ರೀ ಹೇಳುತ್ತಾರೆ‌. ಬಳ್ಳಾರಿಯಲ್ಲಿ ಈ ಹಿಂದೆ ಕಾಂಗ್ರೆಸ್ ನ ಗೂಂಡಾಗಿರಿ ಇತ್ತು. ಅದರ ನಡುವೆ ಬಿಜೆಪಿ ಜಯ ಗಳಿಸಿ ಈ ಮಟ್ಟಕ್ಕೆ ತಲುಪಿದೆ. ಬಳ್ಳಾರಿಗೆ ಕಾಂಗ್ರೆಸ್ ಗಿಂತ ಬಿಜೆಪಿಯ ಕೊಡುಗೆ ಅಪಾರವಾಗಿದೆ. ಕಲ್ಯಾಣ ಕರ್ನಾಟಕಾದ್ಯಂತ ಬಿಜೆಪಿ ಪ್ರಬಲವಾಗಿದೆ. 2023 ರಲ್ಲಿ ಬಿಜೆಪಿ 150 ಸೀಟು ಗೆದ್ದು, ಅಧಿಕಾರ ಹಿಡಿಯೋದು ಪಕ್ಕಾ ಎಂದು ಜಗದೀಶ್ ಶೆಟ್ಟರ್ ಹೇಳಿದರು.

Leave a Comment

Your email address will not be published. Required fields are marked *